Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 16 ಜೂನ್ 2022 (08:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಉತ್ತಮ ಕಾರ್ಯನಿರ್ವಹಣೆಯಿಂದ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ವಿಚಾರದಲ್ಲಿ ಜಾಗರೂಕತೆ ಅಗತ್ಯ. ಕೌಟುಂಬಿಕವಾಗಿ ನೆಮ್ಮದಿಯಿರಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ವೃಷಭ: ವೃತ್ತಿರಂಗದಲ್ಲಿ ನಿಮ್ಮ ಏಳಿಗೆಗೆ ಸಹಕಾರಿಯಾಗುವಂತಹ ಕೆಲಸ ಮಾಡಲಿದ್ದೀರಿ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ ನಿಮ್ಮದಾಗಲಿದೆ. ವ್ಯಾಪಾರೀ ವರ್ಗದವರಿಗೆ ಆರ್ಥಿಕವಾಗಿ ಮುನ್ನಡೆ ಕಂಡುಬರಲಿದೆ.

ಮಿಥುನ: ಹಠಮಾರೀ ಮನೋಭಾವದಿಂದ ಕಾರ್ಯ ಸಾಗದು. ಕೌಟುಂಬಿಕವಾಗಿ ಪರಸ್ಪರ ಅಭಿಪ್ರಾಯಗಳಿಗೆ ಬೆಲೆಕೊಡುವುದು ಮುಖ್ಯ. ನೆರೆಹೊರೆಯವರೊಂದಿಗೆ ಸಂಬಂಧ ಸುಧಾರಣೆಗೆ ಪ್ರಯತ್ನ ಪಡಲಿದ್ದೀರಿ.

ಕರ್ಕಟಕ: ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶ ಸಿಗಲಿದೆ. ನಿಮ್ಮ ಹಳೆಯ ತಪ್ಪುಗಳ ಬಗ್ಗೆ ಯೋಚಿಸುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ದಿನದಂತ್ಯಕ್ಕೆ ನೆಮ್ಮದಿಯಿರಲಿದೆ.

ಸಿಂಹ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ವಿಶೇಷವಾದ ವ್ಯಕ್ತಿಗಳನ್ನು ಭೇಟಿಯಾಗಲಿದ್ದು ನಿಮ್ಮ ಕಾರ್ಯಸಾಧನೆಗೆ ಅವಕಾಶ ಸಿಗಲಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ.

ಕನ್ಯಾ: ಇತರರಿಗೆ ಸಹಾಯ ಮಾಡುವ ಮೊದಲು ಪೂರ್ವಾಪರ ವಿಚಾರಿಸಿ ಮುಂದುವರಿಯಿರಿ. ಪಾಲುದಾರಿಕೆ ವ್ಯವಹಾರದಿಂದ ಮುನ್ನಡೆ ಕಂಡುಬರಲಿದೆ. ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಕಂಡುಬರಲಿದೆ.

ತುಲಾ: ಉತ್ತಮ ಸ್ಥಾನ ಮಾನಕ್ಕಾಗಿ ಸತತ ಪರಿಶ್ರಮಪಡಬೇಕಾಗುತ್ತದೆ. ತಾಯಿಯ ಕಡೆಯಿಂದ ಅನಿರೀಕ್ಷಿತ ಧನಲಾಭವಾದೀತು. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.

ವೃಶ್ಚಿಕ: ಅಗತ್ಯ ಸಂದರ್ಭದಲ್ಲಿ ಹಣಕಾಸಿನ ಖರ್ಚು ವೆಚ್ಚಕ್ಕೆ ಹಿಂದು ಮುಂದು ನೋಡಬೇಡಿ. ಸಂಗಾತಿಯ ಪ್ರೀತಿಗೆ ಪಾತ್ರರಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ಧನು: ಮನೆಯಲ್ಲಿ ಹಿರಿಯರಿಂದ ಸಂತೋಷ ಕಂಡುಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ. ಕೆಲಸ ಕಾರ್ಯಗಳಲ್ಲಿ ನಿಮಗೆ ಗೌರವ ಪ್ರಾಪ್ತಿಯಾಗಲಿದೆ. ಸಾಂಸಾರಿಕವಾಗಿ ಸುಖಕ್ಕೆ ಕೊರತೆಯಿರದು. ಚಿಂತೆ ಬೇಡ.

ಮಕರ: ಮನೆಯಲ್ಲಿ ಬಂಧು ಮಿತ್ರರ ಆಗಮನದಿಂದ ಸಂತೋಷ ತುಂಬಿರಲಿದೆ. ಮಹಿಳೆಯರಿಗೆ ವೃತ್ತಿರಂಗದಲ್ಲಿ ಉನ್ನತಿಯ ಯೋಗವಿದೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಬೇಕು. ತಾಳ್ಮೆ, ಸಂಯಮವಿರಲಿ.

ಕುಂಭ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದರಿಂದ ಎಲ್ಲವೂ ಶುಭವಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಕಂಡುಬರುವುದು. ಹಿರಿಯರಿಗೆ ದೇಹಾರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡುಬರುವುದು.

ಮೀನ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ಹಣಕಾಸಿನ ವಿಚಾರದಲ್ಲಿ ಕೆಲವೊಂದು ಅಚಾತುರ್ಯಗಳಾಗುವ ಸಾಧ‍್ಯತೆ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ತಾಳ್ಮೆ ಅಗತ್ಯ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ