ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 26 ಫೆಬ್ರವರಿ 2023 (08:40 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಅವಿವಾಹಿತರಿಗೆ ವಿವಾಹ ಯೋಗ. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ಅನ್ಯರ ವಿಚಾರದಲ್ಲಿ ಅನಗತ್ಯ ಮೂಗು ತೂರಿಸಲು ಹೋಗಬೇಡಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು.

ವೃಷಭ: ಬಹುದಿನಗಳ ನಿಮ್ಮ ಬೇಡಿಕೆ ಇಂದು ಈಡೇರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರಲಿದೆ. ಬಹಳ ದಿನಗಳ ನಂತರ ಆಪ್ತರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಹೊಸ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ಸ್ವಯಂ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದವರಿಗೆ ಆರ್ಥಿಕವಾಗಿ ಲಾಭವಾದೀತು. ಆದರೆ ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ. ಕೌಟುಂಬಿಕವಾಗಿ ಸುಖ ಸಮೃದ್ಧಿಯಿದ್ದರೂ ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ.

ಸಿಂಹ: ಮನಸ್ಸಿಗೆ ಉಲ್ಲಾಸ ಕೊಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಗೃಹ, ವಾಹನ ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚವಾದೀತು. ಮಕ್ಕಳ ಭವಿಷ್ಯದ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ‍್ಳಲಿದ್ದೀರಿ.

ಕನ್ಯಾ: ಮನೆಗೆ ಅನಿರೀಕ್ಷಿತ ಬಂಧು ಮಿತ್ರರ ಭೇಟಿ ಸಾಧ್ಯತೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ತೋರಿಬರಲಿವೆ. ಬಹಳ ದಿನಗಳ ನಂತರ ಬಂಧು ಮಿತ್ರರನ್ನು ಭೇಟಿಯಾಗುವ ಯೋಗ ನಿಮ್ಮದಾಗಲಿದೆ.

ತುಲಾ: ಆಪ್ತರೊಂದಿಗೆ ಸುಂದರ ಕ್ಷಣ ಕಳೆಯುವ ಯೋಗ ನಿಮ್ಮದಾಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳು ನೆರವೇರಲಿವೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.

ವೃಶ್ಚಿಕ: ಸರಕಾರೀ ನೌಕರರು ಬಿಡುವಿನ ದಿನದ ಸದುಪಯೋಗ ಮಾಡಲಿದ್ದಾರೆ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಮಹಿಳೆಯರಿಗೆ ಅಡುಗೆ ಮನೆ ಕೆಲಸದ ಸಂದರ್ಭದಲ್ಲಿ ಸಣ್ಣ ಪುಟ್ಟ ತೊಂದರೆಗಳು ಎದುರಾದೀತು. ಎಚ್ಚರ.

ಧನು: ಮನೆಗೆ ಅತಿಥಿಗಳ ಆಗಮನವಾಗಲಿದೆ. ಹಣಕಾಸಿನ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ. ಆದಾಯ ವೃದ್ಧಿಗೆ ನಾನಾ ದಾರಿಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಮನಸ್ಸಿನ ಸಂತೋಷಕ್ಕಾಗಿ ಪ್ರಯಾಣ ಮಾಡಲಿದ್ದೀರಿ.

ಮಕರ: ಮನೆಯಲ್ಲಿ ನೀವು ಕೈಗೊಳ್ಳುವ ಕೆಲವೊಂದು ನಿರ್ಧಾರಗಳು ಇತರರ ಅಸಮಾಧಾನಕ್ಕೆ ಗುರಿಯಾದೀತು. ಮಾತಿನ ಮೇಲೆ ನಿಗಾ ಇರಲಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ತಾಳ್ಮೆಯಿರಲಿ.

ಕುಂಭ: ಅಧಿಕ ಧನವ್ಯಯವಾಗುವುದರಿಂದ ಚಿಂತೆಯಾದೀತು. ಸಂಗಾತಿಯ ಸಾಂತ್ವನ ಮನಸ್ಸಿಗೆ ನೆಮ್ಮದಿ ನೀಡಲಿದೆ. ಮಕ್ಕಳ ವಿಚಾರದಲ್ಲಿ ಆತುರದ ನಿರ್ದಾರ ಬೇಡ. ಅನಗತ್ಯ ವಿಚಾರಗಳಿಗೆ ಆದ್ಯತೆ ಕೊಡಬೇಡಿ.

ಮೀನ: ಕಾರ್ಯನಿಮಿತ್ತ ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆಯಿರಲಿದೆ. ನಿಮ್ಮಿಂದ ಸಾಲ ಪಡೆದವರು ಹಣ ಹಿಂತಿರುಗಿಸಲು ಸತಾಯಿಸಲಿದ್ದಾರೆ. ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿ ಹೆಗಲಿಗೇರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಕಾಲಭೈರವ ಬ್ರಹ್ಮ ಕವಚಂ ಸ್ತೋತ್ರವನ್ನು ತಪ್ಪದೇ ಓದಿ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ಮುಂದಿನ ಸುದ್ದಿ
Show comments