ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಸಹೋದರ ಸಮಾನರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ನೆರವು ಕಂಡುಬಂದೀತು. ಆರ್ಥಿಕವಾಗಿ ಕೆಲವೊಂದು ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಬೇಕಾಗುತ್ತದೆ. ಅನಗತ್ಯ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ.
ವೃಷಭ: ನಿಮ್ಮ ಬಗ್ಗೆ ನಿಮಗೇ ಕೀಳರಿಮೆ ಬರುವಂತಹ ಮಾತುಗಳು ಕೇಳಿಬಂದೀತು. ದೇವತಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ನಯವಂಚಕರಿಂದ ದೂರವಿದ್ದರೆ ಉತ್ತಮ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.
ಮಿಥುನ: ನಿಮ್ಮ ವಿಲಾಸೀ ಜೀವನಕ್ಕೆ ಕಡಿವಾಣ ಬೀಳಲಿದೆ. ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿ ಹೆಗಲಿಗೇರಲಿದೆ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಶ್ರೇಯಸ್ಸು.
ಕರ್ಕಟಕ: ಆರ್ಥಿಕವಾಗಿ ಹಣ ಸಬಲರಾಗಲು ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ನಿಮ್ಮ ಯೋಜನೆಗಳಿಗೆ ಸಂಗಾತಿಯಿಂದ ಅಪಸ್ವರ ಕೇಳಿಬಂದೀತು. ಮಕ್ಕಳ ವಿಚಾರದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೀರಿ.
ಸಿಂಹ: ಕಾರ್ಯರಂಗದಲ್ಲಿ ಅಧಿಕ ದೇಹಕ್ಕೆ ಶ್ರಮ ಕೊಡುವ ಕೆಲಸ ಮಾಡಬೇಕಾದೀತು. ಆತ್ಮ ಮಿತ್ರರನ್ನು ಭೇಟಿಯಾಗುವ ಯೋಗವಿದೆ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ. ಕಿರು ಸಂಚಾರ ಮಾಡಬೇಕಾಗುತ್ತದೆ.
ಕನ್ಯಾ: ಅನ್ಯರ ವ್ಯವಹಾರದಲ್ಲಿ ಮೂಗು ತೂರಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಸಂಗಾತಿಯ ಮಾತಿಗೆ ಸಹಮತಿ ಸೂಚಿಸಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.
ತುಲಾ: ಕೌಟುಂಬಿಕವಾಗಿ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಲಿದೆ. ಆತ್ಮೀಯರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಅತಿಥಿಗಳ ಆಗಮನ ಸಾಧ್ಯತೆ.
ವೃಶ್ಚಿಕ: ಪಾಲಿನ ವ್ಯವಹಾರದಲ್ಲಿ ಹಿರಿಯರ ತೀರ್ಮಾನ ಒಪ್ಪಿಕೊಳ್ಳಬೇಕಾಗುತ್ತದೆ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಭವಿಷ್ಯಕ್ಕಾಗಿ ಉಳಿತಾಯ ಯೋಜನೆ ಹಾಕಿಕೊಳ್ಳಲಿದ್ದೀರಿ. ಮಕ್ಕಳಿಂದ ಸಂತೋಷ, ನೆಮ್ಮದಿ ಸಿಗುವುದು.
ಧನು: ಗೃಹ ನಿರ್ಮಾಣ, ರಿಪೇರಿ ಕೆಲಸಗಳಲ್ಲಿ ಮುನ್ನಡೆ ಕಂಡುಬರಲಿದೆ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಕೈಲಾಗದವರಿಗೆ ಸಹಾಯ ಮಾಡಿದ ನೆಮ್ಮದಿ ನಿಮ್ಮದಾಗುವುದು. ವಿದ್ಯಾರ್ಥಿಗಳಿಗೆ ಮುನ್ನಡೆ.
ಮಕರ: ಉದ್ಯೋಗ ಸಂಬಂಧವಾಗಿ ಪರವೂರಿಗೆ ಸಂಚರಿಸಬೇಕಾದೀತು. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಚಿಂತನೆ ನಡೆಸಲಿದ್ದೀರಿ.
ಕುಂಭ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಪ್ರಶಂಸೆಗೊಳಗಾಗಲಿದ್ದೀರಿ. ಹಣಕಾಸಿನ ವ್ಯವಾಹರದಲ್ಲಿ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ.
ಮೀನ: ವಿದ್ಯಾರ್ಥಿಗಳಲ್ಲಿ ಹೊಸ ವಿಚಾರಗಳನ್ನು ಕಲಿಯುವ ಉತ್ಸಾಹ ಕಂಡುಬರಲಿದೆ. ದೈವಾನುಕೂಲದಿಂದ ಇಂದು ನೀವು ಅಂದುಕೊಂಡ ಕೆಲಸಗಳು ನೆರವೇರಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಕಂಡುಬರುವುದು.