Webdunia - Bharat's app for daily news and videos

Install App

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

Webdunia
ಗುರುವಾರ, 8 ಆಗಸ್ಟ್ 2019 (08:41 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಉದ್ಯೋಗ ರಂಗದಲ್ಲಿ ಬರುವ ಅಡೆತಡೆಗಳಿಗೆ ಒಂದು ರೀತಿಯ ಪರಿಹಾರ ಕಂಡುಕೊಳ್ಳುವಿರಿ. ಸಂಗಾತಿಯ ನಿರ್ಧಾರಗಳಿಗೆ ಒಪ್ಪಿ ನಡೆಯಬೇಕಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಅನಿರೀಕ್ಷಿತ ಖರ್ಚುಗಳಾಗಬಹುದು.

ವೃಷಭ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಹಲವು ದಿನಗಳ ನಂತರ ಹಳೆಯ ಮಿತ್ರನ ಭೇಟಿಯಾಗುವಿರಿ. ಉದ್ಯೋಗ ರಂಗದಲ್ಲಿ ಸಹೋದ್ಯೋಗಗಿಳ ಸಹಕಾರ ಸಿಗಲಿದೆ. ಕುಲದೇವರ ಪ್ರಾರ್ಥನೆ ಮಾಡಿ.

ಮಿಥುನ: ಆರ್ಥಿಕವಾಗಿ ಹಂತ ಹಂತವಾಗಿ ಅಭಿವೃದ್ಧಿ ಗೋಚರಕ್ಕೆ ಬರುವುದು. ಹೊಸ ಕೆಲಸಗಳಿಗೆ ಕೈ ಹಾಕುವಿರಿ. ವಾಹನ ಖರೀದಿ ಯೋಗವಿದೆ. ಆದರೆ ಅಪರಿಮಿತ ಖರ್ಚು ಮಾಡಬೇಡಿ. ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗುವಿರಿ.

ಕರ್ಕಟಕ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನಗಳು ಹೆಚ್ಚಲಿವೆ. ಆದರೆ ಮಕ್ಕಳ ವಿಚಾರದಲ್ಲಿ ಕೆಟ್ಟ ವಾರ್ತೆ ಕೇಳಿಬಂದೀತು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಅಲೆದಾಟ ತಪ್ಪದು.

ಸಿಂಹ: ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆ ಸಿಗಲಿದೆ. ಆದರೆ ಮಹಿಳೆಯರಿಂದ ಅಪವಾದದ ಭೀತಿಯಿದೆ. ಎಚ್ಚರಿಕೆಯಿಂದ ವ್ಯವಹರಿಸಿ. ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು.

ಕನ್ಯಾ: ಹೊಸ  ಜಾಗಕ್ಕೆ ಪ್ರಯಾಣ, ಹೊಸ ಜನರ ಭೇಟಿ ಸಾಧ್ಯತೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪ್ರೀತಿ ಪಾತ್ರರ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾದ ದಿನವಿದು. ಸಾಲದ ಸಮಸ್ಯೆ ಚಿಂತೆಗೆ ಕಾರಣವಾಗಬಹುದು.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡವಿದ್ದರೂ ನಿಮ್ಮ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುವುದು. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ಇಷ್ಟಮಿತ್ರರ ಭೇಟಿ ಸಾಧ್ಯತೆಯಿದೆ.

ವೃಶ್ಚಿಕ: ಹೊಸ ವ್ಯವಹಾರಗಳಿಗೆ ಕೈ ಹಾಕುವಾಗ ಅಪರಿಚಿತರನ್ನು ನಂಬಿ ಹೂಡಿಕೆ ಮಾಡಬೇಡಿ. ಲೆಕ್ಕಪತ್ರಗಳ  ಬಗ್ಗೆ ಎಚ್ಚರಿಕೆಯಿರಲಿ. ಸಂಗಾತಿಯ ಮನೋಕಾಮನೆಗಳನ್ನು ಪೂರೈಸಬೇಕಾಗುತ್ತದೆ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.

ಧನು: ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ವಾಹನ ಸವಾರರಿಗೆ ಅಪಘಾತದ ಭೀತಿಯಿದೆ, ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯತನ ಕಂಡುಬರಬಹುದು.

ಮಕರ: ಉದ್ಯೋಗ ಕ್ಷೇತ್ರದಲ್ಲಿ ಕಾಣದ ಕೈಗಳಿಂದ ನಿಮ್ಮ ಮುನ್ನಡೆಗೆ ಅಡ್ಡಿ ಎದುರಾಗಬಹುದು. ಆದರೆ ನಿರಾಸೆ ಬೇಡ. ನೂತನ ದಂಪತಿಗಳು ಮಾತಿನಲ್ಲಿ ಎಚ್ಚರಿಕೆಇಯಿಂದಿರುವುದು ಮುಖ್ಯ. ವಿರಸದ ಸಾಧ್ಯತೆಯೂ ಇದೆ.

ಕುಂಭ: ಸಂಗಾತಿಯ ಸಂತೋಷಕ್ಕಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಯಾರಿಗೂ ನೋವುಂಟು ಮಾಡದ ನಿಮ್ಮ ಗುಣ ಕೆಲವೊಮ್ಮೆ ನಿಮಗೇ ಮುಳುವಾಗಬಹುದು. ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಎಚ್ಚರಿಕೆ ಅಗತ್ಯ.

ಮೀನ: ಕೆಲಸದಲ್ಲಿ ನಿರುತ್ಸಾಹ ಕಂಡುಬರಬಹುದು. ನಂಬಿಕೊಂಡ ವ್ಯಕ್ತಿಗಳಿಂದಲೇ ವಂಚನೆಗೊಳಗಾಗುವ ಭೀತಿಯಿದೆ. ಆದರೆ ಆರ್ಥಿಕವಾಗಿ ನಿಮ್ಮ ಮುನ್ನಡೆಯನ್ನು ತಡೆಯಲು ಯಾರಿಗೂ ಸಾಧ‍್ಯವಿಲ್ಲ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments