Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 21 ಫೆಬ್ರವರಿ 2023 (08:20 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಉದ್ಯೋಗ, ವ್ಯವಹಾರದಲ್ಲಿ ಅನಿರೀಕ್ಷಿತ ಬದಲಾವಣೆಗೆ ಸಿದ್ಧರಾಗಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಆಪ್ತರಿಂದಲೇ ಸಮಸ್ಯೆಗಳಾದೀತು. ಅಧ್ಯಯನ ಪ್ರವೃತ್ತರಿಗೆ ಉನ್ನತ ಅವಕಾಶಗಳು ಸಿಗಲಿವೆ.

ವೃಷಭ: ದೂರದ ವ್ಯವಹಾರಗಳಿಂದ ಅನಿರೀಕ್ಷಿತ ಲಾಭವಾದೀತು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.

ಮಿಥುನ: ಕೆಲಸ ಕಾರ್ಯದಲ್ಲಿ ತಲ್ಲೀನತೆ ಕಂಡುಬರಲಿದೆ. ಉತ್ತಮ ವಾಕ್ಚರತೆಯಿಂದ ಎಲ್ಲರ ಮನಸ್ಸು ಗೆಲ್ಲಲಲಿದ್ದೀರಿ. ಹೊಸದಾಗಿ ಪರಿಚಿತರಾದವರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಹಾಯವಾಗಲಿದೆ. ತಾಳ್ಮೆಯಿರಲಿ.

ಕರ್ಕಟಕ: ಕಾರ್ಯರಂಗದಲ್ಲಿ ಒಳ್ಳೆಯ ಸಮಯಕ್ಕಾಗಿ ಕಾಯಬೇಕಾದೀತು. ಕೌಟುಂಬಿಕವಾಗಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಿದ್ದೀರಿ. ಸಂಗಾತಿಯ ಸಹಕಾರ ಸಿಗಲಿದೆ. ದೇವತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೀರಿ.

ಸಿಂಹ: ನಿಮ್ಮ ದೂರದೃಷ್ಟಿಯಿಂದ ಸಂಭಾವ್ಯ ಸಮಸ್ಯೆಗಳು ದೂರವಾಗಲಿದೆ. ಗುರುಹಿರಿಯರಿಂದ ಸೂಕ್ತ ಸಮಯದಲ್ಲಿ ಸಲಹೆಗಳು ಸಿಗಲಿವೆ. ದಾಯಾದಿ ಕಲಹಗಳು ನಿವಾರಣೆಯಾಗಲಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ಅವಿವಾಹಿತರಿಗೆ ಯೋಗ್ಯ ವೈವಾಹಿಕ ಸಂಬಂಧಗಳು ಬರಲಿವೆ. ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಮಕ್ಕಳ ಸಂತೋಷದಲ್ಲಿ ಭಾಗಿಯಾಗಲಿದ್ದೀರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ತುಲಾ: ಮನಸ್ಸಿನಲ್ಲಿರುವ ವಿಚಾರಗಳನ್ನು ಆಪ್ತರೊಂದಿಗೆ ಹೇಳಿಕೊಳ್ಳಲಾಗದೇ ಒದ್ದಾಡಬೇಕಾಗುತ್ತದೆ. ಮನೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಇತರ ಸದಸ್ಯರ ಅಭಿಪ್ರಾಯ ಪಡೆದುಕೊಳ್ಳುವುದು ಉತ್ತಮ.

ವೃಶ್ಚಿಕ: ಸರಕಾರೀ ಉದ್ಯೋಗಿಗಳಿಗೆ ಉನ್ನತಿಯ ಯೋಗವಿದೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ಕ್ರಯ, ವಿಕ್ರಯ ವ್ಯವಹಾರಗಳಲ್ಲಿ ಲಾಭವಾದೀತು. ಇಷ್ಟಮಿತ್ರರೊಂದಿಗೆ ಸಮಯ ಕಳೆಯಲಿದ್ದೀರಿ.

ಧನು: ವಿಶೇಷ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸಲಿದ್ದೀರಿ. ಬಾಯಿ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಆರೋಗ್ಯ ಸಮಸ್ಯೆಯಾದೀತು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಕಂಡುಬರುವುದು. ಚಿಂತೆ ಬೇಡ.

ಮಕರ: ಆರ್ಥಿಕ ವಿಚಾರದಲ್ಲಿ ಅಪರಿಚಿತರನ್ನು ನಂಬಿ ವ್ಯವಹರಿಸಲು ಹೋಗಬೇಡಿ. ಸರಕಾರೀ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಬಂದರೂ ಅಂತಿಮ ಜಯ ನಿಮ್ಮದಾಗುವುದು. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ಸಾಂಸಾರಿಕವಾಗಿ ಮಧ್ಯಮ ಸುಖ. ಹಿಂದೆ ಮಾಡಿದ ಕೆಲವು ತಪ್ಪುಗಳಿಗೆ ಇಂದು ಬೆಲೆ ತೆರಬೇಕಾಗುತ್ತದೆ. ಯಾವುದೇ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯಿರಲಿ.

ಮೀನ: ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?