Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 5 ಡಿಸೆಂಬರ್ 2021 (08:32 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವಿರಾಮದ ದಿನದ ಖುಷಿ ಅನುಭವಿಸಲಿದ್ದೀರಿ. ಅನಿರೀಕ್ಷಿತವಾಗಿ ಹಳೆಯ ಮಿತ್ರರನ್ನು ಭೇಟಿಯಾಗುವ ಯೋಗ ನಿಮ್ಮದಾಗಲಿದೆ. ದೇಹಾರೋಗ್ಯದ ಬಗ್ಗೆ ಅನಗತ್ಯ ಚಿಂತೆ ಬೇಡ. ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ.

ವೃಷಭ: ಹೊಸದಾಗಿ ಉದ್ಯೋಗ ಆರಂಭಿಸಿದವರಿಗೆ ಭವಿಷ್ಯದ ಬಗ್ಗೆ ಕೆಲವು ಯೋಜನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ವ್ಯಾಪಾರೀ ವರ್ಗದವರಿಗೆ ಆರ್ಥಿಕವಾಗಿ ಚೇತರಿಕೆ ಕಂಡುಬಂದೀತು. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ.

ಮಿಥುನ: ನಿಮ್ಮ ಹಳೆಯ ಸಂಬಂಧಗಳು ಮತ್ತೆ ಕೂಡಿಕೊಳ್ಳಲಿದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಸಂತಾನ ಹೀನ ದಂಪತಿ ದೇವರ ಮೊರೆ ಹೋಗಲಿದ್ದಾರೆ. ತಾಳ್ಮೆಯಿರಲಿ.

ಕರ್ಕಟಕ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ವಿಶೇಷವಾದ ವ್ಯಕ್ತಿಗಳನ್ನು ಭೇಟಿಯಾಗುವ ಯೋಗ ನಿಮ್ಮದಾಗಲಿದೆ. ಕಾರ್ಯದೊತ್ತಡದಿಂದ ದೇಹಬಾಧೆಯಾದೀತು. ಎಚ್ಚರಿಕೆಯಿರಲಿ.

ಸಿಂಹ: ನಿಮ್ಮ ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸಲಿದ್ದೀರಿ. ಇನ್ನೊಬ್ಬರು ನಿಮ್ಮ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸಲು ಅವಕಾಶ ಕೊಡಬೇಡಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಕನ್ಯಾ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ಮಕ್ಕಳಿಗೆ ಅನಿರೀಕ್ಷಿತ ಉಡುಗೊರೆಗಳ ಮೂಲಕ ಸಂತೋಷ ನೀಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಹಿರಿಯರಿಗೆ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಗ. ಮನಸ್ಸಿನಲ್ಲಿರುವ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಇಷ್ಟಭೋಜನ ಮಾಡುವ ಯೋಗ ಕೂಡಿಬರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ದೂರದ ನೆಂಟರಿಷ್ಟರನ್ನು ಭೇಟಿಯಾಗುವ ಯೋಗ. ಮನೆಯಲ್ಲಿ ಶುಭ ಮಂಗಲ ಕಾರ್ಯನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹಾಯಾಸವಾದೀತು. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.

ಧನು: ಎಷ್ಟೇ ಕಾರ್ಯದೊತ್ತಡವಿದ್ದರೂ ನೀವು ಅಂದುಕೊಂಡ ಕೆಲಸ ಪೂರ್ತಿ ಮಾಡಿದ ಸಂತೃಪ್ತಿ ನಿಮ್ಮದಾಗಲಿದೆ. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ಮಕ್ಕಳಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.

ಮಕರ: ಬಹಳ ದಿನಗಳಿಂದ ಅರ್ಧಕ್ಕೇ ನಿಂತಿದ್ದ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ವ್ಯಾವಹಾರಿಕ ಸಂಬಂಧಗಳಲ್ಲಿ ಸುಧಾರಣೆ ಕಂಡುಬರುವುದು. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ.

ಕುಂಭ: ನಿಮ್ಮ ಇಷ್ಟಾನುಸಾರ ನಿರ್ಧಾರ ತೆಗೆದುಕೊಳ್ಳುವುದರಿಂದ ಮನೆಯವರ ಅಸಮಾಧಾನಕ್ಕೆ ಕಾರಣವಾಗುವಿರಿ. ಮಾತಿನ ಮೇಲೆ ನಿಗಾ ಇರಲಿ. ಕೆಳ ಹಂತದ ನೌಕರರಿಗೆ ಭವಿಷ್ಯದ ಚಿಂತೆ ಕಾಡೀತು. ತಾಳ್ಮೆ ಅಗತ್ಯ.

ಮೀನ: ಸಂಬಂಧಗಳ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೀರಿ. ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿ ಕಂಡುಬರುವುದು. ಭೂಮಿ, ವಾಹನಾದಿ ಖರೀದಿ ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ. ಚಿಂತೆ ಬೇಡ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ