Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 5 ಜನವರಿ 2023 (08:20 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮ್ಮ ಮಾತಿನಿಂದ ಇತರರಿಗೆ ಕಿರಿ ಕಿರಿಯಾಗದಂತೆ ನೋಡಿಕೊಳ್ಳಿ. ಆರ್ಥಿಕ ವ್ಯವಹಾರದಲ್ಲಿ ಅಡೆತಡೆಗಳು ನಿವಾರಣೆಯಾಗಲಿದೆ. ಕ್ಷುಲ್ಲುಕ ವಿಚಾರಕ್ಕೆ ತಲೆಕೆಡಿಸಿಕೊಳ್ಳಬೇಡಿ. ಅನಗತ್ಯ ಚಿಂತೆ ಬೇಡ.

ವೃಷಭ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟ ಸಾಧ‍್ಯತೆ. ಇಷ್ಟ ಮಿತ್ರರೊಂದಿಗೆ ಭೋಜನ ಮಾಡಲಿದ್ದೀರಿ. ಯಂತ್ರೋಪಕರಣಗಳೊಂದಿಗೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ. ಆರೋಗ್ಯದಲ್ಲಿ ಸುಧಾರಣೆಯಾದೀತು.

ಮಿಥುನ: ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ. ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಸಹವಾಸ ದೋಷದಿಂದ ದುರ್ವರ್ತನೆ ತೋರುವ ಸಾಧ್ಯತೆ.

ಕರ್ಕಟಕ: ಕಾರ್ಯರಂಗದಲ್ಲಿ ನಿಮಗೆ ಇದುವರೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ನೆಮ್ಮದಿಯಾದೀತು. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ.

ಸಿಂಹ: ನಿಮ್ಮಿಂದ ಸಾಲ ಪಡೆದವರಿಂದ ಪ್ರತ್ಯುಪಕಾರ ಸಿಗಲಿದೆ. ಸಂಪಾದನೆ ಎಷ್ಟೇ ಇದ್ದರೂ ಅಷ್ಟೇ ಖರ್ಚೂ ಇರಲಿದೆ. ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ನೆಮ್ಮದಿ.

ಕನ್ಯಾ: ಪರರ ಆಸ್ತಿ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸಲಿದ್ದೀರಿ. ಬಹಳ ದಿನಗಳ ನಂತರ ಆಪ್ತರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಬಂಧು ಮಿತ್ರರಿಂದ ಸಹಕಾರ ಸಿಗಲಿದೆ. ಮಾತಿನ ಮೇಲೆ ನಿಗಾ ಇರಲಿ.

ತುಲಾ: ಸರಕಾರಿ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ದಾಯಾದಿಗಳೊಂದಿಗಿನ ಮನಸ್ತಾಪಗಳು ಬಗೆಹರಿಯಲಿವೆ. ಮಹಿಳೆಯರಿಗೆ ಚರ್ಮ ಸಂಬಂಧೀ ಆರೋಗ್ಯ ಸಮಸ್ಯೆಯಾದೀತು. ತಾಳ್ಮೆಯಿಂದ ವ್ಯವಹರಿಸಿ.

ವೃಶ್ಚಿಕ: ಕಾರ್ಯಕ್ಷೇತ್ರದಲ್ಲಿ ಅನಗತ್ಯವಾಗಿ ತೊಂದರೆಗೆ ಸಿಲುಕಿಕೊಳ್ಳುವ ಸಾಧ‍್ಯತೆ. ಹಿರಿಯರಿಂದ ಸಲಹೆ ಸೂಚನೆಗಳು ಸಿಗಲಿವೆ. ವ್ಯಾಪಾರಿಗಳಿಗೆ ಹಿತ ಶತ್ರುಗಳ ಕಾಟ ಕಂಡುಬಂದೀತು. ದೇವತಾ ಪ್ರಾರ್ಥನೆ ಮಾಡಿ.

ಧನು: ಉದ್ಯೋಗ, ವ್ಯವಹಾರದಲ್ಲಿ ಏರಿಳಿತ ಸಾಮಾನ್ಯ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ದೇಹಾರೋಗ್ಯದಲ್ಲಿ ಏರುಪೇರಾಗದಂತೆ ಎಚ್ಚರಿಕೆ ವಹಿಸಿ. ಸಂಗಾತಿಯ ಸಲಹೆ ಪಾಲಿಸುವುದು ಉತ್ತಮ.

ಮಕರ: ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ತೋರಿಸಲಿದ್ದೀರಿ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬಂದೀತು. ನೀವು ಎಷ್ಟೇ ಬೇಡವೆಂದು ಬಿಟ್ಟಿದ್ದರೂ ಕೆಲವೊಂದು ಜವಾಬ್ಧಾರಿಗಳು ತಾನಾಗೇ ಹೆಗಲಿಗೇರಲಿದೆ.

ಕುಂಭ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಿದ್ದರೆ ಪ್ರಗತಿ ಕಂಡುಬರಲಿದೆ. ತಾಂತ್ರಿಕ ವೃತ್ತಿಯವರಿಗೆ ಮುನ್ನಡೆಯ ಯೋಗ. ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ಕೆಲಸಗಳಲ್ಲಿ ಆಸಕ್ತಿ ಕಂಡುಬರಲಿದೆ. ದಿನದಂತ್ಯಕ್ಕೆ ಸಂತೋಷದ ಸುದ್ದಿ.

ಮೀನ: ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಮಾತಾ, ಪಿತೃಗಳ ಸಂತೋಷಕ್ಕಾಗಿ ಕೆಲವೊಂದು ಕೆಲಸ ಮಾಡಬೇಕಾಗುತ್ತದೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಕುಲದೇವರ ಪ್ರಾರ್ಥನೆ ಮಾಡಿ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗಂಡ-ಹೆಂಡತಿ ಸಂಬಂಧ ಚೆನ್ನಾಗಿರಬೇಕೆಂದರೆ ಬೆಡ್ ರೂಂನಲ್ಲಿ ಈ ಚಿತ್ರ ಹಾಕಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ