Webdunia - Bharat's app for daily news and videos

Install App

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

Webdunia
ಮಂಗಳವಾರ, 16 ಜುಲೈ 2019 (09:05 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ವರ್ತನೆಯಿಂದ ಅಸಹನೆಯಾಗುವುದು. ಮಹಿಳೆಯರಿಂದ ವಂಚನೆಗೊಳಗಾಗುವ ಭೀತಿಯಿದೆ. ಋಣಾತ್ಮಕ ಚಿಂತನೆಗಳಿಗೆ ಅವಕಾಶಕೊಡಬೇಡಿ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ವೃಷಭ: ಸಾಂಸಾರಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸುವಿರಿ. ಆರ್ಥಿಕವಾಗಿ ಧನಾಗಮನವಾದಷ್ಟೇ ಖರ್ಚೂ ಇರಲಿದೆ.

ಮಿಥುನ: ವ್ಯಾಪಾರ ವಹಿವಾಟಿನಲ್ಲಿ ನಷ್ಟ ಅನುಭವಿಸಬೇಕಾದೀತು. ಸಾಂಸಾರಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ಕರ್ಕಟಕ: ವಿದ್ಯಾರ್ಥಿಗಳು ಉತ್ತಮ ಕೆಲಸದಿಂದ ಶಿಕ್ಷಕರ ಪ್ರಶಂಸೆ ಪಡೆಯುವರು. ಸಾಧು ಸಂತರ ಭೇಟಿಯಾಗುವ ಸಾಧ್ಯತೆಯಿದೆ. ಸ್ವ ಉದ್ಯೋಗಿಗಳು ಆರ್ಥಿಕವಾಗಿ ಲಾಭ ಗಳಿಸುವರು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಸಿಂಹ: ಗೃಹೋಪಯೋಗಿ ವಸ್ತುಗಳಿಗೆ ಧನ ವ್ಯಯವಾದೀತು. ವಿವಾಹ ಬೇಡವೆಂದಿದ್ದವರಿಗೆ ಅನಿರೀಕ್ಷಿತ ರೂಪದಲ್ಲಿ ವಿವಾಹ ಕೂಡಿಬರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಹೊಸ ಮಿತ್ರರು ಸಿಗಲಿದ್ದಾರೆ.

ಕನ್ಯಾ: ಸಂಗಾತಿಯ ಮನೋಕಾಮನೆಗಳನ್ನು ಪೂರೈಸಲು ಧನ ವ್ಯಯವಾಗುವುದು. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ವ್ಯಾಪಾರದಲ್ಲಿ ಲಾಭವಾಗಲಿದೆ.

ತುಲಾ: ದಾಯಾದಿಗಳೊಂದಿಗಿನ ಆಸ್ತಿ ಕಲಹಗಳು ದೂರವಾಗುವುದು. ವೃತ್ತಿರಂಗದಲ್ಲಿ ನಿಮಗೆ ಅನುಕೂಲಕರವಾದ ವಾತಾವರಣವಿರಲಿದೆ. ಆರ್ಥಿಕವಾಗಿ ಧನಾಗಮನವಾದಷ್ಟೇ ಖರ್ಚೂ ಇರಲಿದೆ. ಎಚ್ಚರಿಕೆ ಅಗತ್ಯ.

ವೃಶ್ಚಿಕ: ನಿಮ್ಮ ಮನೋಬಲವನ್ನು ದೃಢವಾಗಿರಿಸುವ ಸಮಯವಿದು. ಚಿತ್ತ ಚಾಂಚಲ್ಯಕ್ಕೆ ಅವಕಾಶ ಕೊಡಬೇಡಿ. ಉದ್ಯೋಗ ಬದಲಾವಣೆಗೆ ಚಿಂತನೆ ಮಾಡುವಿರಿ. ವೈಯಕ್ತಿಕವಾಗಿಯೂ ಆರೋಗ್ಯ ಸಮಸ್ಯೆ ಕಾಡಬಹುದು. ತಾಳ್ಮೆಯಿಂದಿರಿ.

ಧನು: ಸಾಂಸಾರಿಕವಾಗಿ ತಾಳ್ಮೆಯಿಂದಿದ್ದಷ್ಟೂ ಉತ್ತಮ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಆರ್ಥಿಕವಾಗಿ ನಿಮಗೆ ಅನುಕೂಲಕರ ವಾತಾವರಣವಿಲ್ಲದೇ ಇದ್ದರೂ ನಷ್ಟವಾಗದು. ದೇವತಾ ಪ್ರಾರ್ಥನೆ ಮಾಡಿ.

ಮಕರ: ಎಷ್ಟೋ ದಿನಗಳಿಂದ ಬಾಕಿಯಿದ್ದ ಕಾರ್ಯಗಳು ನೆರವೇರಲಿದೆ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಮುನ್ನಡೆ ಸಿಗುವುದು. ನೂತನ ದಂಪತಿಗೆ ಮಧುಚಂದ್ರ ಭಾಗ್ಯ. ಖರ್ಚುವೆಚ್ಚದ ಬಗ್ಗೆ ಮಿತಿಯಿರಲಿ.

ಕುಂಭ: ಭೂತಕಾಲದ ಬಗ್ಗೆ ಯೋಚಿಸುತ್ತಾ ಬೇಸರದಿಂದರಬೇಡಿ. ಸಮಾಧಾನ ಚಿತ್ತದಿಂದ ಕಾರ್ಯಪ್ರವೃತ್ತರಾಗಿ. ಸಾಂಸಾರಿಕವಾಗಿ ಸಂಗಾತಿಯ ಸಹಕಾರ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗುವುದು.

ಮೀನ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗಲಿದೆ. ದಂಪತಿಗಳಿಗೆ ಸಂತಾನ ಫಲ ಸೂಚನೆಗಳು ಸಿಗಲಿವೆ. ಕೌಟುಂಬಿಕವಾಗಿ ಸುಂದರ ಕ್ಷಣ ನಿಮ್ಮದಾಗುವುದು. ಆರ್ಥಿಕವಾಗಿ ಖರ್ಚಿನ ಬಗ್ಗೆ ಹಿಡಿತವಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments