Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 15 ಜುಲೈ 2019 (09:18 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಎಂದೋ ಅಂದುಕೊಂಡಿದ್ದ ಕಾರ್ಯಗಳಿಗೆ ಇಂದು ಚಾಲನೆ ನೀಡುವಿರಿ. ಸರಕಾರಿ ಕೆಲಸಗಳಲ್ಲಿ ಜಯ ನಿಮ್ಮದಾಗುವುದು. ಕೌಟುಂಬಿಕವಾಗಿ ಸಂಗಾತಿಯಿಂದ ಸಹಕಾರ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ವೃಷಭ: ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ತಲೆದೋರುವುದು. ಮಿತ್ರರ ಕಷ್ಟಕ್ಕೆ ನೆರವಾಗುವಿರಿ. ಕೌಟುಂಬಿಕವಾಗಿ ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಬೇಕು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಮಿಥುನ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಮನಸ್ಸು ಮಾಡುವರು. ಅನಿರೀಕ್ಷಿತವಾಗಿ ಇಷ್ಟಮಿತ್ರರ ಭೇಟಿ ಮನಸ್ಸಿಗೆ ಖುಷಿಕೊಡುವುದು. ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ.

ಕರ್ಕಟಕ: ನೆರೆಹೊರೆಯವರೊಂದಿಗೆ ನೀರಿನ ವಿಚಾರಕ್ಕೆ ವ್ಯಾಜ್ಯವಾಗಬಹುದು. ತಾಳ್ಮೆಯಿಂದ ವ್ಯವಹರಿಸಿ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡವಿದ್ದರೂ ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ.

ಸಿಂಹ: ಸಾಮಾಜಿಕವಾಗಿ ಸ್ಥಾನ ಮಾನ ಹೆಚ್ಚುವುದು. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವಿರಿ. ನೂತನ ದಂಪತಿಗೆ ಮಧುಚಂದ್ರದ ಭಾಗ್ಯ. ನಿಮ್ಮ ಸಹಕಾರವಿಲ್ಲದೇ ಮೇಲಧಿಕಾರಿಗಳಿಗೆ ಕೆಲಸ ಮುಂದುವರಿಸಲು ಸಾಧ್ಯವಾಗದು.

 
ಕನ್ಯಾ: ಸಾಲ ಪಾವತಿ ಚಿಂತೆ ಕಾಡುವುದು. ಇಷ್ಟ ಮಿತ್ರರೊಂದಿಗೆ ಭೋಜನ, ಪ್ರವಾಸ ಸಾಧ್ಯತೆಯಿದೆ. ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ. ದೂರ ಸಂಚಾರದಿಂದ ಕಾರ್ಯಸಿದ್ಧಿಯಾಗುವುದು. ಸ್ವ ಉದ್ಯೋಗಿಗಳಿಗೆ ಲಾಭವಾಗಲಿದೆ.

ತುಲಾ: ಸರಕಾರಿ ಕೆಲಸಕ್ಕಾಗಿ ಇದುವರೆಗೆ ನೀವು ಮಾಡಿದ ಪ್ರಯತ್ನ ಕೈಗೂಡಲಿದೆ. ಕಿರು ಸಂಚಾರ ಮಾಡಬೇಕಾಗಿ ಬರಬಹುದು. ವ್ಯಾಪಾರ ವ್ಯವಹಾರದಲ್ಲಿ ಅಪರಿಚಿತರನ್ನು ನಂಬಿ ವ್ಯವಹಾರ ಮಾಡುವಾಗ ಎಚ್ಚರವಿರಲಿ.

ವೃಶ್ಚಿಕ: ಮನೆಯಲ್ಲಿ ಶುಭ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಬೇಕಾಗುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರಿಕೆ ಅಗತ್ಯ.

ಧನು: ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ ಧನವಿನಿಯೋಗವಾಗುವುದು. ಮಹಿಳಾ ಉದ್ಯೋಗಿಗಳಿಗೆ ಶುಭ ಯೋಗವಿದೆ. ಕುಲದೇವರ ಪ್ರಾರ್ಥನೆ ನಡೆಸಿ.

ಮಕರ: ಎಷ್ಟೋ ದಿನದಿಂದ ಬಾಕಿಯಿದ್ದ ಕೆಲಸಗಳು ಹಂತ ಹಂತವಾಗಿ ಕೈಗೂಡುವುದು. ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸುವಿರಿ. ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ. ದೇವತಾ ಪ್ರಾರ್ಥನೆ ಮಾಡಿ.

ಕುಂಭ: ಉದ್ಯೋಗದಲ್ಲಿ ಬಡ್ತಿ, ಮುನ್ನಡೆ ಯೋಗವಿದೆ. ವಾಹನ ಖರೀದಿಗೆ ಚಿಂತನೆ ಮಾಡುವಿರಿ. ಬಂಧು ಮಿತ್ರರಿಂದ ಚಾಡಿ ಮಾತು ಕೇಳಬೇಕಾಗಿಬರಬಹುದು. ಆರೋಗ್ಯದಲ್ಲಿ ಏರುಪೇರಾಗದಂತೆ ಎಚ್ಚರಿಕೆ ವಹಿಸಿ.

ಮೀನ: ಋಣಾತ್ಮಕ ಚಿಂತನೆಗಳಿಂದ ಕೆಲಸದ ಮೇಲೆ ಆಲಸ್ಯತನ ಕಂಡುಬರಬಹುದು. ಆದರೆ ಕಷ್ಟಪಟ್ಟು ದುಡಿದರೇ ಫಲ ಎನ್ನುವುದನ್ನು ಮರೆಯಬೇಡಿ. ಹಿರಿಯರ ಮಾತಿಗೆ ಕಿವಿಗೊಡಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂತಾನ ಪ್ರಾಪ್ತಿಯಾಗಲು ದೇವರಿಗೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕಬೇಕು ಗೊತ್ತಾ?