Publish Date: Fri, 24 Jul 2020 (08:43 IST)
Updated Date: Fri, 24 Jul 2020 (08:44 IST)
ಬೆಂಗಳೂರು: ಸಾಲಿಗ್ರಾಮದಲ್ಲಿ ಭಗವಾನ್ ವಿಷ್ಣುವಿನ ಸಾನಿಧ್ಯವಿದೆ ಎಂದು ನಂಬಲಾಗುತ್ತದೆ. ಅಷ್ಟಕ್ಕೂ ಸಾಲಿಗ್ರಾಮ ಪೂಜೆಯನ್ನು ಯಾವ ರೀತಿ ಮಾಡಬೇಕು?
ಮನೆಯಲ್ಲಿಯೇ ಸಾಲಿಗ್ರಾಮ ಪೂಜೆ ಮಾಡುವುದಿದ್ದರೆ ಪಂಚಾಮೃತದಿಂದ ಸ್ನಾನ ಮಾಡಿ ಶ್ರೀಗಂಧ ಹಚ್ಚಿ. ಬಳಿಕ ತುಳಸಿಯನ್ನು ಅರ್ಪಿಸಿ ಪೂಜೆ ಮಾಡಿ. ಹೀಗೇ ಪ್ರತಿನಿತ್ಯ ಭಕ್ತಿಯಿಂದ ಪೂಜೆ ಮಾಡಬೇಕು. ಇದರಿಂದ ಮನೆಯಲ್ಲಿ ದರಿದ್ರ ವಿನಾಶವಾಗಿ ಸಮೃದ್ಧಿಯಾಗುತ್ತದೆ. ನೆನಪಿರಲಿ, ಪೂಜೆ ಮಾಡುವಾಗ ನಿಮ್ಮ ಮನಸ್ಸು ದೇವರಲ್ಲಿ ಏಕಾಗ್ರತೆ ಹೊಂದಿರಲಿ.