Publish Date: Sun, 23 Aug 2020 (08:55 IST)
Updated Date: Sun, 23 Aug 2020 (08:56 IST)
ಬೆಂಗಳೂರು: ಎಲ್ಲಾ ರಾಶಿಯವರಿಗೂ ಪ್ರತ್ಯೇಕ ಗುಣ ಸ್ವಭಾವಗಳಿರುತ್ತವೆ. ಆದರೆ ಪ್ರತಿಯೊಂದು ರಾಶಿಯವರೂ ಒಂದೊಂದು ವಿಚಾರಕ್ಕೆ ಇನ್ನೊಬ್ಬರಿಗೆ ಇಷ್ಟವಾಗುತ್ತಾರೆ. ಇಂದಿನಿಂದ ಯಾವ ರಾಶಿಯವರಲ್ಲಿ ಯಾವ ಒಳ್ಳೆಯ ಗುಣ ಸ್ವಭಾವಗಳಿರುತ್ತವೆ ನೋಡೋಣ.
ವೃಷಭ
ಉತ್ತಮ ಪ್ರೇಮಿಗಳಾಗುವ ಲಕ್ಷಣಗಳಿರುತ್ತವೆ. ಇವರು ತಮ್ಮ ಜೀವನದಲ್ಲಿ ಸಾಕಷ್ಟು ಯೋಜನೆಗಳನ್ನು ಮಾಡಿ ಹೆಜ್ಜೆ ಮುಂದಿಡುತ್ತಾರೆ. ತಮ್ಮ ಗುರಿ ಸಾಧನೆಗೆ ಬೇಕಾದ ದಾರಿ ಮಾಡಿಕೊಳ್ಳುತ್ತಾರೆ. ವೈಭೋಗದ ಜೀವನ ನಡೆಸುತ್ತಾರೆ. ಗೆಳೆಯರಾಗಿ ವಿಧೇಯರಾಗಿರುತ್ತಾರೆ ತಮ್ಮ ಪೋಷಕರಿಗೆ ಉತ್ತಮ, ವಿಧೇಯ ಮಕ್ಕಳಾಗಿರುತ್ತಾರೆ.