Publish Date: Tue, 17 Nov 2020 (09:11 IST)
Updated Date: Tue, 17 Nov 2020 (09:13 IST)
ಬೆಂಗಳೂರು: ಮನೆಯಲ್ಲಿ ಗಣೇಶನ ಮೂರ್ತಿಯನ್ನು ಇಟ್ಟುಕೊಂಡಿದ್ದರೆ ಅದರ ಬಗ್ಗೆ ವಿಶೇಷ ಗಮನಕೊಡಿ. ಯಾವ ರೀತಿಯ ಗಣೇಶನ ಮೂರ್ತಿಯನ್ನು ಇಟ್ಟುಕೊಂಡರೆ ನಿಮಗೆ ಧನಪ್ರಾಪ್ತಿಯಾಗುತ್ತದೆ ಎಂದು ತಿಳಿದುಕೊಳ್ಳಿ.
ವಾಸ್ತುಪ್ರಕಾರ ಮನೆಯಲ್ಲಿ ನೃತ್ಯ ಮಾಡುವ ಭಂಗಿಯಲ್ಲಿರುವ ಗಣೇಶನ ಮೂರ್ತಿಯನ್ನು ಸ್ಥಾಪಿಸಿದರೆ ಅಥವಾ ಅಂತಹ ವಿಗ್ರಹವನ್ನಿಟ್ಟುಕೊಂಡರೆ ಧನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಹಣಕಾಸಿನ ಸಂಕಷ್ಟದಲ್ಲಿರುವವರು ಇಂತಹ ಗಣೇಶನ ವಿಗ್ರಹವಿಟ್ಟುಕೊಳ್ಳುವುದು ಉತ್ತಮ.