ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 19 ಜನವರಿ 2023 (08:30 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಹಠಮಾರೀ ಮನೋಭಾವ ಬಿಟ್ಟು ಕೆಲಸ ಕಾರ್ಯದಲ್ಲಿ ಪರಸ್ಪರ ಸಹಕಾರ ತೋರಿದರೆ ಯಶಸ್ಸು ನಿಮ್ಮದಾಗಲಿದೆ. ಮಕ್ಕಳ ವಿಚಾರದಲ್ಲಿ ಅಸಡ್ಡೆ ಬೇಡ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಅನಗತ್ಯ ಚಿಂತೆ ಬೇಡ.

ವೃಷಭ: ಬೇಡದ ಯೋಚನೆಗಳಿಂದಾಗಿ ಮನಸ್ಸು ಭಾರವಾದೀತು. ಆಪ್ತರೊಂದಿಗೆ ಮನಸ್ಸಿನ ಮಾತು ಹಂಚಿಕೊಳ್ಳಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.

ಮಿಥುನ: ಧಾರ್ಮಿಕ ಚಟುವಟಿಕೆಯಲ್ಲಿ ಭಾಗಿಯಾಗಲಿದ್ದು, ಮನಸ್ಸಿಗೆ ನೆಮ್ಮದಿಯಾಗಲಿದೆ. ಹಿರಿಯರಿಗೆ ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ ಕಾಣಿಸಿಕೊಂಡೀತು. ಹೊಸದಾಗಿ ಮದುವೆಯಾದವರಿಗೆ ಸುಂದರ ಕ್ಷಣ ಕಳೆಯುವ ಯೋಗ.

ಕರ್ಕಟಕ: ಉದ್ಯೋಗ, ವ್ಯವಹಾರದಲ್ಲಿ ನಿಮ್ಮ ಪ್ರಾಮಾಣಿಕತೆಗೆ ತಕ್ಕ ಪ್ರಯತ್ನ ಸಿಗಲಿದೆ. ಗುರುಹಿರಿಯರ ಮಾರ್ಗದರ್ಶನದಿಂದ ಲಾಭವಾಗಲಿದೆ. ಆಸ್ತಿ ವಿವಾದಗಳು ಬಗೆಹರಿಯಲಿವೆ. ಚಿಂತೆ ಬೇಡ.

ಸಿಂಹ: ಇನ್ನೊಬ್ಬರ ಮೇಲೆ ಅತಿಯಾದ ಅವಲಂಬನೆಯೂ ಒಳ್ಳೆಯದಲ್ಲ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆ ಮೂಲಕ ಸಂತೋಷ ನೀಡಲಿದ್ದೀರಿ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಕಿರು ಸಂಚಾರ ಮಾಡಲಿದ್ದೀರಿ.

ಕನ್ಯಾ: ನಿಮ್ಮ ಸಾಮರ್ಥ್ಯ ಮೀರಿ ಕಾರ್ಯನಿರ್ವಹಿಸಬೇಕಾಗುತ್ತದೆ. ಕೆಲಸದ ನಿಮಿತ್ತ ಪರವೂರಿಗೆ ಸಂಚರಿಸುವ ಅನಿವಾರ್ಯತೆ ಎದುರಾಗಲಿದೆ. ಹೆತ್ತವರಿಗೆ ನಿಮ್ಮ ಸಾಧನೆ ಸಂತೋಷ ಕೊಡಲಿದೆ. ವಾಹನ ಪ್ರಯಾಣದಲ್ಲಿ ಎಚ್ಚರ.

ತುಲಾ: ಕಾರ್ಯಸಾಧನೆಗಾಗಿ ಕತ್ತೆ ಕಾಲು ಹಿಡಿ ಎಂಬ ಪರಿಸ್ಥಿತಿ ನಿಮ್ಮದಾಗಲಿದೆ. ಹಳೆಯ ಅಸಮಾಧಾನಗಳನ್ನು ಮರೆತು ಮುನ್ನಡೆಯಬೇಕಾಗುತ್ತದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು  ವೆಚ್ಚವಾಗಲಿದೆ.

ವೃಶ್ಚಿಕ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಸುಬ್ರಹ್ಮಣ್ಯನ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಬರಲಿವೆ. ಚಿಂತೆ ಬೇಡ.

ಧನು: ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದು. ಕಾರ್ಯರಂಗದಲ್ಲಿ ಅಡೆತಡೆಗಳು ಕಂಡುಬಂದರೂ ನಿಮ್ಮ ಏಳಿಗೆ ತಡೆಯಲಾಗದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ಹಿಂದೆ ಮಾಡಿದ ಒಳ್ಳೆಯ ಕೆಲಸಗಳಿಗೆ ತಕ್ಕ ಫಲ ಪಡೆಯಲಿದ್ದೀರಿ. ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು. ಧನ ಗಳಿಕೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ವ್ಯಾಪಾರೀ ವರ್ಗದವರಿಗೆ ಮುನ್ನಡೆಯಿರಲಿದೆ.

ಕುಂಭ: ಆರಂಭಿಸಲು ಹೊರಟಿದ್ದ ಕೆಲಸವನ್ನು ಅರ್ಧಕ್ಕೇ ಹಿಂಪಡೆದುಕೊಳ್ಳಲಿದ್ದೀರಿ. ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಬೇಕಾಗುತ್ತದೆ. ಮಾತೃ ಸಮಾನರಿಂದ ನೆಮ್ಮದಿ ಸಿಗಲಿದೆ. ಆಪ್ತರನ್ನು ಭೇಟಿಯಾಗಲಿದ್ದೀರಿ.

ಮೀನ: ಎಷ್ಟೋ ದಿನದಿಂದ ಬಾಕಿಯಿದ್ದ ಕೆಲಸ ಪೂರ್ತಿ ಮಾಡಿದ ನೆಮ್ಮದಿ ನಿಮ್ಮದಾಗಲಿದೆ. ಹೊಸದಾಗಿ ಕೆಲಸಕ್ಕೆ ಸೇರಿದ್ದವರಿಗೆ ಸವಾಲುಗಳು ಎದುರಾದೀತು. ತಾಂತ್ರಿಕ ವೃತ್ತಿಯವರಿಗೆ ಮುನ್ನಡೆ. ದೇವತಾ ಪ್ರಾರ್ಥನೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಾಸವೀ ಕನ್ನಿಕಾ ಪರಮೇಶ್ವರಿ ದೇವಿ ಸ್ತೋತ್ರ

ಗುರುವಾರ ಮಹಾವಿಷ್ಣುವಿನ ಮೂಲ ಮಂತ್ರ ಪಠಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ತಿಳಿದುಕೊಳ್ಳಿ

ಶ್ರೀ ಗಣೇಶ ಕವಚಂ ಸ್ತೋತ್ರ ಪಠಣದ ಅದ್ಭುತ ಪ್ರಯೋಜನಗಳು

ಲಲಿತಾ ಸಹಸ್ರನಾಮ ಓದುವುದರ ಫಲ ತಿಳಿಯಿರಿ, ಯಾವೆಲ್ಲಾ ಸಮಸ್ಯೆಗೆ ಮುಕ್ತಿ ಗೊತ್ತಾ

ನವಗ್ರಹ ಪೂಜಾ ಫಲ: ಒಂಬತ್ತು ಗ್ರಹಗಳ ಅನುಗ್ರಹ ಮತ್ತು ಅದ್ಭುತ ಪ್ರಯೋಜನಗಳು

ಮುಂದಿನ ಸುದ್ದಿ
Show comments