Webdunia - Bharat's app for daily news and videos

Install App

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

Webdunia
ಮಂಗಳವಾರ, 3 ಸೆಪ್ಟಂಬರ್ 2019 (08:54 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

 
ಮೇಷ: ಸಂಗಾತಿ ಜತೆಗೆ ಪ್ರವಾಸ, ಸುಂದರ ಕ್ಷಣ ಕಳೆಯುವ ಅವಕಾಶ ನಿಮ್ಮದಾಗಲಿದೆ. ಆದರೆ ಮಾತಿನ ಮೇಲೆ ನಿಗಾ ಇರಲಿ. ಮಕ್ಕಳ ಸಂತಸಕ್ಕಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಬಂಧು ಮಿತ್ರರ ಮನೆಗೆ ಭೇಟಿ ನೀಡುವಿರಿ. ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ಹಿಡಿತವಿರಲಿ.

ವೃಷಭ: ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿ ಬರಲಿವೆ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಚಿಂತನೆ ಮಾಡುವರು. ಅಪರಿಚಿತರನ್ನು ನಂಬಿ ಹೂಡಿಕೆ ಮಾಡುವ ಮುನ್ನ ಎಚ್ಚರವಾಗಿರಿ.
ಮಿಥುನ: ಕುಲದೇವರ ಹರಕೆ ತೀರಿಸಲು ಮುಂದಾಗುವಿರಿ. ನೂತನ ದಂಪತಿಗಳಲ್ಲಿ ವಿರಸ ಮೂಡಬಹುದು. ತಾಳ್ಮೆಯಿಂದಿರುವುದು ಮುಖ್ಯ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಸಾಮಾಜಿಕವಾಗಿ ಸ್ಥಾನ ಮಾನ ಹೆಚ್ಚುವುದು.

ಕರ್ಕಟಕ: ರಾಜಕೀಯ ರಂಗದಲ್ಲಿರುವವರಿಗೆ ಸ್ಥಾನ ಮಾನ ಹೆಚ್ಚುವುದು. ಕಷ್ಟದಲ್ಲಿರುವವರಿಗೆ ನೆರವಾಗುವಿರಿ. ಮಾನಸಿಕ ದುಗುಡಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾಗುವುದು. ಗೃಹೋಪಯೋಗಿ ವಸ್ತುಗಳಿಗೆ ಧನವ್ಯಯವಾಗುವುದು.

ಸಿಂಹ: ದೈವಾನುಕೂಲದಿಂದ ಇಂದು ನೀವು ಕೈ ಹಿಡಿದ ಕೆಲಸಗಳು ಸುಗಮವಾಗಿ ನೆರವೇರಲಿದೆ. ಬಂಧು ಮಿತ್ರರ ಆಗಮನ ಖುಷಿ ಇಮ್ಮಡಿಗೊಳಿಸಲಿದೆ. ಕೌಟುಂಬಿಕವಾಗಿ ಕೆಲವೊಂದು ಅನಿರೀಕ್ಷಿತ ವಾರ್ತೆಗಳನ್ನು ಕೇಳುವಿರಿ. ಕಾರ್ಯನಿಮಿತ್ತ ಓಡಾಟ ಹೆಚ್ಚುವುದು.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಬಯಸುವಿರಿ. ಮನಸ್ಸಿಗೆ ಖುಷಿ ಕೊಡುವ ಕೆಲಸದಲ್ಲಿ ತೊಡಗಿಸಿಕೊಳ್ಳುವಿರಿ. ಸಂಗಾತಿಯ ಮಾತಿಗೆ ಬೆಲೆ ಕೊಡಬೇಕಾಗುತ್ತದೆ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಇಷ್ಟದೇವರ ಪ್ರಾರ್ಥನೆ ಮಾಡಿ.

ತುಲಾ: ಪಾಲು ಬಂಡವಾಳ ಹೂಡಿಕೆ ಮಾಡಿದವರಿಗೆ ಲಾಭವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಗಳಿಸುವಿರಿ. ನೂತನ ದಂಪತಿಗಳಿಗೆ ಸಂತಾನ ಫಲ ನಿರೀಕ್ಷೆ. ಕೌಟುಂಬಿಕವಾಗಿ ನೆಮ್ಮದಿಯ ದಿನ ನಿಮ್ಮದಾಗಲಿದೆ. ಸಾಲಗಾರರ ಹಣ ಮರುಪಾವತಿಯಾಗುವುದು.

ವೃಶ್ಚಿಕ: ಕೌಟುಂಬಿಕವಾಗಿ ನೀವು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳು ಎಲ್ಲರಿಗೂ ಪಥ್ಯವಾಗದೇ ಹೋಗಬಹುದು. ಆಸ್ತಿ ವಿಚಾರಗಳಲ್ಲಿ ಹಿರಿಯರ ಮಧ್ಯಸ್ಥಿಕೆ ಒಳ್ಳೆಯದು. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆ ಕೇಳಿಬರುವುದು.

ಧನು: ಶುಭ ಮಂಗಲ ಕಾರ್ಯ ನಡೆಸಲು ಸಿದ್ಧತೆ ನಡೆಸುವಿರಿ. ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡುವಿರಿ. ದೈವಾನುಕೂಲದಿಂದ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಿಗುವುದು. ಇಷ್ಟ ಮಿತ್ರರೊಂದಿಗೆ ಭೋಜನ, ಪ್ರವಾಸ ಸಾಧ್ಯತೆಯಿದೆ.

ಮಕರ: ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಮುನ್ನಡೆ ಸಿಗುವುದು. ಸಹೋದ್ಯೋಗಿಗಳ ಸಹಕಾರ ಸಿಗುವುದು. ಕೃಷಿಕರಿಗೆ ಕೊಂಚ ಹಿನ್ನಡೆಯಾದೀತು. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದು.

ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳೂ ಅಸೂಯೆಪಡುವಂತೆ ನಿಮ್ಮ ಕೆಲಸಗಳಿಗೆ ಮೇಲಧಿಕಾರಿಗಳ ಪ್ರಶಂಸೆಗೊಳಗಾಗುವಿರಿ. ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿಗಳು ಹೆಗಲಿಗೇರಲಿವೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಮೀನ: ಉದ್ಯೋಗ ಸಂಬಂಧವಾಗಿ ದೂರ ಸಂಚಾರ ಮಾಡಬೇಕಾಗುತ್ತದೆ. ಉದ್ಯೋಗದಲ್ಲಿ ಎಷ್ಟೇ ಪ್ರಗತಿಯಿದ್ದರೂ ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡಲಿವೆ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಿರಿ. ಆರ್ಥಿಕವಾಗಿ ಸುಧಾರಣೆಯಿರುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Kaali Mantra: ಶತ್ರು ಭಯವಿದ್ದರೆ ಕಾಳಿಯ ಈ ಸ್ತೋತ್ರವನ್ನು ಓದಿ

ಶ್ರೀದತ್ತಾತ್ರೇಯ ಸ್ತೋತ್ರ ಕನ್ನಡದಲ್ಲಿ, ತಪ್ಪದೇ ಓದಿ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

ಮುಂದಿನ ಸುದ್ದಿ
Show comments