Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

webdunia
ಸೋಮವಾರ, 27 ಜೂನ್ 2022 (08:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಬೆಟ್ಟದಂತೆ ಬಂದ ಕಷ್ಟಗಳು ಮಂಜಿನಂತೆ ಪರಿಹಾರವಾಗಲಿದೆ. ಸಂಗಾತಿಯ ಕೆಲವೊಂದು ಅಭಿಪ್ರಾಯಗಳಿಗೆ ಅಸಮಾಧಾನವಾದೀತು. ಆದರೂ ಕೌಟುಂಬಿಕ ಕ್ಷೇಮಕ್ಕಾಗಿ ಕೆಲವೊಂದು ತ್ಯಾಗ ಮಾಡಲಿದ್ದೀರಿ.

ವೃಷಭ: ಹೊಸ ಜಾಗಗಳಿಗೆ ಭೇಟಿ ಕೊಡುವ ಯೋಗ ನಿಮ್ಮದಾಗಲಿದೆ. ವಿಶೇಷ ಭೋಜನ ಮಾಡುವ ಯೋಗವಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಖರ್ಚು ವೆಚ್ಚಗಳಿಗೆ ಕಡಿವಾಣವಿರಲಿ.

ಮಿಥುನ: ಆಪ್ತೇಷ್ಟರೊಂದಿಗೆ ಕಿರು ಪ್ರವಾಸ ಮಾಡುವ ಯೋಗವಿದೆ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಬಯಸಿ ಮಾಡುವ ನಿಮ್ಮ ಪ್ರಯತ್ನಗಳಿಗೆ ತಕ್ಕ ಮಟ್ಟಿನ ಫಲ ಸಿಗಲಿದೆ. ಯೋಗ್ಯ ವಯ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಕರ್ಕಟಕ: ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡಲಿದ್ದೀರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ವ್ಯಾಪಾರೀ ವರ್ಗದವರಿಗೆ ಮುನ್ನಡೆ ಕಂಡುಬರಲಿದೆ.

ಸಿಂಹ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ನಿಮ್ಮಿಂದ ಹಿಂದೆ ಉಪಕಾರ ಪಡೆದವರಿಂದ ಪ್ರತ್ಯುಪಕಾರ ಲಭಿಸಿದೆ. ನೆರೆಹೊರೆಯವರೊಂದಿಗೆ ಸಂಬಂಧ ವೃದ್ಧಿಯಾದೀತು. ಕಿರು ಸಂಚಾರ ಮಾಡುವುದರಿಂದ ಉಲ್ಲಾಸವಾಗಲಿದೆ.

ಕನ್ಯಾ: ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡಬೇಕಾದೀತು. ಮಕ್ಕಳ ಖುಷಿಗಾಗಿ ಕೆಲವೊಂದು ಕೆಲಸ ಮಾಡಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾಗಲಿವೆ. ಅನಗತ್ಯ ಚಿಂತೆ ಬೇಡ.

ತುಲಾ: ಕೌಟುಂಬಿಕವಾಗಿ ಇಂದು ಅತ್ಯಂತ ಸಂತೋಷದಾಯಕ ದಿನವಾಗಲಿದೆ. ಮನೆಗೆ ನೆಂಟರಿಷ್ಟರ ಆಗಮನ ಸಾಧ್ಯತೆ. ಆದರೆ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ. ವಾಹನ ಸಂಚಾರ ಮಾಡುವಾಗ ಎಚ್ಚರಿಕೆ ಅಗತ್ಯ.

ವೃಶ್ಚಿಕ: ಹಳೆಯ ಮಿತ್ರರ ಪುನರ್ಮಿಲನ ನಡೆಯಲಿದೆ. ಮನಸ್ಸಿಗೆ ಉಲ್ಲಾಸ ಕೊಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಂಡುಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾದೀತು.

ಧನು: ನೀವು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಂಗಾತಿಯೊಂದಿಗೆ ಪರಾಮರ್ಶಿಸುವುದು ಉತ್ತಮ. ಹೊಸದಾಗಿ ಮದುವೆಯಾಗಿದ್ದರೆ ಸುಂದರ ಕ್ಷಣ ಕಳೆಯುವ ಯೋಗ. ವಾಹನ, ಭೂಮಿ ಖರೀದಿ ವಿಚಾರಗಳಲ್ಲಿ ಮುನ್ನಡೆ.

ಮಕರ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಮನೆ ರಿಪೇರಿ, ಇತ್ಯಾದಿ ಸಣ್ಣ ಪುಟ್ಟ ಕೆಲಸಗಳಿಗಾಗಿ ಖರ್ಚು ವೆಚ್ಚಗಳಾಗಲಿವೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.

ಕುಂಭ: ನೀವು ಅಂದುಕೊಂಡ ರೀತಿಯಲ್ಲೇ ಕೆಲಸ ಕಾರ್ಯಗಳು ಸಾಗುವುದರಿಂದ ನೆಮ್ಮದಿಯಾಗಲಿದೆ. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾದೀತು. ಹೊಸ ಮಿತ್ರರನ್ನು ಸಂಪಾದಿಸಲಿದ್ದೀರಿ. ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಮೀನ: ಮನಸ್ಸಿನಲ್ಲಿರುವುದನ್ನು ಆಪ್ತರೊಂದಿಗೆ ಹಂಚಿಕೊಳ್ಳಲು ಸಕಾಲ. ಪ್ರೇಮಿಗಳಿಗೆ ಇಂದು ಶುಭ ದಿನ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಂಡುಬರಲಿದೆ. ಆದಾಯ ವೃದ್ಧಿಗೆ ನಾನಾ ದಾರಿ ಕಂಡುಕೊಳ್ಳಲಿದ್ದೀರಿ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ