Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 19 ಫೆಬ್ರವರಿ 2023 (08:20 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಉದ್ಯೋಗ, ವ್ಯವಹಾರದಲ್ಲಿ ಅಡಚಣೆಗಳು ನಿವಾರಣೆಯಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಸಾಂಸಾರಿಕವಾಗಿ ನೆಮ್ಮದಿ ಕಂಡುಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ತಾಳ್ಮೆ, ಸಂಯಮವಿರಲಿ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಪ್ರಯತ್ನಿಸಲಿದ್ದೀರಿ. ಸರಕಾರೀ ನೌಕರರಿಗೆ ಬಿಡುವಿನ ಸಂತೋಷವಿರಲಿದೆ. ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡುವ ಯೋಗ. ಕಿರು ಓಡಾಟ ನಡೆಸಬೇಕಾಗುತ್ತದೆ.

ಮಿಥುನ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳನ್ನು ಹೊರಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ಕರ್ಕಟಕ: ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗದು. ಇಷ್ಟ ಭೋಜನ ಮಾಡುವ ಯೋಗವಿದೆ. ಕೌಟುಂಬಿಕವಾಗಿ ಸಂತೋಷದಾಯಕ ದಿನವಾಗಿರಲಿದೆ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಗೆ ಒತ್ತು ನೀಡಿ.

ಸಿಂಹ: ಮಕ್ಕಳ ನಿಮಿತ್ತ ಖರ್ಚು ವೆಚ್ಚಗಳು ಕಂಡುಬಂದೀತು. ಹಿರಿಯರ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಕ್ರಿಯಾತ್ಮಕವಾಗಿ ಯೋಚಿಸಿ ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆಯ ಕೊರತೆ ಉಂಟಾದೀತು. ಗುರುಹಿರಿಯರ ಸಲಗೆ ಪಾಲಿಸುವುದು ಉತ್ತಮ.

ತುಲಾ: ನಿಮ್ಮಲ್ಲಿರುವ ಇಚ್ಛಾಶಕ್ತಿಯ ಕೊರತೆಯಿಂದ ಕೆಲವು ಕೆಲಸಗಳು ನಿಧಾನವಾದೀತು. ಹೊಸದಾಗಿ ಪರಿಚಿತರಾದವರಿಂದ ಸಹಾಯವಾಗಲಿದೆ. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂದ ವರ್ತಿಸಿ.

ವೃಶ್ಚಿಕ: ಹಿರಿಯರಿಂದ ಬಂದ ಬಳವಳಿ ಸಂರಕ್ಷಿಸುವ ಹೊಣೆಗಾರಿಕೆ ನಿಮ್ಮ ಮೇಲಿರಲಿದೆ. ಸಹೋದರರೊಂದಿಗಿನ ಭಿನ್ನಾಭಿಪ್ರಾಯಗಳು ದೂರವಾದೀತು. ಕಾರ್ಯ ಸಾಧನೆಗೆ ಓಡಾಟ ನಡೆಸಬೇಕಾದೀತು.

ಧನು: ಮನೆಯಲ್ಲಿ ಬಂಧು ಮಿತ್ರರ ಸ್ವಾಗತಕ್ಕೆ ಸಿದ್ಧತೆ ನಡೆಸಲಿದ್ದೀರಿ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಆರ್ಥಿಕವಾಗಿ ಹಳೆಯ ಬಾಕಿ ಸಂದಾಯವಾಗಲಿದೆ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸತತ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ತೋರಿಬಂದರೂ ಸಕಾಲದಲ್ಲಿ ನೆರವು ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ಕುಂಭ: ವಿಶೇಷ ವ್ಯಕ್ತಿಗಳು ನಿಮ್ಮ ಜೀವನಕ್ಕೆ ಇಂದು ಹೊಸ ತಿರುವು ನೀಡಲಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರಿಂದ ಮೆಚ್ಚುಗೆ ಸಿಗುವುದು. ತಾಂತ್ರಿಕ ವೃತ್ತಿಯವರಿಗೆ ಕೆಲಸದೊತ್ತಡ ಕಂಡುಬಂದೀತು. ತಾಳ್ಮೆಯಿರಲಿ.

ಮೀನ: ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳಿಗಾಗಿ ಧನ ವ್ಯಯವಾದೀತು. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹಣಕಾಸಿನ ಸಮಸ್ಯೆ ನಿವಾರಣೆಗೆ ಇಂದು ಈ ಸ್ತೋತ್ರ ಓದಿ

ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments