Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 22 ಜನವರಿ 2023 (09:00 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಉದ್ಯೋಗ, ವ್ಯವಹಾರ ನಿಮಿತ್ತ ಪರವೂರಿಗೆ ಪ್ರಯಾಣ ಮಾಡಬೇಕಾಗುತ್ತದೆ. ಭೂಮ್ಯಾದಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ಸಾಂಸಾರಿಕವಾಗಿ ತಾಳ್ಮೆ ಕಳೆದುಕೊಳ್ಳುವ ಪ್ರಸಂಗಗಳು ಎದುರಾಗಲಿವೆ.

ವೃಷಭ: ದೇವತಾ ಕಾರ್ಯದಲ್ಲಿ ಭಾಗಿಯಾಗಲಿದ್ದು ಮನಸ್ಸಿಗೆ ನೆಮ್ಮದಿಯಾಗಲಿದೆ. ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ‍್ಯತೆಯಿದೆ. ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಬೇಕಾಗುತ್ತದೆ.

ಮಿಥುನ: ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನ ಸಾಧ‍್ಯತೆ. ಇಷ್ಟಭೋಜನ ಮಾಡಲಿದ್ದೀರಿ. ಧನಾರ್ಜನೆಗೆ ನಾನಾ ದಾರಿಗಳನ್ನು ಕಂಡುಕೊಳ್ಳಲಿದ್ದೀರಿ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ.

ಕರ್ಕಟಕ: ಉದ್ಯೋಗ, ವ್ಯವಹಾರಗಳಲ್ಲಿ ಹೊಸತನದ ಪ್ರಯೋಗಕ್ಕೆ ಸಿದ್ಧರಾಗಬೇಕಾಗುತ್ತದೆ. ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡಲಿದ್ದೀರಿ. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ಸಂಶೋಧನಾ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಅಡೆತಡೆಗಳು ಬಂದೀತು. ವಿದ್ಯಾರ್ಥಿಗಳು ಹೊಸ ವಿಚಾರವನ್ನು ಕಲಿಯಲು ಆಸಕ್ತಿ ತೋರಿಸಲಿದ್ದಾರೆ. ವ್ಯಾಪಾರೀ ವರ್ಗದವರಿಗೆ ಆರ್ಥಿಕ ಮುನ್ನಡೆ ಕಂಡುಬರಲಿದೆ.

ಕನ್ಯಾ: ಉದ್ದೇಶಿತ ಕೆಲಸಗಳು ಪೂರ್ತಿಯಾಗುವುದರಿಂದ ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ.

ತುಲಾ: ನಿರೀಕ್ಷಿತ ಸಮಯದಲ್ಲಿ ಧನಾಗಮನವಾಗುವುದರಿಂದ ಉದ್ದೇಶಿತ ಕೆಲಸಗಳು ಸುಗಮವಾಗಿ ನೆರವೇರಲಿದೆ. ನೆರೆಹೊರೆಯವರೊಂದಿಗೆ ಅನಗತ್ಯ ವಾದ ವಿವಾದ ಬೇಡ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ಆತ್ಮೀಯರೊಂದಿಗೆ ಘರ್ಷಣೆಯಾಗದಂತೆ ಎಚ್ಚರಿಕೆ ವಹಿಸಿ. ಪಾಲು ಬಂಡವಾಳ ವ್ಯವಹಾರದಲ್ಲಿ ಪಾರದರ್ಶಕತೆಗೆ ಒತ್ತು ನೀಡಿ. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ.

ಧನು: ವಿಶೇಷ ವ್ಯಕ್ತಿಗಳನ್ನು ನೀವು ಇಂದು ಭೇಟಿ ಮಾಡಲಿದ್ದು, ಮನಸ್ಸಿಗೆ ಸಂತೋಷವಾಗಲಿದೆ. ಗೃಹದಲ್ಲಿ ಸಂತೋಷದ ವಾತಾವರಣವಿರಲಿದೆ. ದೇಹಾರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಚಿಂತೆ ಬೇಡ.

ಮಕರ: ಪ್ರೀತಿ ಪಾತ್ರರನ್ನು ಭೇಟಿ ಮಾಡಲು ಮನಸ್ಸು ಹಾತೊರೆಯಲಿದೆ. ಮಹಿಳೆಯರು ಮನೆಯಲ್ಲಿ ವಿಶೇಷ ಭೋಜನ ತಯಾರಿಸಲಿದ್ದಾರೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಒದಗಿಬರುವುದು. ದಿನದಂತ್ಯಕ್ಕೆ ನೆಮ್ಮದಿ.

ಕುಂಭ: ಬಹಳ ದಿನಗಳ ನಂತರ ಆತ್ಮೀಯರನ್ನು ಭೇಟಿ ಮಾಡಿದ ಸಂತೋಷ ನಿಮ್ಮದಾಗಲಿದೆ. ನೀವು ಕೈಗೊಳ್ಳುವ ಕೆಲಸಕ್ಕೆ ಕುಟುಂಬದವರ ಸಹಕಾರವಿರಲಿದೆ. ಮಾತೃ ಸಮಾನರ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ.

ಮೀನ: ಮಕ್ಕಳ ವಿಚಾರದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೀರಿ. ಹೊಸ ಉದ್ಯೋಗಕ್ಕಾಗಿ ಪ್ರಯತ್ನ ಮುಂದುವರಿಸಲಿದ್ದೀರಿ. ಹೂಡಿಕೆ ವ್ಯವಹಾರಗಳಲ್ಲಿ ಧನಾದಾಯ ಹೆಚ್ಚಳವಾಗಲಿದೆ. ಚಿಂತೆ ಬೇಡ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?