Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 30 ಡಿಸೆಂಬರ್ 2022 (08:30 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಎಷ್ಟೇ ಅಸಮಾಧಾನಗಳಿದ್ದರೂ ಸಂಗಾತಿ ಜೊತೆ ಕೆಲವೊಂದು ವಿಚಾರಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಸರಕಾರೀ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ.

ವೃಷಭ: ವಾಹನ, ಭೂಮಿ, ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಇಷ್ಟಮಿತ್ರರೊಂದಿಗೆ ಇಷ್ಟ ಭೋಜನ ಮಾಡಲಿದ್ದೀರಿ. ವೈದ್ಯಕೀಯ ವೃತ್ತಿಯವರಿಗೆ ಕಾರ್ಯದೊತ್ತಡ ಕಂಡುಬರುವುದು. ತಾಳ್ಮೆಯಿರಲಿ.

ಮಿಥುನ: ಕಾರ್ಯರಂಗದಲ್ಲಿ ನಿಮ್ಮದಲ್ಲದ ತಪ್ಪಿಗೆ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಬರಬಹುದು. ನೀವು ಬಹಳ ನಂಬಿಕೊಂಡಿದ್ದವರಿಂದಲೇ ವಂಚನೆಗೊಳಗಾಗುವ ಸಾಧ‍್ಯತೆ. ದೇವರ ಸೇವೆಯಿಂದ ಮನಸ್ಸಿಗೆ ತೃಪ್ತಿ.

ಕರ್ಕಟಕ: ಉದ್ದಿಮೆದಾರರಿಗೆ ಏಳು ಬೀಳುಗಳು ಸಾಮಾನ್ಯ. ಮನಸ್ಸಿನಲ್ಲಿರುವ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಇಷ್ಟಮಿತ್ರರೊಂದಿಗೆ ಪ್ರವಾಸ ಮಾಡಲು ಸಿದ್ಧತೆ ನಡೆಸಲಿದ್ದೀರಿ. ಅನಗತ್ಯ ಚಿಂತೆ ಬೇಡ.

ಸಿಂಹ: ಮಕ್ಕಳ ವಿಚಾರದಲ್ಲಿ ಆತುರತೆ ಬೇಡ. ಸ್ತ್ರೀಯರಿಂದ ತೊಂದರೆಗಳು ಎದುರಾದೀತು. ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಕಂಡುಬರುವುದು. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಕನ್ಯಾ: ಸಾಮಾಜಿಕ ವಿಚಾರದಲ್ಲಿ ನಿರೀಕ್ಷೆಗೂ ಮೀರಿದ ಸಫಲತೆ ಸಿಗಲಿದೆ. ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಹೊಸ ಅವಕಾಶಗಳು ಸಿಗಲಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ.

ತುಲಾ: ಸರಕಾರೀ ವೃತ್ತಿಯಲ್ಲಿರುವವರಿಗೆ ಬಿಡುವಿನ ಖುಷಿ ಸಿಗಲಿದೆ. ಕೌಟುಂಬಿಕವಾಗಿ ಸುಂದರ ಕ್ಷಣ ಕಳೆಯುವ ಯೋಗ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಥತೆ ನಡೆಸಲಿದ್ದೀರಿ. ಕಿರು ಸಂಚಾರ ಮಾಡಲಿದ್ಧೀರಿ.

ವೃಶ್ಚಿಕ: ದಯ, ದಾಕ್ಷಿಣ್ಯಕ್ಕೊಳಗಾಗಿ ಕೆಲವೊಂದು ವಿಚಾರದಲ್ಲಿ ತ್ಯಾಗ ಮಾಡಬೇಕಾಗುತ್ತದೆ. ಹಣ ಗಳಿಕೆಗೆ ನಾನಾ ಮಾರ್ಗಗಳು ಕಂಡುಬರಲಿದೆ. ಹಿರಿಯರಿಗೆ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಧನು: ನೀವು ಆಡುವ ಮಾತುಗಳು ಕೆಲವೊಮ್ಮೆ ಇತರರ ನಡುವೆ ಸಂಘರ್ಷಕ್ಕೆ ಕಾರಣವಾದೀತು. ಮಾತಿನ ಮೇಲೆ ನಿಗಾ ಇರಲಿ. ಆಸ್ತಿ ಖರೀದಿ, ಮಾರಾಟ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ತೋರಿಬರಲಿವೆ. ಮಾನಸಿಕವಾಗಿ ಎಷ್ಟೇ ಒತ್ತಡಗಳಿದ್ದರೂ ಆಪ್ತರ ಮಾತು ಮನಸ್ಸಿಗೆ ನೆಮ್ಮದಿ ನೀಡಲಿದೆ. ಯೋಗ್ಯ ವಯಸ್ಕರಿಗೆ ಶೀಘ‍್ರದಲ್ಲೇ ಕಂಕಣ ಭಾಗ್ಯ ಕೂಡಿಬರಲಿದೆ.

ಕುಂಭ: ನಿಮ್ಮ ಒಳ್ಳೆಯತನದ ಲಾಭ ಪಡೆಯುವರಿರುತ್ತಾರೆ. ಮಕ್ಕಳ ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ‍್ಯತೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ದುಂದು  ವೆಚ್ಚಗಳಿಗೆ ಕಡಿವಾಣವಿರಲಿ.

ಮೀನ: ಮಹಿಳೆಯವರಿಗೆ ತವರಿನ ಕಡೆಯವರ ಭೇಟಿ ಯೋಗ. ಇಷ್ಟ ವಸ್ತು ಖರೀದಿ ಮಾಡಲು ಹಣಕಾಸಿನ ಅಡಚಣೆ ಉಂಟಾದೀತು. ಮನರಂಜನಾ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?