Select Your Language

Notifications

webdunia
webdunia
webdunia
webdunia

ಮಚ್ಚೆ ಇದ್ದರೆ ಏನು ಆಗುತ್ತೆ.. ಓದಿ

ಮಚ್ಚೆ ಇದ್ದರೆ ಏನು ಆಗುತ್ತೆ.. ಓದಿ
ಬೆಂಗಳೂರು , ಶುಕ್ರವಾರ, 2 ಸೆಪ್ಟಂಬರ್ 2016 (09:44 IST)
ಬೆಳ್ಳಗಿನ ಮುಖದಲ್ಲೊಂದು ಗಲ್ಲದ ಬಳಿ ಪುಟ್ಟ ಮಚ್ಚೆಯಿದ್ದರೆ, ಆ ಸುಂದರಿಯನ್ನು ವಿವರಿಸಲು ಶಬ್ದಗಳು ಸಾಲದು ಎಂದರೂ ತಪ್ಪಿಲ್ಲ. ಬಿಳಿ ಮೊಗದಲ್ಲೊಂದು ಗಲ್ಲದ ಮೇಲಿನ ಕಪ್ಪು ಮಚ್ಚೆ ದೃಷ್ಟಿ ಬೊಟ್ಟಿಟ್ಟಂತೆ ಆ ಮೊಗದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂದರೂ ತಪ್ಪಿಲ್ಲ. ಆದರೆ ಈ ಮಚ್ಚೆಗಳ ಆಧಾರದಲ್ಲೂ ನಿಮ್ಮ ವ್ಯಕ್ತಿತ್ವ, ಗುಣ ನಡತೆಯನ್ನು ಕಂಡುಹಿಡಿಯಬುದೆಂದರೆ ನಂಬುತ್ತೀರಾ? ಹೌದು. ಮಚ್ಚೆ ಯಾವ ಪ್ರದೇಶದಲ್ಲಿದೆ ಎಂಬ ಆಧಾರದ ಮೇಲೆ ನಿಮ್ಮ ಗುಣನಡತೆ, ವ್ಯಕ್ತಿತ್ವವನ್ನು ಧಾರಾಳವಾಗಿ ಹೇಳಬಹುದು.
ಕೆಲವು ಮಚ್ಚೆಗಳ ಆಧಾರದಲ್ಲಿ ನೀವು ನಿಮ್ಮ ಗುಣನಡತೆಯನ್ನು ಅಳೆಯಬಹುದು. ಅಥವಾ ಇತರರಿಗೆ ಹೇಳಬಹುದು. ಅವುಗಳಲ್ಲಿ ಕೆಲವು ಸ್ಯಾಂಪಲ್ ಇಲ್ಲಿದೆ.
 
- ಮೇಲ್ದುಟಿಯ ಮೇಲೆ ಕಪ್ಪು ಮಚ್ಚೆಯಿದ್ದರೆ ಅಂಥಹ ವ್ಯಕ್ತಿಯಲ್ಲಿ ಇತರರಿಗಿಂತ ಸ್ವಲ್ಪ ಹೆಚ್ಚೇ ಕಾಮಾಸಕ್ತಿಯಿರುತ್ತದೆ.
- ಕೆಳತುಟಿಯ ಮೇಲೆ ಮಚ್ಚೆಯಿದ್ದರೆ ಅದು ದರಿದ್ರತೆಯ ಸೂಚನೆ.
- ಎರಡು ಹುಬ್ಬುಗಳ ಮಧ್ಯಭಾಗದಲ್ಲಿ ಮಚ್ಚೆಯಿದ್ದರೆ ಅಂಥ ವ್ಯಕ್ತಿ ಪರೋಪಕಾರಿ ಹಾಗೂ ಉದಾರಿಯಾಗಿರುತ್ತಾನೆ.
 ಹಣೆಯ ಬಲಭಾಗದಲ್ಲಿ ಮಚ್ಚೆಯಿದ್ದರೆ ಅಂಥ ವ್ಯಕ್ತಿಗೆ ಸಮಾಜದಲ್ಲಿ ಮಾನ ಸನ್ಮಾನ ಪ್ರಾಪ್ತಿಯಾಗುತ್ತದೆ.
- ನೆತ್ತಿಯ ಮಧ್ಯಭಾಗದಲ್ಲಿ ಮಚ್ಚೆಯಿದ್ದರೆ ಆ ವ್ಯಕ್ತಿ ಶ್ರೀಮಂತನಾಗುತ್ತದೆ. ಬೇಕಾದಷ್ಟು ಹಣದ ಹೊಳೆಯೇ ಆತನಲ್ಲಿ ಹರಿಯುತ್ತದೆ.
- ಕುತ್ತಿಗೆಯ ಯಾವುದೇ ಭಾಗದಲ್ಲಿ ಮಚ್ಚೆಯಿದ್ದರೂ, ಅಂಥ ವ್ಯಕ್ತಿ ವಿಪರೀತ ಬುದ್ಧಿಶಾಲಿಯಾಗಿರುತ್ತಾರೆ. ಅಲ್ಲದೆ, ಹಣಕಾಸಿನ ವಿಚಾರದಲ್ಲೂ, ಉತ್ತಮ ಫಲ ಕಾದಿದೆ.
 
- ಬಲಕೆನ್ನೆಯ ಮೇಲೆ ಮಚ್ಚೆಯಿದ್ದರೆ ಅಂಥ ವ್ಯಕ್ತಿ ಮೇಧಾವಿಯಾಗುತ್ತಾರೆ.
- ಎಡಕೆನ್ನೆಯ ಮೇಲೆ ಮಚ್ಚೆಯಿದ್ದರೆ ಅದು ಶುಭಕರವಲ್ಲ. ಗೃಹಸ್ಥ ಜೀವನದಲ್ಲಿ ಹಣದ ಅಭಾವವಾಗುವ ಲಕ್ಷಣವಿದು.
- ಮೂಗಿನ ನೇರದಲ್ಲಿ ಮಚ್ಚೆಯಿದ್ದರೆ ಅದು ಸುಖ, ಧನ ಸಂಪತ್ತಿನ ಲಕ್ಷಣ.
 
- ಮೂಗಿನಲ್ಲಿ ಎಡಭಾಗದಲ್ಲಿ ಮಚ್ಚೆಯಿದ್ದರೆ ಅಂಥ ವ್ಯಕ್ತಿ ಪರಿಶ್ರಮಿ, ಕಷ್ಟ ಸಹಿಷ್ಣುವಾಗಿದ್ದು, ಸಫಲತೆಯನ್ನು ಸಾಧಿಸುವ ವ್ಯಕ್ತಿಯಾಗುತ್ತಾನೆ.
- ಮೂಗಿನ ಮಧ್ಯಭಾಗದಲ್ಲಿ ಮಚ್ಚೆಯಿದ್ದರೆ ಅಂಥ ವ್ಯಕ್ತಿ ಚಂಚಲವಾಗಿರುತ್ತಾರೆ ಹಾಗೂ ಯಾವಾಗಲೂ ಒಂದು ಕೆವಲಸದಲ್ಲಿ ಅಥವಾ ಒಂದು ಜಾಗದಲ್ಲಿ ನಿಲ್ಲುವ ವ್ಯಕ್ತಿತ್ವ ಹೊಂದಿರುವುದಿಲ್ಲ.
 
- ಎಡಗೈಯಲ್ಲಿ ಮಚ್ಚೆಯಿದ್ದರೆ ಶುಭಕರ. ಆದರೆ ಬಲಗೈಯ ಹಸ್ತದಲ್ಲಿ ಮಚ್ಚೆಯಿದ್ದರೆ ಅದು ದುಂದುವೆಚ್ಚದ ಸಂಕೇತ.
- ಮಹಿಳೆಯರ ದೇಹದ ಯಾವುದೇ ಭಾಗದಲ್ಲಿ ಎಡಗಡೆಯಲ್ಲಿ ಮಚ್ಚೆಯಿದ್ದರೆ ಅದು ಶುಭಕರ. ಆದರೆ ಪುರುಷರಿಗೆ ಮಾತ್ರ ದೇಹದ ಬಲಭಾಗದಲ್ಲಿ ಮಚ್ಚೆಯಿದ್ದರೆ ಅದು ಶುಭಕರ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

 

Share this Story:

Follow Webdunia kannada

ಮುಂದಿನ ಸುದ್ದಿ

ಸುಖ ದಾಂಪತ್ಯಕ್ಕೆ ವಾಸ್ತು ಸೂತ್ರಗಳು