ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಬಂಧು ಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ ನಿಮ್ಮದಾಗಲಿದೆ. ಆಸ್ತಿ ವಿಚಾರದಲ್ಲಿ ಹಿರಿಯರ ಸಹಕಾರ ಕಂಡುಬರಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು. ದೇವತಾ ಪ್ರಾರ್ಥನೆ ಮಾಡಿ.
ವೃಷಭ: ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಇಷ್ಟ ಭೋಜನ ಮಾಡುವ ಯೋಗ ನಿಮ್ಮದಾಗಲಿದೆ. ದೇಹಾರೋಗ್ಯದ ಬಗ್ಗೆ ಕಾಳಜಯಿರಲಿ.
ಮಿಥುನ: ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ವೃತ್ತಿರಂಗದಲ್ಲಿ ಉನ್ನತಿಗೆ ಅವಕಾಶವಿದ್ದರೂ ಹಿತಶತ್ರುಗಳ ಕಾಟ ಕಂಡುಬಂದೀತು. ಹೊಸದಾಗಿ ಪರಿಚಿತರಾದವರಿಂದ ಕೆಲಸಕ್ಕೆ ಸಹಾಯವಾಗಲಿದೆ.
ಕರ್ಕಟಕ: ಸಹೋದರಾದಿ ಸಂಬಂಧಿಗಳ ಶುಭ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೀರಿ. ಬಹಳ ದಿನಗಳ ನಂತರ ಬಂಧು ಮಿತ್ರರ ಭೇಟಿಯಾಗುವ ಯೋಗ. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ.
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಸಿದ್ದರಾಗಬೇಕಾಗುತ್ತದೆ. ಆರ್ಥಿಕವಾಗಿ ಧನ ಗಳಿಕೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಐಡಿಯಾಗಳು ತೋರಿಬರಲಿದೆ.
ಕನ್ಯಾ: ಧಾರ್ಮಿಕ ಚಟುವಟಿಕೆಯಲ್ಲಿ ಭಾಗಿಯಾದ ಸಂತೋಷ, ನೆಮ್ಮದಿ ನಿಮ್ಮದಾಗಲಿದೆ. ಆಸ್ತಿ ವಿಚಾರದಲ್ಲಿ ಮುನ್ನಡೆ ಕಂಡುಬರುವುದು. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.
ತುಲಾ: ನಿಮಗೆ ಸಂಬಂಧ ಪಡದ ವಿಚಾರಗಳಲ್ಲಿ ಮೂಗು ತೂರಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳುವ ಪ್ರಸಂಗ ಎದುರಾದೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆಯಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.
ವೃಶ್ಚಿಕ: ವೃತ್ತಿರಂಗದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಿದ್ದೀರಿ. ದುಃಖ-ದುಮ್ಮಾನಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಮನೆಗೆ ನೆಂಟರಿಷ್ಟರ ಭೇಟಿ ಸಾಧ್ಯತೆ.
ಧನು: ವ್ಯವಹಾರದ ಅನುಕೂಲಕ್ಕಾಗಿ ಕೆಲವೊಂದು ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ಪ್ರೇಮಿಗಳಿಗೆ ಶುಭ ದಿನವಾಗಿರಲಿದೆ. ಕಿರು ಓಡಾಟ ನಡೆಸಬೇಕಾಗುತ್ತದೆ.
ಮಕರ: ನೆರೆಹೊರೆಯವರೊಂದಿಗೆ ನೀರಿನ ವಿಚಾರಕ್ಕೆ ಸಂಘರ್ಷಗಳಾದೀತು. ಮಾತಿನ ಮೇಲೆ ಸಂಯಮವಿರಲಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ತುಸು ಚೇತರಿಕೆ ಕಂಡುಬರುವುದು. ಆಕಸ್ಮಿಕ ಧನಾಗಮನವಾಗಲಿದೆ.
ಕುಂಭ: ಹಳೆಯ ಬಾಕಿ ತೀರಿಸಲು ಮುಂದಾಗಲಿದ್ದು, ಸಾಲಗಾರರ ಕಾಟದಿಂದ ಮುಕ್ತರಾಗಲಿದ್ದೀರಿ. ಕ್ರಿಯಾತ್ಮಕ ಕೆಲಸಗಳಿಂದ ಇತರರ ಗಮನ ಸೆಳೆಯಲಿದ್ದೀರಿ. ಸಾಮಾಜಿಕವಾಗಿ ಗೌರವ ಹೆಚ್ಚಾಗಲಿದೆ. ದಿನದಂತ್ಯಕ್ಕೆ ಸಂತೋಷದ ಸುದ್ದಿ.
ಮೀನ: ಸರಿಯಾಗಿ ಪರಾಮರ್ಶಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ. ದೈಹಿಕ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.