Select Your Language

Notifications

webdunia
webdunia
webdunia
webdunia

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ
ಬೆಂಗಳೂರು , ಮಂಗಳವಾರ, 24 ಸೆಪ್ಟಂಬರ್ 2019 (07:30 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಮನೆಯಲ್ಲಿ ನಿಮಗೆ ಅನುಕೂಲಕರವಾದ ವಾತಾವರಣವಿರಲಿದೆ. ನಿಮ್ಮ ಆಕಾಂಕ್ಷೆಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ಆದರೆ ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡದಿಂದ ಹೈರಾಣಾಗುವಿರಿ. ಆರ್ಥಿಕವಾಗಿ ಆದಾಯಕ್ಕೇನೂ ಕೊರತೆಯಾಗದು.

ವೃಷಭ: ಹೊಸ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ. ಸಂಗಾತಿಯ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಮನಸ್ಸು ಮಾಡುವರು. ಹಳೆಯ ಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗುವುದು.

ಮಿಥುನ: ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಫಲ ಸಿಗಲಿದೆ. ಪ್ರೇಮಿಗಳು ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಸ್ತ್ರೀಯರಿಗೆ ಸಂತಾನ ಫಲ ಸೂಚನೆಗಳಿವೆ. ಸ್ವ ಉದ್ಯೋಗಿಗಳು ಲಾಭ ಪಡೆಯುವರು. ಅಧಿಕಾರಿ ವರ್ಗದವರಿಗೆ ಕಾರ್ಯದೊತ್ತಡವಿರಲಿದೆ.

ಕರ್ಕಟಕ: ವಿಪರೀತ ಯಾರನ್ನೂ ನಂಬಿ ವ್ಯವಹಾರ ಮಾಡಲು ಹೋಗಬೇಡಿ. ನಂಬಿಕೆ ದ್ರೋಹವೆಸಗುವವರು ನಿಮ್ಮ ಬೆನ್ನ ಹಿಂದೆಯೇ ಇರುತ್ತಾರೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಚಿಂತನೆ ನಡೆಸುವಿರಿ. ಸಹೋದರರಿಂದ ಕಿರಿ ಕಿರಿ ಇರಬಹುದು. ತಾಳ್ಮೆಯಿರಲಿ.

ಸಿಂಹ: ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಿಸುವಂತಹ ಘಟನೆಗಳು ನಡೆಯಲಿವೆ. ಸಂಗಾತಿಯ ಪ್ರೀತಿ ಸಂಪಾದಿಸುವಿರಿ. ಮಕ್ಕಳಿಂದ ಸಂತಸದ ವಾರ್ತೆ ಕೇಳಿಬರುವುದು. ಕೃಷಿಕರಿಗೆ ಕೊಂಚ ಹಿನ್ನಡೆಯಾದೀತು. ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗದ ಯೋಗವಿದೆ.

ಕನ್ಯಾ: ಆಸ್ತಿ ವಿಚಾರದಲ್ಲಿ ಕೋರ್ಟು ಮೆಟ್ಟಿಲೇರಿದ್ದರೆ ನಿಮ್ಮ ಪರವಾಗಿ ತೀರ್ಪು ಬರುವುದು. ದಾಯಾದಿಗಳೊಂದಿಗಿನ ಮನಸ್ತಾಪಗಳು ದೂರವಾಗಲಿದೆ. ಕೌಟುಂಬಿಕವಾಗಿ ನೆಮ್ಮದಿಯ ದಿನ. ವ್ಯವಹಾರದಲ್ಲಿ ಹೊಸ ಪ್ರಯತ್ನಕ್ಕೆ ಕೈಹಾಕುವಿರಿ. ಸಂಚಾರದಲ್ಲಿ ಜಾಗ್ರತೆಯಿಂದಿರಿ.

ತುಲಾ: ನಿರುದ್ಯೋಗಿಗಳು ಉದ್ಯೋಗ ವಿಚಾರವಾಗಿ ದೂರ ಸಂಚಾರ ಮಾಡಬೇಕಾಗಬಹುದು. ಸ್ವ ಉದ್ಯೋಗಿಗಳಿಗೆ ಲಾಭವಾಗಲಿದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ದೇಹಾರೋಗ್ಯದಲ್ಲಿ ಏರುಪೇರಾದೀತು. ಎಚ್ಚರಿಕೆ.

ವೃಶ್ಚಿಕ: ಕಳೆದು ಹೋಯಿತೆಂದು ಅಂದುಕೊಂಡಿದ್ದ ವಸ್ತುಗಳು ಮರಳಿ ಕೈಗೆ ಸಿಗುವುದು. ಅನಿರೀಕ್ಷಿತವಾಗಿ ಮನೆಗೆ ನೆಂಟರ ಆಗಮನವಾಗಲಿದೆ. ನೂತನ ದಂಪತಿಗಳಿಗೆ ಸಂತಾನ ಫಲ ಭಾಗ್ಯವಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಪ್ರಶಂಸೆಗೊಳಗಾಗುವಿರಿ.

ಧನು: ಸಂಗಾತಿಯೊಂದಿಗೆ ದುಡುಕಿ ಮಾತನಾಡಿ ಮನಸ್ಸಿಗೆ ಬೇಸರ ಮಾಡುವಿರಿ. ತಾಳ್ಮೆಯಿಂದಿರಿ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಕಂಡುಬರುವುದು. ಮನೆಗೆ ಹೊಸ ವಸ್ತುಗಳ ಖರೀದಿ ಮಾಡುವಿರಿ. ಶೈಕ್ಷಣಿಕ ರಂಗದಲ್ಲಿರುವವರಿಗೆ ಶುಭಫಲವಿದೆ.

ಮಕರ: ಸಹೋದರರೊಂದಿಗೆ ಆಸ್ತಿ ವಿಚಾರವಾಗಿ ಮನಸ್ತಾಪವಾಗುವುದು. ಹಿರಿಯರ ಸಲಹೆಗಳಿಗೆ ಕಿವಿಗೊಡುವುದು ಸೂಕ್ತ. ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲಗಳು ಕಾಡಬಹುದು. ದೇವಾಲಯ ಸಂದರ್ಶನ ಯೋಗವಿದೆ. ಕಿರು ಸಂಚಾರ ಯೋಗವಿದೆ.

ಕುಂಭ: ಮೈ ಕೈ ನೋವಿನಂತಹ ಆರೋಗ್ಯ ಸಮಸ್ಯೆಗಳು ಯಾತನೆ ಕೊಡುವುದು. ದೈನಂದಿನ ಕೆಲಸಗಳಿಗೆ ಅಡ್ಡಿ ಎದುರಾಗಬಹುದು. ಸಂಗಾತಿಯ ಕೆಲವು ನಿರ್ಧಾರಗಳು ಮನಸ್ಸಿಗೆ ಕಿರಿ ಕಿರಿ ಉಂಟುಮಾಡುತ್ತವೆ. ಇಷ್ಟಮಿತ್ರರ ಭೇಟಿಯಿಂದ ಮನಸ್ಸಿಗೆ ನೆಮ್ಮದಿಯಾಗುವುದು.

ಮೀನ: ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಂದ ದೈನಂದಿನ ಕೆಲಸದಲ್ಲಿ ಆಲಸ್ಯತನ ಕಂಡುಬರುವುದು. ಮಹಿಳಾ ಉದ್ಯೋಗಿಗಳಿಗೆ ಶುಭಫಲಗಳಿವೆ. ಕ್ಷುಲ್ಲುಕ  ವಿಚಾರಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ವಿದ್ಯಾರ್ಥಿಗಳಲ್ಲಿ ಆಲಸ್ಯತನ ಕಂಡುಬರುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ಕಟಕ ರಾಶಿಯ ಪ್ರೇಮಿಯ ಸ್ವಭಾವ ಹೇಗಿರುತ್ತದೆ?