Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 7 ಮಾರ್ಚ್ 2022 (08:29 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಸಾಮಾಜಿಕವಾಗಿ ಜನಮನ್ನಣೆಗೆ ಪಾತ್ರರಾಗಲಿದ್ದೀರಿ. ಆರ್ಥಿಕ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಕಾಲ. ಸಂಗಾತಿಯ ಮಾತುಗಳು ಸರಿಯೆನಿಸೀತು. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಚಿಂತೆ ಬೇಡ.

ವೃಷಭ: ವೃತ್ತಿರಂಗದಲ್ಲಿ ನಿಮಗೆ ಅನುಕೂಲಕರ ವಾತಾವರಣ ಕಂಡುಬರಲಿದೆ. ಹೊಸ ಚಿಂತನೆಗಳು ನಿಮ್ಮ ಯೋಚನೆಯ ದಿಕ್ಕು ಬದಲಾಯಿಸಲಿವೆ. ಮಹಿಳೆಯರಿಗೆ ವೃತ್ತಿರಂಗದಲ್ಲಿ ಉನ್ನತಿಯ ಕಾಲ. ಸಂತೋಷ, ನೆಮ್ಮದಿಯಿರಲಿದೆ.

ಮಿಥುನ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಇಷ್ಟ ಭೋಜನ ಮಾಡುವ ಯೋಗವಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ವ್ಯಾಪಾರಿಗಳಿಗೆ ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು. ನೆಮ್ಮದಿಯಿರಲಿದೆ.

ಕರ್ಕಟಕ: ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ವಿಶೇಷವಾದ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸ್ಥಾನ ಮಾನ ವೃದ್ಧಿಗೆ ಪರಿಶ್ರಮ ಪಡಬೇಕಾಗುತ್ತದೆ. ಅನ್ಯರ ಹಿತವಚನಗಳು ಕೆಲವೊಮ್ಮೆ ಉಪಯೋಗಕ್ಕೆ ಬರಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ತಾಳ್ಮೆಯಿರಲಿ.

ಕನ್ಯಾ: ಕೌಟುಂಬಿಕವಾಗಿ ಕೆಲವೊಂದು ವಿವಾದ ಬಗೆಹರಿಸುವ ಜವಾಬ್ಧಾರಿ ನಿಮ್ಮದಾಗಲಿದೆ. ಮಕ್ಕಳಿಗೆ ಖುಷಿ ಕೊಡಲಿದ್ದೀರಿ. ಮಹಿಳೆಯರಿಗೆ ತವರಿನ ಕಡೆಯಿಂದ ಉಡುಗೊರೆ ಬರಲಿದೆ. ವಾಹನ ಸಂಚಾರ ಮಾಡುವಾಗ ಎಚ್ಚರಿಕೆ ಅಗತ್ಯ.

ತುಲಾ: ಹೊಸ ವಿಚಾರಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಬಹಳ ದಿನಗಳ ನಂತರ ಆಪ್ತರನ್ನು ಭೇಟಿಯಾಗುವ ಸಂತೋಷ ಸಿಗಲಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.

ವೃಶ್ಚಿಕ: ನಿಮ್ಮದಲ್ಲದ ವಸ್ತುವಿನ ಬಗ್ಗೆ ಅತಿಯಾದ ವ್ಯಾಮೋಹ ಬೇಡ. ಆಪ್ತರೊಂದಿಗೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ತೋರಿಬಂದೀತು. ಮಾತಿನ ಮೇಲೆ ಸಂಯಮವಿರಲಿ. ಸ್ವಯಂ ಉದ್ಯೋಗಿಗಳಿಗೆ ಲಾಭವಾಗಲಿದೆ.

ಧನು: ನೆರೆಹೊರೆಯವರ ಮೇಲೆ ನಿಮ್ಮ ಅಸಮಾಧಾನ ಹೆಚ್ಚಾದೀತು. ವೃತ್ತಿರಂಗದಲ್ಲಿ ಹಗ್ಗದ ಮೇಲಿನ ನಡಿಗೆ ನಿಮ್ಮದಾಗಲಿದೆ. ಮನಸ್ಸಿನಲ್ಲಿರುವ ಗೊಂದಲಕ್ಕೆ ತೆರೆ ಹಾಕಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಮಕರ: ಭೂಮಿ, ವಾಹನ ಖರೀದಿ ವಿಚಾರದಲ್ಲಿ ಮುನ್ನಡೆ ಕಂಡುಬರಲಿದೆ. ಹಿರಿಯರೊಂದಿಗೆ ಸಂಘರ್ಷ ಬೇಡ. ನಿರುದ್ಯೋಗಿಗಳಿಗೆ ಆಕರ್ಷಕ ಉದ್ಯೋಗಾವಕಾಶಗಳು ಬರಲಿವೆ. ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ.

ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಧಾರ್ಮಿಕ ವಿಚಾರದಲ್ಲಿ ಶ್ರದ್ಧೆ-ಭಕ್ತಿ ಹೆಚ್ಚುವುದು. ಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

ಮೀನ: ಯಂತ್ರೋಪಕರಣಗಳ ಕೆಲಸ ಮಾಡುವಾಗ ಅಪಘಾತದ ಭಯವಿದ್ದು, ಎಚ್ಚರಿಕೆ ಅಗತ್ಯ. ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಮುನ್ನಡೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Sade Sati Shani 2025: 2025 ರಲ್ಲಿ ಸಾಡೇ ಸಾತಿ ಶನಿ ಇರುವವರು ಈ ಪರಿಹಾರ ಮಾಡಿ

Sade Sati Shani 2025: ಶನಿ ದೆಶೆಯ ಮೂರು ಚರಣಗಳು ಮತ್ತು ಅದರ ಪರಿಣಾಮಗಳು

Sade Sati Shani 2025: 2025 ರಲ್ಲಿ ಸಾಡೇಸಾತಿ ಶನಿ ಯಾರಿಗೆಲ್ಲಾ ಇದೆ ಇಲ್ಲಿದೆ ವಿವರ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Shani Dosha horoscope 2025: ಮೀನ ರಾಶಿಯವರಿಗೆ 2025 ರಿಂದ ಶನಿ ದೆಶೆ ಶುರು

ಮುಂದಿನ ಸುದ್ದಿ
Show comments