ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಉದ್ಯೋಗ ಕ್ಷೇತ್ರದಲ್ಲಿ ಏರುಪೇರುಗಳು ಸಾಮಾನ್ಯ. ಕೌಟುಂಬಿಕವಾಗಿ ಸರಿಯಾದ ನಿರ್ಧಾರ ಕೈಗೊಳ್ಳುವಾಗ ಗೊಂದಲಗಳು ಎದುರಾದೀತು. ಸಂಗಾತಿಯ ಸಲಹೆಗಳು ಉಪಯೋಗಕ್ಕೆ ಬರಲಿದೆ. ದಿನದಂತ್ಯಕ್ಕೆ ನೆಮ್ಮದಿ.
ವೃಷಭ: ವೃತ್ತಿರಂಗದಲ್ಲಿ ಉನ್ನತ ಸ್ಥಾನಮಾನಕ್ಕಾಗಿ ನಿಮ್ಮ ಪ್ರಯತ್ನ ನಡೆಸಲಿದ್ದೀರಿ. ಕುಲದೇವರ ಪ್ರಾರ್ಥನೆ ನಡೆಸಿ ಮುನ್ನಡೆದರೆ ಉತ್ತಮ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಮಿಥುನ: ಬೆಳಗಿನ ಜಾವ ಕಂಡ ಸ್ವಪ್ನ ನಿಮ್ಮನ್ನು ಚಿಂತೆಗೀಡು ಮಾಡಲಿದೆ. ಆಪ್ತರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಲಿದ್ದೀರಿ. ಇಷ್ಟಮಿತ್ರರೊಂದಿಗೆ ಇಷ್ಟಭೋಜನ ಮಾಡುವ ಯೋಗ. ತಾಳ್ಮೆಯಿರಲಿ.
ಕರ್ಕಟಕ: ಅತಿಯಾದ ಧಾರಾಳಿತನದಿಂದ ಆರ್ಥಿಕ ಸಮಸ್ಯೆ ಕಂಡುಬಂದೀತು. ಮಕ್ಕಳ ವಿಚಾರದಲ್ಲಿ ವಿಶೇಷ ಕಾಳಜಿ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಕಿರು ಸಂಚಾರ ಮಾಡಲಿದ್ದೀರಿ.
ಸಿಂಹ: ಮಹಿಳೆಯರಿಂದ ನಿಮಗೆ ಇಂದು ಅನುಕೂಲವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಂಡುಬರುವುದು. ಸಂಪತ್ತು ವೃದ್ಧಿಗೆ ಪ್ರಯತ್ನ ನಡೆಸಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಅನಗತ್ಯ ಚಿಂತೆ ಬೇಡ.
ಕನ್ಯಾ: ಹೊಸಬಗೆಯ ಚಿಂತನೆಗಳು ನಿಮ್ಮ ಉತ್ಸಾಹ ಹೆಚ್ಚಿಸಲಿವೆ. ಕಾರ್ಯಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸವಿದ್ದರೂ ನಿಮ್ಮ ಪ್ರಾಮುಖ್ಯತೆ ಎಲ್ಲರ ಗಮನಕ್ಕೆ ಬರಲಿದೆ. ಮಕ್ಕಳ ವಿಚಾರದಲ್ಲಿ ಪೋಷಕರ ನಡುವೆ ಚರ್ಚೆಗಳಾದೀತು. ತಾಳ್ಮೆಯಿರಲಿ.
ತುಲಾ: ಜಲೋತ್ಪನ್ನಗಳ ಕೆಲಸ ಮಾಡುವವರಿಗೆ ಮುನ್ನಡೆ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ಸಹಕರಿಸಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
ವೃಶ್ಚಿಕ: ನಾನಾ ರೀತಿಯ ವಿಚಾರಗಳು ಮನಸ್ಸಿಗೆ ಕಾಡಿ ಗೊಂದಲವೆನಿಸಲಿದೆ. ಸಂಗಾತಿಯ ಸಮಯೋಚಿತ ಸಲಹೆ ಉಪಯೋಗಕ್ಕೆ ಬರಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದುಂದು ವೆಚ್ಚಕ್ಕೆ ಕಡಿವಾಣವಿರಲಿ.
ಧನು: ಅನಗತ್ಯ ವಿಚಾರಗಳಿಂದ ಮನಸ್ಸಿನ ನೆಮ್ಮದಿ ಹಾಳುಮಾಡಿಕೊಳ್ಳಬೇಡಿ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನವಾಗುವ ಸಾಧ‍್ಯತೆಯಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ.
ಮಕರ: ನಿಮ್ಮಿಂದ ಹಿಂದೆ ಸಹಾಯ ಪಡೆದವರಿಂದ ನಿಮಗೆ ಉಪಯೋಗವಾಗಲಿದೆ. ಹಣಕಾಸಿನ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಹಿರಿಯರೊಂದಿಗೆ ತಾಳ್ಮೆಯಿಂದ ವರ್ತಿಸಿ. ಚಿಂತೆ ಬೇಡ.
ಕುಂಭ: ಯಾರದ್ದೋ ಬಲವಂತಕ್ಕೆ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಾಯಿಸಬೇಡಿ. ಹೊಸ ಕೆಲಸಕ್ಕೆ ಕೈ ಹಾಕಲು ಇದು ಸಕಾಲ. ಮಹಿಳೆಯರಿಗೆ ಚಿನ್ನಾಭರಣಗಳ ಖರೀದಿ ಯೋಗ. ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ.
ಮೀನ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ಕರೆ ಬರಲಿದೆ. ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದರಿಂದ ಸಂಭಾವ್ಯ ಅಪಾಯ ತಪ್ಪಲಿದೆ. ಶುಭ ಮಂಗಲ ಕಾರ್ಯಕ್ಕೆ ಸಿದ್ಧತೆ ನಡೆಸಲಿದ್ದೀರಿ.