ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಗುರುಹಿರಿಯರನ್ನು ಭೇಟಿಯಾಗುವ ಯೋಗ. ದಂಪತಿಗಳಲ್ಲಿ ಪರಸ್ಪರ ಸಹಕಾರ ಕಂಡುಬರುವುದು. ವಿದ್ಯಾರ್ಥಿಗಳಿಗೆ ಪೂರಕ ವಾತಾವರಣವಿರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರುವುದು.
ವೃಷಭ: ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷಿತ ಅಭಿವೃದ್ಧಿಯಿದ್ದರೂ ಹಿತಶತ್ರುಗಳ ಕಾಟ ಕಂಡುಬರಲಿದೆ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ. ಇಷ್ಟು ದಿನ ಮುಚ್ಚಿಟ್ಟಿದ್ದ ವಿಚಾರಗಳು ಬಯಲಾಗಲಿವೆ.
ಮಿಥುನ: ಆತುರದ ನಿರ್ಧಾರ ಅನಾಹುತಕ್ಕೆ ಕಾರಣವಾದೀತು. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ನೂತನ ಮಿತ್ರರನ್ನು ಸಂಪಾದಿಸಲಿದ್ದೀರಿ. ದಂಪತಿಗಳಲ್ಲಿ ಅನುರಾಗ ವೃದ್ಧಿಯಾಗಲಿದೆ. ತಾಳ್ಮೆಯಿರಲಿ.
ಕರ್ಕಟಕ: ವಿಶೇಷ ಅತಿಥಿಗಳನ್ನು ಸ್ವಾಗತಿಸಲಿದ್ದೀರಿ. ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ಇಷ್ಟ ಭೋಜನ ಮಾಡುವ ಯೋಗ. ಕಳೆದು ಹೋದ ವಸ್ತುವಿಗಾಗಿ ಹುಡುಕಾಟ ನಡೆಸಬೇಕಾದೀತು. ದೇವತಾ ಪ್ರಾರ್ಥನೆ ಮಾಡಿ.
ಸಿಂಹ: ಕಾರ್ಯಾನುಕೂಲಕ್ಕಾಗಿ ನಿಮ್ಮ ದೈನಂದಿಕ ಕೆಲಸಗಳಲ್ಲಿ ಕೆಲವು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಮಹಿಳೆಯರಿಗೆ ಅಲಂಕಾರಿ ವಸ್ತುಗಳ ಖರೀದಿ ಯೋಗ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.
ಕನ್ಯಾ: ನಿಮ್ಮ ಸಮಯೋಚಿತ ನಿರ್ಧಾರಕ್ಕೆ ತಕ್ಕ ಫಲ ಸಿಗಲಿದೆ. ಸಂಗಾತಿಯಿಂದ ಪ್ರಶಂಸೆಗೊಳಗಾಗಲಿದ್ದೀರಿ. ಮನೆಗೆ ಬಂಧು ಮಿತ್ರರ ಭೇಟಿ ಸಾಧ್ಯತೆ. ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಬೇಕಾಗುತ್ತದೆ.
ತುಲಾ: ಹೊಸದಾಗಿ ಆರಂಭಿಸಿದ್ದ ಉದ್ದಿಮೆ, ವ್ಯಾಪಾರದಿಂದ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲು ಕೆಲವು ದಿನ ಕಾಯಬೇಕಾದೀತು. ಕಿರು ಸಂಚಾರ ಮಾಡಲಿದ್ದೀರಿ.
ವೃಶ್ಚಿಕ: ನಿರುದ್ಯೋಗಿಗಳಿಗೆ ಯೋಗ್ಯತೆಗೆ ಅನುಸಾರವಾಗಿ ಉದ್ಯೋಗಾವಕಾಶಗಳು ಒದಗಿಬರಲಿವೆ. ನೆರೆಹೊರೆಯವರಿಗೆ ನಿಮ್ಮ ಕೈಲಾದ ಸಹಾಯ ಮಾಡಲಿದ್ದೀರಿ. ಹಿರಿಯರಿಗೆ ಧಾರ್ಮಿಕ ಸ್ಥಳಗಳ ಸಂದರ್ಶನ ಯೋಗ.
ಧನು: ಇಷ್ಟಾನುಸಾರ ನಿರ್ಧಾರ ತೆಗೆದುಕೊಳ್ಳಲು ಹೋದರೆ ಆತ್ಮೀಯರ ಅಸಮಾಧಾನಕ್ಕೆ ಗುರಿಯಾಗಬೇಕಾದೀತು. ಪರರಿಗೆ ವಾಗ್ದಾನ ಮಾಡುವ ಮೊದಲು ಎಚ್ಚರಿಕೆ ವಹಿಸಿ. ಅಧಿಕ ಪರಿಶ್ರಮದಿಂದ ದೇಹಾಯಾಸವಾದೀತು. ಎಚ್ಚರಿಕೆಯಿರಲಿ.
ಮಕರ: ನಿಮ್ಮ ಭವಿಷ್ಯಕ್ಕೆ ಪೂರಕವಾದ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದ್ದೀರಿ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿಂದಿರಿ. ದಂಪತಿಗಳಲ್ಲಿ ಅನುರಾಗ ವೃದ್ಧಿಯಾಗಲಿದೆ. ಅನಗತ್ಯ ಚಿಂತೆ ಬೇಡ.
ಕುಂಭ: ಮಕ್ಕಳಿಂದ ನಿಮ್ಮ ಸಂತೋಷ ಇಮ್ಮಡಿಯಾದೀತು. ಸಂಗಾತಿಯ ಕೆಲವೊಂದು ಸಲಹೆಗಳು ನಿಮಗೆ ಪಥ್ಯವಾಗದೇ ಹೋದೀತು. ದೀರ್ಘ ಪ್ರಯಾಣದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ತಾಳ್ಮೆ ಅಗತ್ಯ.
ಮೀನ: ಹೊಸ ಸ್ಥಳಗಳ ಸಂದರ್ಶನ ಯೋಗ. ಪರಿಚಿತರಿಂದಲೇ ವಂಚನೆಗೊಳಗಾಗುವ ಭೀತಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿಯಿರಲಿದೆ. ವಿದ್ಯಾರ್ಥಿಗಳಿಗೆ ಅನುಕೂಲವಿರುವುದು.