ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಬರುವ ತುಳಸಿ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ನವೆಂಬರ್ 13ರಂದು ದೇಶದಾದ್ಯಂತ ತುಳಸಿ ಹಬ್ಬವನ್ನು ಆಚರಿಸಲಾಗುತ್ತದೆ.
ಪ್ರತಿನಿತ್ಯವೂ ಎಲ್ಲರ ಮನೆಯಲ್ಲಿ ತುಳಸಿ ಪೂಜೆಯನ್ನು ಮಾಡಲಾಗುತ್ತದೆ. ಆದರೆ ತುಳಸಿ ಹಬ್ಬದ ದಿನ ವಿಶೇಷವಾದ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಬೆಳಗ್ಗೆ ಬೇಗನೇ ಎದ್ದು ಪುಣ್ಯ ಸ್ನಾನ ಮಾಡಿ, ಶುಭ್ರ ಬಟ್ಟೆ ತೊಟ್ಟು ಬಳಿಕ ತುಳಸಿ ಕಟ್ಟೆಯನ್ನು ಮದುವಣಗಿತ್ತಿಯಂತೆ ಅಲಂಕರಿಸಬೇಕು. ತುಳಸಿ ಕಟ್ಟೆಗೆ ಚಪ್ಪರ ನಿರ್ಮಾಣ ಮಾಡಿ ಅರಶಿನ ಕುಂಕುಮಗಳಿಂದ ಹಾಗೂ ಹೂವುಗಳಿಂದ ಕಟ್ಟೆಯನ್ನು ಸಿಂಗರಿಸಿ ಮಂಗಳ ದ್ರವ್ಯಗಳಿಂದ ಪೂಜಿಸಬೇಕು.
ತುಳಸಿ ಕಟ್ಟೆ ಎದುರು ರಂಗೋಲಿ ಬಿಡಿಸಬೇಕು. ತುಳಸಿ ಗಿಡಕ್ಕೆ ಹತ್ತಿಯಿಂದ ತಯಾರಿಸಿದ ಮಾಲೆಯನ್ನು ತೊಡಿಸಿ ವಿಷ್ಣು ಮತ್ತು ತುಳಸಿ ವಿವಾಹವನ್ನು ಭಕ್ತರು ಶ್ರದ್ಧಾಪೂರ್ವಕವಾಗಿ ಆಚರಿಸುತ್ತಾರೆ. ಸಂಜೆ ವೇಳೇ ತುಳಸಿ ಕಟ್ಟೆಯ ಸುತ್ತಾ ದೀಪವಿಟ್ಟು, ಭಜನೆಯನ್ನು ಮಾಡಗಲಾಗುತ್ತದೆ. ಇನ್ನೂ ಈ ಆಚರಣೆ ಒಂದು ಪ್ರದೇಶಕ್ಕಿಂತ ಮತ್ತೊಂದು ಪ್ರದೇಶದಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ ತುಳಸಿ ಪೂಜೆ ಅಥವಾ ತುಳಸಿ ವಿವಾಹ ನೆರವೇರಿಸುವ ಮೂಲಕ ಭಕ್ತರ ಹಿಂದಿನ ಜನ್ಮದ ಪಾಪಾಗಳು ನಾಶವಾಗಿ, ವೈವಾಹಿಕ ಜೀವನದಲ್ಲಿ ಕಲಹಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ದಂಪತಿಗಳ ಮಧ್ಯದಲ್ಲಿ ಪ್ರೀತಿ, ಸಂಷೋಷ ಹೆಚ್ಚಾಗುತ್ತದೆ. ಇನ್ನೂ ಮದುವೆಯಾಗದವರಿಗೆ ಕಂಕಣಭಾಗ್ಯ ಕೂಡಿಬರುತ್ತದೆ ಎಂಬ ನಂಬಿಕೆಯಿದೆ.