ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 9 ಮಾರ್ಚ್ 2023 (08:10 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಅತಿಯಾಗಿ ಇನ್ನೊಬ್ಬರ ಮೇಲಿಟ್ಟಿದ್ದ ನಂಬಿಕೆಯಿಂದ ನೋವು ಅನುಭವಿಸುವ ಸ್ಥಿತಿ ಬಂದೀತು. ಮೇಲಧಿಕಾರಿಗಳೊಂದಿಗೆ ವಾದ,ವಿವಾದವಾಗುವ ಸಾಧ‍್ಯತೆ. ಮಾತಿನ ಮೇಲೆ ನಿಗಾ ಇರಲಿ.

ವೃಷಭ: ಬೇರೆಯವರು ನಿಮ್ಮ ತಪ್ಪಿನ ಬಗ್ಗೆ ಹೇಳಿದಾಗ ಕಿರಿ ಕಿರಿಯಾಗಿ ವಾದ ಮಾಡಲಿದ್ದೀರಿ. ಮಕ್ಕಳಿಂದ ಸಂತೋಷ, ನೆಮ್ಮದಿ ಸಿಗಲಿದೆ. ಮಾತೃ ಸಮಾನರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ದುಂದು ವೆಚ್ಚ ಬೇಡ.

ಮಿಥುನ: ಉದ್ಯೋಗ ಸಂಬಂಧವಾದ ವಿಚಾರಗಳು ನಿಮ್ಮ ಮನಸ್ಸಿನ ಚಿಂತೆ ಹೆಚ್ಚಿಸಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ನಿರುದ್ಯೋಗಿಗಳಿಗೆ ನಿರ್ಣಾಯಕ ದಿನ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಬೇರೆಯವರ ವಿಚಾರದಲ್ಲಿ ಮೂಗು ತೂರಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ವ್ಯವಹಾರಗಳಲ್ಲಿ ಇದುವರೆಗೆ ಇದ್ದ ಅಡ್ಡಿ ಆತಂಕಗಳು ನಿವಾರಣೆಯಾಗಲಿವೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು.

ಸಿಂಹ: ನಿಮ್ಮ ಕೆಲಸ ಕಾರ್ಯಗಳಲ್ಲಿ ಕುಟುಂಬ ಸದಸ್ಯರ ಸಹಕಾರ, ಸಾಥ್ ಸಿಗುವುದು. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ. ಅವಿವಾಹಿತರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿವೆ.

ಕನ್ಯಾ: ಮನಸ್ಸಿಗೆ ಹಿಡಿಸಿದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಮಕ್ಕಳ ದೇಹಾರೋಗ್ಯ  ಚಿಂತೆಗೆ ಕಾರಣವಾದೀತು. ಸಂಗಾತಿಯೊಂದಿಗೆ ಹೊಂದಾಣಿಕೆಯಿರಲಿ. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.

ತುಲಾ: ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಪರಾಮರ್ಶಿಸಿ ಮುಂದುವರಿಯಿರಿ. ಆಸ್ತಿ ವಿಚಾರಗಳ ವಿವಾದ ಪರಿಹಾರಕ್ಕೆ ಹಿರಿಯರ ಸಲಹೆ ಪಡೆಯಲಿದ್ದೀರಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ.

ವೃಶ್ಚಿಕ: ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷಿತ ಲಾಭವಿಲ್ಲದಿದ್ದರೂ ನಷ್ಟವಂತೂ ಆಗದು. ಸಂಗಾತಿಯ ಸಮಯೋಚಿತ ಸಲಹೆ ಉಪಯೋಗಕ್ಕೆ ಬರಲಿದೆ. ಮಕ್ಕಳ ಸಂತೋಷದಲ್ಲಿ ಭಾಗಿಯಾಗಲಿದ್ದೀರಿ. ಕಿರು ಓಡಾಟ ನಡೆಸಬೇಕಾಗುತ್ತದೆ.

ಧನು: ಸಂತಾನಹೀನ ದಂಪತಿ ದೇವರ ಮೊರೆ ಹೋಗಲಿದ್ದೀರಿ. ನಿರುದ್ಯೋಗಿಗಳಿಗೆ ಯೋಗ್ಯತೆಗೆ ಅನುಸಾರವಾದ ಉದ್ಯೋಗ ಲಭಿಸಲಿದೆ. ಹಣಕಾಸಿನ ವಿಚಾರದಲ್ಲಿ ಕಟ್ಟು ನಿಟ್ಟು ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿ ನಿಮ್ಮ ಹೆಗಲಿಗೇರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಕೋರ್ಟು ಕಚೇರಿ ಕೆಲಸಗಳಲ್ಲಿ ಮುನ್ನಡೆ ಕಂಡುಬರುವುದು. ದೈಹಿಕ ಆರೋಗ್ಯದಲ್ಲಿ ಸುಧಾರಣೆ.

ಕುಂಭ: ಅಂದುಕೊಂಡ ಕೆಲಸ ನಿಗದಿತ ಸಮಯಕ್ಕೆ ಪೂರ್ತಿ ಮಾಡಲಾಗದೇ ಕಿರಿ ಕಿರಿ ಅನುಭವಿಸಲಿದ್ದೀರಿ. ಬಹಳ ದಿನಗಳ ನಂತರ ಆಪ್ತ ಮಿತ್ರರನ್ನು ಭೇಟಿಯಾಗಿ ಮನಸ್ಸಿಗೆ ಸಂತೋಷವಾಗಲಿದೆ. ಕುಲದೇವರ ಪ್ರಾರ್ಥನೆ ಮಾಡಿ.

ಮೀನ: ಪಾಲುದಾರಿಕಾ ಕ್ಷೇತ್ರದಲ್ಲಿ ವ್ಯವಹಾರ ಮಾಡುವವರಿಗೆ ಕೆಲವೊಂದು ಅಡ್ಡಿ ಆತಂಕಗಳು ಎದುರಾದೀತು. ತೊಂದರೆಗಳು ಬಂದರೂ ಸಮಯೋಚಿತವಾಗಿ ಪರಿಹಾರವೂ ಸಿಗಲಿದೆ. ಅನಗತ್ಯ ಚಿಂತೆ ಬೇಡ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಕರ ಸಂಕ್ರಾಂತಿ ನಾಳೆಯಾ, ನಾಡಿದ್ದಾ.. ಕನ್ ಫ್ಯೂಷನ್ ಬೇಡ ಇಲ್ಲಿ ನೋಡಿ

ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ

ಕಾಶೀ ವಿಶ್ವನಾಥನ ಭಕ್ತರಾಗಿದ್ದರೆ ಈ ಸ್ತೋತ್ರ ತಪ್ಪದೇ ಓದಿ

ಶನಿ ದೋಷ ನಿವಾರಣೆಗೆ ದಶರಥ ಕೃತ ಶನಿ ಮಂತ್ರ ಕನ್ನಡದಲ್ಲಿ

ಅಭಿವೃದ್ಧಿಗಾಗಿ ಲಕ್ಷ್ಮೀ ದೇವಿಯ ಈ ಮಂತ್ರ ಪಠಿಸಿ

ಮುಂದಿನ ಸುದ್ದಿ
Show comments