Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 26 ಸೆಪ್ಟಂಬರ್ 2022 (07:25 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮಗೆ ವಂಚನೆ ಮಾಡಿದವರಿಗೆ ತಕ್ಕ ಏಟು ಕೊಡುವ ಪ್ರತೀಕಾರದ ಮನೋಭಾವ ನಿಮ್ಮಲ್ಲಿ ಬೆಳೆಯಲಿದೆ. ಸಂಗಾತಿಯ ಹಿತವಚನಗಳಿಗೆ ಕಿವಿಗೊಡುವುದು ಉತ್ತಮ. ವಿದ್ಯಾರ್ಥಿಗಳಿಗೆ ಮುನ್ನಡೆ ಕಂಡುಬರಲಿದೆ.

ವೃಷಭ: ಉದ್ಯೋಗಸ್ಥ ಮಹಿಳೆಯರಿಗೆ ಮುಂಬಡ್ತಿಯ ಕನಸಿಗೆ ಅಡ್ಡಿ ಆತಂಕಗಳು ಎದುರಾಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ಅನ್ಯರ ವಿಚಾರಗಳಿಗೆ ಅನಗತ್ಯವಾಗಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರ. ಪ್ರೀತಿ ಪಾತ್ರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ.

ಕರ್ಕಟಕ: ನಿಮ್ಮಲ್ಲಿರುವ ವಿಶೇಷ ಗುಣಗಳು ಇತರರ ಗಮನ ಸೆಳೆಯಲಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ. ಸಾಕು ಪ್ರಾಣಿಗಳಿಂದ ತೊಂದರೆ ಎದುರಾದೀತು. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ.

ಸಿಂಹ: ನಿಮ್ಮ ಇಷ್ಟಾನುಸಾರ ನಿರ್ಧಾರ ತೆಗೆದುಕೊಳ್ಳಲು ಹೋದರೆ ಕುಟುಂಬ ಸದಸ್ಯರ ಕೋಪಕ್ಕೆ ಗುರಿಯಾಗಬೇಕಾದೀತು. ಪ್ರೇಮಿಗಳು ಮನದಾಳ ಹಂಚಿಕೊಳ್ಳಲಿದ್ದೀರಿ. ಬ್ಯಾಂಕ್ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರುವುದು.

ಕನ್ಯಾ: ಎಷ್ಟೇ ಪರಿಶ್ರಮ ಪಟ್ಟರೂ ಅದಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎಂಬ ಬೇಸರ ಕಾಡಲಿದೆ. ಬ್ಯಾಂಕ್ ಲೋನ್ ಗಳನ್ನು ತೀರಿಸುವ ಚಿಂತೆ ಕಾಡೀತು. ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ತಾಳ್ಮೆಯಿರಲಿ.

ತುಲಾ: ಮಕ್ಕಳ ವಿಚಾರದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೀರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ವ್ಯಾಪಾರೀ ವರ್ಗದವರಿಗೆ ಉನ್ನತಿಯ ಯೋಗ. ಶಯನ ಸುಖಕ್ಕೆ ಕೊರತೆಯಿರದು. ಚಿಂತೆ ಬೇಡ.

ವೃಶ್ಚಿಕ: ಮನಸ್ಸಿನಲ್ಲಿ ಅಂದುಕೊಂಡಂತೇ ಎಲ್ಲವೂ ಆಗದು ಎಂಬುದನ್ನು ಅರ್ಥ ಮಾಡಿಕೊಳ್ಳಲಿದ್ಧೀರಿ. ವಾಹನ ಖರೀದಿ ಯೋಗ ಕೂಡಿಬರಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿರಲಿ. ಅಪರಿಚಿತರಿಂದಲೂ ಸಹಾಯವಾಗಲಿದೆ.

ಧನು: ಹೊಸದಾಗಿ ಆರಂಭಿಸಿದ್ದ ಉದ್ದಿಮೆ ಕೈ ಹಿಡಿಯಲಿದೆ. ಸಂಗಾತಿಯ ಪ್ರೀತಿಗೆ ಪಾತ್ರರಾಗಲಿದ್ದೀರಿ. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬರುವುದು. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ಆರೋಗ್ಯದಲ್ಲಿ ಚೇತರಿಕೆ.

ಮಕರ: ಕೌಟುಂಬಿಕವಾಗಿ ಕೆಲವು ಆತಂಕಕ್ಕೆ ಎಡೆ ಮಾಡಿಕೊಡುವಂತಹ ವಾರ್ತೆ ಕೇಳಿಬಂದೀತು. ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಲಿದ್ದೀರಿ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಯೋಜನೆಗಳು ಹೊಳೆಯಲಿವೆ.

ಕುಂಭ: ಕೆಳ ಹಂತದ ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾದೀತು. ಕ್ರಿಯಾತ್ಮಕವಾಗಿ ಯೋಚಿಸಬೇಕಾಗುತ್ತದೆ. ವೈದ್ಯ ವೃತ್ತಿಯಲ್ಲಿರುವವರಿಗೆ ಕಾರ್ಯದೊತ್ತಡ ಹೆಚ್ಚಲಿದೆ. ತಾಳ್ಮೆಯಿರಲಿ.

ಮೀನ: ದೈವಾನುಗ್ರಹದಿಂದ ಇಂದು ನೀವು ಕೈಗೊಳ್ಳುವ ಕೆಲಸಗಳು ಯಶಸ್ವಿಯಾಗಲಿದೆ. ವ್ಯಾವಹಾರಿಕವಾಗಿ ಲಾಭ ಮಾಡಿಕೊಳ್ಳಲಿದ್ದೀರಿ. ದೂರದ ಮಿತ್ರರಿಂದ ಸಹಾಯವಾಗಲಿದೆ. ಇಷ್ಟ ಭೋಜನ ಮಾಡುವ ಯೋಗ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ