ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಹಿರಿಯರಿಂದ ಸುಖ ಸಂತೋಷ ನಿಮ್ಮದಾಗಲಿದೆ. ಸರಕಾರೀ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಸ್ವಾಮರ್ಥ್ಯದಿಂದ ಧನ ಸಂಪಾದನೆ ಮಾಡಲಿದ್ದೀರಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ವೃದ್ಧಿ ಯೋಗ. ತಾಳ್ಮೆ, ಸಂಯಮವಿರಲಿ.
ವೃಷಭ: ನಿಮ್ಮ ಸಾಹಸ ಮನೋಭಾವ ಇತರರ ಮೆಚ್ಚುಗೆಗೆ ಪಾತ್ರವಾಗಲಿದೆ. ಎಲ್ಲವನ್ನೂ ವ್ಯಾಪಾರೀ ಬುದ್ಧಿಯಿಂದ ನೋಡುವುದನ್ನು ಬಿಡಿ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಚಿಂತೆ ಬೇಡ.
ಮಿಥುನ: ಹೊಸ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಹೊಸದಾಗಿ ಕೆಲಸಗಳನ್ನು ಪ್ರಾರಂಭಿಸುವ ಮೊದಲು ಕುಲದೇವರ ಪ್ರಾರ್ಥನೆ ಮಾಡಿ ಮುಂದುವರಿಯಿರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.
ಕರ್ಕಟಕ: ಕಷ್ಟದ ಸಮಯದಲ್ಲಿ ಏಕಾಂಗಿಯಾದೆನೆಂಬ ಅಸಹಾಯಕ ಭಾವನೆ ಕಾಡೀತು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಮನೆಗೆ ಹೊಸ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸಲಿದ್ದೀರಿ. ತಾಳ್ಮೆಯಿರಲಿ.
ಸಿಂಹ: ಮನಸ್ಸಿಗೆ ತೋಚಿದ್ದು ಮಾಡಲು ಹೋಗಿ ಆಪ್ತರ ಅಸಮಾಧಾನಕ್ಕೆ ಗುರಿಯಾಗಲಿದ್ದೀರಿ. ಪ್ರೇಮಿಗಳು ವಿರಹ ವೇದನೆ ಅನುಭವಿಸಬೇಕಾಗುತ್ತದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದೇವತಾ ಪ್ರಾರ್ಥನೆ ಮಾಡಿದರೆ ಉತ್ತಮ.
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಅಸಹಕಾರ ಕಂಡುಬಂದೀತು. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯ ಮನೋಭಾವ ಅಗತ್ಯ. ಮಕ್ಕಳ ವಿಚಾರದಲ್ಲಿ ಸಂತೋಷ ಕಂಡುಬರಲಿದೆ. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.
ತುಲಾ: ಅನಗತ್ಯ ಮಾತು, ಕೃತಿಗಳಿಂದ ಇತರರ ನಿಷ್ಠುರಕ್ಕೊಳಗಾಗಬೇಡಿ. ಕಳೆದು ಹೋದ ವಸ್ತುಗಳಿಗಾಗಿ ಹುಡುಕಾಟ ನಡೆಸಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹಾಯಾಸವಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ವೃಶ್ಚಿಕ: ಕಾರ್ಯರಂಗದಲ್ಲಿ ನಿಮ್ಮ ವೈಯಕ್ತಿಕ ಹಿತ ಕಾಪಾಡುವುದು ಮುಖ್ಯ. ಸಂಗಾತಿಯ ಕೆಲವೊಂದು ಸಲಹೆಗಳನ್ನು ಪಾಲಿಸುವುದು ಉತ್ತಮ. ಬಹುದಿನಗಳ ಕನಸು ನನಸು ಮಾಡಲಿದ್ದೀರಿ. ಕಿರು ಸಂಚಾರ ಮಾಡುವಿರಿ.
ಧನು: ನಿಮ್ಮ ಕಾರ್ಯಸಾಧನೆಗಾಗಿ ಅನ್ಯರ ಕಾಲು ಹಿಡಿಯುವ ಪ್ರಸಂಗ ಎದುರಾದೀತು. ನಯವಾದ ಮಾತುಗಳಿಂದ ಇತರರ ಮನಸ್ಸು ಗೆಲ್ಲಲಿದ್ದೀರಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹೊಸ ಅವಕಾಶಗಳು ಬರಲಿವೆ. ಬಳಸಿಕೊಳ್ಳಿ.
ಮಕರ: ಸ್ವಯಂ ಉದ್ಯೋಗಿಗಳಿಗೆ ಆರ್ಥಿಕವಾಗಿ ಲಾಭವಾಗಲಿದೆ. ವಾಹನ ಖರೀದಿಸುವ ನಿಮ್ಮ ಕನಸು ಸದ್ಯದಲ್ಲೇ ನನಸಾಗಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ದೇಹಾರೋಗ್ಯದಲ್ಲಿ ಸುಧಾರಣೆಯಾಗುವುದು.
ಕುಂಭ: ಸಂತಾನ ಹೀನ ದಂಪತಿಗಳು ದೇವರ ಮೊರೆ ಹೋಗಲಿದ್ದಾರೆ. ನಿಮ್ಮ ಇಷ್ಟ-ಕಷ್ಟಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದಿದ್ದರೆ ಆರೋಗ್ಯ ಸಮಸ್ಯೆಯಾದೀತು, ಎಚ್ಚರಿಕೆ.
ಮೀನ: ಕೌಟುಂಬಿಕವಾಗಿ ಮಹತ್ವದ ತೀರ್ಮಾನ ಕೈಗೊಳ್ಳುವ ಹೊಣೆಗಾರಿಕೆ ನಿಮ್ಮದಾಗಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾದೀತು. ಭೂಮ್ಯಾದಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ತಾಳ್ಮೆ ಅಗತ್ಯ.