Webdunia - Bharat's app for daily news and videos

Install App

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

Webdunia
ಗುರುವಾರ, 19 ಸೆಪ್ಟಂಬರ್ 2019 (09:02 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಕೃಷಿಕರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಕಾಲ. ಸಾಕಷ್ಟು ಧನಲಾಭವಾಗಲಿದೆ. ನೌಕರರಿಗೆ ಬಿಡುವಿಲ್ಲದ ಕೆಲಸ. ಮಹಿಳಾ ಉದ್ಯೋಗಿಗಳಿಗೆ ಕಾರ್ಯಲಾಭ. ಮನೆಯಲ್ಲಿ ಮಂಗಲ ಕಾರ್ಯ ನಡೆಸಲು ಚಿಂತನೆ ನಡೆಸುವಿರಿ.

ವೃಷಭ: ಎಂತಹದ್ದೇ ಸವಾಲುಗಳು ಎದುರಾದರೂ ನಿಮ್ಮ ಕರಾರುವಾಕ್ ಯೋಜನೆಯಿಂದ ಅದನ್ನು ದಾಟಿ ಸಫಲತೆ ಸಾಧಿಸುವಿರಿ. ಆರ್ಥಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸುವಿರಿ. ಉನ್ನತ ಸ್ಥಾನ ಮಾನ ಯೋಗವಿದೆ. ದೈವಾನುಕೂಲ ಇಂದು ನಿಮ್ಮ ಮೇಲಿದೆ.

ಮಿಥುನ: ವ್ಯಾಪಾರಿಗಳಿಗೆ ಸಾಕಷ್ಟು ಆದಾಯವಿದ್ದರೂ ಅದನ್ನು ಗಳಿಸಲು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ‍್ಯತೆಯಿದೆ. ಎಚ್ಚರಿಕೆ ಅಗತ್ಯ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಸಂಗಾತಿಯ ಸಹಕಾರ ಸಿಗುವುದು.

ಕರ್ಕಟಕ: ಕೂಡಿಟ್ಟ ಹಣ ತುಂಬಾ ಸಮಯ ಬಾರದು ಎಂಬುದನ್ನು ಮರೆಯದಿರಿ. ಆಲಸ್ಯತನ ಬಿಟ್ಟು ಕೆಲಸ ಮಾಡಬೇಕಾದ ದಿನವಿದು. ಕಲಾ ಕ್ಷೇತ್ರದಲ್ಲಿರುವವರು ಕೀರ್ತಿ ಸಂಪಾದಿಸಲಿದ್ದಾರೆ. ಮಕ್ಕಳಿಂದ ಶುಭ ಫಲ ಸಿಗುವುದು. ತಾತ್ಕಾಲಿಕ ವೃತ್ತಿಯವರಿಗೆ ಖಾಯಂ ಉದ್ಯೋಗ ಸಿಗಲಿದೆ.

ಸಿಂಹ: ಆಲಸ್ಯತನ ಮೈಮರೆವು ತೋರಿದರೆ ಹಿತಶತ್ರುಗಳಿಂದ ವಂಚನೆಗೊಳಗಾಗುವ ಭೀತಿಯಿದೆ. ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕಾದ ದಿನವಿದು. ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ.

ಕನ್ಯಾ: ನಿಮ್ಮ ಕೆಲವೊಂದು ನಿರ್ಧಾರಗಳು ಸಹೋದರರ ಅಸಮಾಧಾನಕ್ಕೆ ಕಾರಣವಾಗಬಹುದು. ಆಸ್ತಿ ವಿವಾದಗಳಲ್ಲಿ ಹಿರಿಯರ ಮಧ್ಯಸ್ಥಿಕೆಗೆ ಬೆಲೆಕೊಡಿ. ನಿಮ್ಮ ಮೋಜಿಗಾಗಿ ನೀರಿನಂತೆ ಹಣ ಖರ್ಚು ಮಾಡಲಿದ್ದೀರಿ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.

ತುಲಾ: ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಹಲವು ಅಡೆತಡೆಗಳು ಎದುರಾಗಬಹುದು. ಇದು ನಿಮ್ಮ  ಅಭಿವೃದ್ಧಿಗೆ ತೊಂದರೆ ಉಂಟುಮಾಡಲಿದೆ. ಎಚ್ಚರಿಕೆಯಿಂದ ವ್ಯವಹಾರ ಮಾಡಿದಲ್ಲಿ ಲಾಭ ಗ್ಯಾರಂಟಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉತ್ಸಾಹ ಕಂಡುಬರುವುದು.

ವೃಶ್ಚಿಕ: ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಹಾಗಿದ್ದರೂ ಕೆಲವು ವಿಘ‍್ನಗಳು ಎದುರಾದೀತು. ಹಿರಿಯರಿಗೆ ತೀರ್ಥ ಯಾತ್ರೆಯ ಭಾಗ್ಯವಿದೆ. ಕುಲದೇವರ ಪ್ರಾರ್ಥನೆ ಮಾಡಿ.

ಧನು: ನಿಮ್ಮ  ಅತಿಯಾದ ಮಾತು ನಿಮಗೇ ಮುಳುವಾಗಲಿದೆ. ಇಷ್ಟು ದಿನ ಕೂಡಿಟ್ಟಿದ್ದ ರಹಸ್ಯ ಬಹಿರಂಗವಾಗಲಿದೆ. ಸಂಸಾರದಲ್ಲಿ ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಅಗತ್ಯ. ಸಂಚಾರದಲ್ಲಿ ವಿಘ‍್ನಗಳು ಎದುರಾದೀತು. ಖರ್ಚಿನಲ್ಲಿ ಮಿತಿಯಿರಲಿ.

ಮಕರ: ವ್ಯಾಪಾರಿ ವರ್ಗದವರಿಗೆ ಇಂದು ನಷ್ಟ  ಅನುಭವಿಸಬೇಕಾದ ಪರಿಸ್ಥಿತಿ ಎದುರಾದೀತು. ಅತೀ ವಿನಯ ನಟಿಸುವವರ ಜತೆ ವ್ಯವಹರಿಸುವಾಗ ಎಚ್ಚರವಿರಲಿ. ಗೃಹೋಪಯೋಗಿ ವಸ್ತುಗಳಿಗಾಗಿ ಧನವಿನಿಯೋಗ ಮಾಡಬೇಕಾಗುತ್ತದೆ. ಸಂಗಾತಿಯ ಮನೋಕಾಮನೆ ಪೂರೈಸುವಿರಿ.

ಕುಂಭ: ಹೊಸ ಕೆಲಸಗಳಿಗೆ ಕೈ ಹಾಕುವಾಗ ವಿಘ‍್ನಗಳು ಎದುರಾದೀತು, ಹಾಗಿದ್ದರೂ ಧೈರ್ಯದಿಂದ ಮುನ್ನಡೆಸದರೆ ಯಶಸ್ಸು ಸಾಧ‍್ಯ. ಕಾರ್ಯದೊತ್ತಡದಿಂದ ಮನಸ್ಸಿಗೆ ಬೇಸರವೆನಿಸಲಿದೆ. ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮೀನ: ಸಂಗಾತಿಯ ಸಲಹೆಗಳು ಪಥ್ಯವಾಗದೇ ಕುಟುಂಬದಲ್ಲಿ ಕಲಹಕ್ಕೆ ಕಾರಣವಾದೀತು. ತಾಳ್ಮೆಯಿಂದ ನಡೆದುಕೊಳ್ಳುವುದು ಮುಖ್ಯ. ನೂತನ ದಂಪತಿಗಳಿಗೆ ಸಂತಾನ ಭಾಗ್ಯವಿದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments