Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 2 ಏಪ್ರಿಲ್ 2023 (08:30 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವ್ಯಾವಹಾರಿಕವಾಗಿ ನಿಮಗೆ ಅಡ್ಡಿ ಮಾಡುತ್ತಿದ್ದವರಿಂದ ಮುಕ್ತಿ ಸಿಗುವುದು. ಸಾಂಸಾರಿಕವಾಗಿ ತಾಳ್ಮೆ, ಹೊಂದಾಣಿಕೆ ಅಗತ್ಯ. ನಿಮ್ಮ ಅಗತ್ಯವನ್ನೂ ಮೀರಿ ಖರ್ಚು ಮಾಡಲಿದ್ದೀರಿ. ಸಂಗಾತಿಯ ಸಲಹೆ ಪಾಲಿಸುವುದು ಉತ್ತಮ.

ವೃಷಭ: ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಭೇಟಿ ಸಾಧ‍್ಯತೆ. ಸಾಮಾಜಿಕವಾಗಿ ಸ್ಥಾನ ಮಾನ ಸಿಗಲಿದೆ. ಹಣಕಾಸಿನ ಹರಿವಿದ್ದರೂ ಖರ್ಚೂ ಇರಲಿದೆ. ಸಾಂಸಾರಿಕವಾಗಿ ನೆಮ್ಮದಿ ಕಂಡುಬರಲಿದೆ. ತಾಳ್ಮೆಯಿರಲಿ.

ಮಿಥುನ: ಗುರುಹಿರಿಯರ ಆಶೀರ್ವಾದವಿರಲಿದೆ. ಕಾರ್ಯರಂಗದಲ್ಲಿ ನಿರೀಕ್ಷಿತ ಸ್ಥಾನಮಾನ ಸಿಗುವುದು. ಹಿರಿಯರು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದೀರಿ. ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡುವ ಯೋಗ.

ಕರ್ಕಟಕ: ವಿದ್ಯಾರ್ಥಿಗಳಿಗೆ ಪರಿಶ್ರಮಪಡಬೇಕಾದ ಅನಿವಾರ್ಯತೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಹಣಕಾಶಿನ ವಿಚಾರದಲ್ಲಿ ಸ್ಪಷ್ಟತೆಯಿರಲಿ. ಸಂಗಾತಿಯಿಂದ ಮುಚ್ಚಿಟ್ಟಿದ್ದ ವಿಚಾರಗಳು ಬಯಲಾಗಲಿವೆ.

ಸಿಂಹ: ಕಾರ್ಯರಂಗದಲ್ಲಿ ನಿರೀಕ್ಷೆಗೂ ಮೀರಿದ ಸ್ಥಾನ ಮಾನ ಲಭ್ಯವಾಗಲಿದೆ. ದೇವತಾ ಸ್ಥಳ ಸಂದರ್ಶನ ಮಾಡಲಿದ್ದೀರಿ. ಕೆಲಸ ಕಾರ್ಯಕ್ಕೆ ಆದ್ಯತೆ ನೀಡಲಿದ್ದೀರಿ. ಆಸ್ತಿ ವಿವಾದಗಳನ್ನು ಹಿರಿಯರ ಮಧ‍್ಯಸ್ಥಿಕೆಯಲ್ಲಿ ಪರಿಹರಿಸಲಿದ್ದೀರಿ.

ಕನ್ಯಾ: ವ್ಯಾಪಾರಿಗಳಿಗೆ ಹೊಸ ಅವಕಾಶಗಳು ಕಂಡುಬರಲಿದೆ. ಆಪ್ತರ ಕಷ್ಟಗಳಿಗೆ ಸ್ಪಂದಿಸುವ ನಿಮ್ಮ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಂಡುಬರಲಿದೆ. ಸರಿಯಾಗಿ ಬಳಸಿಕೊಳ್ಳಿ.

ತುಲಾ: ಮನಸ್ಸಿನಲ್ಲಿರುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಕ್ರಿಯಾತ್ಮಕ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಇಷ್ಟಮಿತ್ರರೊಂದಿಗೆ ಇಷ್ಟಭೋಜನ ಮಾಡುವ ಯೋಗ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ವೃಶ್ಚಿಕ: ನಿಮ್ಮ ಮಾತಿನಿಂದ ಇತರರಿಗೆ ನೋವಾಗದಂತೆ ಎಚ್ಚರಿಕೆ ವಹಿಸಿ. ಕೌಟುಂಬಿಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಗಾತಿಯೊಂದಿಗೆ ಪರಾಮರ್ಶಿಸಿ. ಕಿರು ಸಂಚಾರ ಮಾಡಲಿದ್ದೀರಿ.

ಧನು: ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಹಣಕಾಸಿನ ಆದಾಯ ಹೆಚ್ಚಳಕ್ಕೆ ನಾನಾ ದಾರಿಗಳ ಬಗ್ಗೆ ಯೋಚನೆ ನಡೆಸಲಿದ್ದೀರಿ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಕರ: ಬಂಧು ಮಿತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಆರೋಗ್ಯಯ ತೊಂದರೆಯಾದೀತು. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ.

ಕುಂಭ: ಸರಕಾರೀ ನೌಕರರಿಗೆ ಬಿಡುವಿನ ದಿನದ ಖುಷಿ ಅನುಭವಿಸಲಿದ್ದಾರೆ. ಆತುರದ ನಿರ್ಧಾರ ಕೈಗೊಂಡರೆ ಅನಾಹುತ ತಪ್ಪದು. ಮಕ್ಕಳಿಗೆ ಅಚ್ಚರಿಯ ಉಡುಗೊರೆ ಮೂಲಕ ಸಂತೋಷ ನೀಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಮೀನ: ದೈಹಿಕ ಆರೋಗ್ಯ ಉತ್ತಮವಾಗಿದ್ದರೂ ಮಾನಸಿಕವಾಗಿ ಕಿರಿ ಕಿರಿ ಕಂಡುಬಂದೀತು. ಆಸ್ತಿ ವಿಚಾರದಲ್ಲಿ ಅಡೆತಡೆಗಳು ಎದುರಾದೀತು. ಹಿರಿಯರ ಸಲಹೆ ಪಾಲಿಸುವುದು ಉತ್ತಮ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

ಮುಂದಿನ ಸುದ್ದಿ
Show comments