ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 3 ಡಿಸೆಂಬರ್ 2021 (08:20 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಆಗಬೇಕಾದ ಕೆಲಸಗಳ ಬಗ್ಗೆ ಮೀನಮೇಷ ಎಣಿಸುತ್ತಾ ಕೂತರೆ ಸಾಲದು. ಕಾರ್ಯೋನ್ಮುಖರಾಗುವತ್ತ ಗಮನ ಕೊಡಿ. ದೇಹಾರೋಗ್ಯದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್ಥಿಕವಾಗಿ ಅನಿರೀಕ್ಷಿತ ಧನಾಗಮನವಾಗಲಿದೆ.

ವೃಷಭ: ನಿಮ್ಮದಲ್ಲದ ವಸ್ತುವಿನ ಬಗ್ಗೆ ಅತಿಯಾದ ಮೋಹ ಬೇಡ. ಹಳೆಯ ಸಂಬಂದಗಳು ಮತ್ತೆ ಚಿಗುರಿಕೊಳ್ಳಲಿವೆ. ನೀರು-ಬೆಂಕಿಯೊಂದಿಗೆ ಎಚ್ಚರಿಕೆಯಿಂದಿರಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಮಾನಸಿಕ ನೆಮ್ಮದಿಗಾಗಿ ಕುಲದೇವರ ಪ್ರಾರ್ಥನೆ ಮಾಡಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಕರ್ಕಟಕ: ಪರ ಸ್ಥಳಗಳಿಗೆ ಕಾರ್ಯನಿಮಿತ್ತ ಸಂಚಾರ ಮಾಡಬೇಕಾದೀತು. ಹೊಸ ಜನರಿಂದ ನಿಮ್ಮ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಯಂತ್ರೋಪಕರಣಗಳ ವೃತ್ತಿಯವರು ಅಪಘಾತವಾಗದಂತೆ ಎಚ್ಚರಿಕೆ ವಹಿಸಬೇಕು.

ಸಿಂಹ: ವೈದ್ಯಕೀಯ ವೃತ್ತಿಯವರಿಗೆ ಬಿಡುವಿಲ್ಲದ ದುಡಿಮೆಯಿಂದ ದೇಹಾಯಾಸವಾದೀತು. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಮನಸ್ಸು ಹಾತೊರೆಯಲಿದೆ. ಇಷ್ಟ ಭೋಜನ ಮಾಡುವ ಯೋಗ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಕನ್ಯಾ: ವೃತ್ತಿರಂಗದಲ್ಲಿ ನೀವೇ ಬಾಸ್ ಆಗಿರಲಿದ್ದೀರಿ. ನಿಮ್ಮ ಕ್ರಿಯಾತ್ಮಕತೆಯಿಂದ ಎಲ್ಲರ ಗಮನ ಸೆಳೆಯಲಿದ್ದೀರಿ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ಎಚ್ಚರಿಕೆಯಿರಲಿ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ತಾಳ್ಮೆಯಿರಲಿ.

ತುಲಾ: ನಿಮ್ಮ ತಪ್ಪನ್ನು ಬೇರೆಯವರ ಮೇಲೆ ಹೊರಿಸುವ ಪ್ರಯತ್ನ ಮಾಡದಿರಿ. ಮಾತಿನ ಮೇಲೆ ನಿಗಾ ಅಗತ್ಯ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.

ವೃಶ್ಚಿಕ: ಹೊಸ ಜೀವನ, ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವೆನಿಸಬಹುದು. ಸಂಗಾತಿಯ ಸಹಕಾರ ಮನಸ್ಸಿಗೆ ನೆಮ್ಮದಿ ಕೊಡಲಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಧನು: ವೈಯಕ್ತಿಕ ಜೀವನದ ಕಷ್ಟ-ನಷ್ಟಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ನೆರೆಹೊರೆಯವರು ನಿಮ್ಮ ಗುಟ್ಟು ತಿಳಿಯಲು ಪ್ರಯತ್ನಿಸಲಿದ್ದಾರೆ. ಸಾಂಸಾರಿಕ ವಿಚಾರಗಳನ್ನು ನಾಜೂಕಾಗಿ ನಿಭಾಯಿಸಬೇಕು.

ಮಕರ: ದಾಯಾದಿ ಕಲಹಗಳಿಗೆ ಹಿರಿಯರ ಮಧ್ಯಸ್ಥಿಕೆ ಪಡೆದುಕೊಳ್ಳುವುದು ಉತ್ತಮ. ಮನಸ್ಸಿಗೆ ಋಣಾತ್ಮಕ ಚಿಂತನೆಗಳು ಕಾಡದಂತೆ ಎಚ್ಚರಿಕೆ ವಹಿಸಿ. ಇಷ್ಟಾರ್ಥ ಸಿದ್ಧಿಗಾಗಿ ಕುಲದೇವರ ಪ್ರಾರ್ಥನೆ ಮಾಡುವುದು ಉತ್ತಮ.

ಕುಂಭ: ಮಕ್ಕಳಿಗೆ ವೈವಾಹಿಕ ಸಂಬಂಧಗಳಿಗಾಗಿ ಪ್ರಯತ್ನ ನಡೆಸಲಿದ್ದೀರಿ. ಸರಕಾರಿ ನೌಕರರಿಗೆ ಕಾರ್ಯದೊತ್ತಡ ಕಡಿಮೆಯಾಗಲಿದೆ. ಸಾಂಸಾರಿಕವಾಗಿ ನಿಮ್ಮ ನಿರ್ಧಾರಗಳಿಗೆ ಸಂಗಾತಿಯ ಬೆಂಬಲ ಸಿಗಲಿದೆ.

ಮೀನ: ಪ್ರಯತ್ನವಿಲ್ಲದೇ ಫಲ ಸಿಗದು. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭವಿಲ್ಲದಿದ್ದರೂ ನಷ್ಟವಾಗದು. ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಅಷ್ಟೋತ್ತರ ಶತನಾಮಾವಳಿ ಪಠಣದ ಅದ್ಭುತ ಪ್ರಯೋಜನಗಳು

ಮಹಾಲಕ್ಷ್ಮಿ ಅಷ್ಟಕಂ ಮತ್ತು ಅದರ ಸರಳ ಅರ್ಥ ಇಲ್ಲಿದೆ

ಶ್ರೀ ವೆಂಕಟೇಶ್ವರ ಪ್ರಪತ್ತಿ ಸ್ತೋತ್ರ

ಸರಸ್ವತಿ ಅಷ್ಟೋತ್ತರ ಶತನಾಮಾವಳಿ

ಮಂಗಳಗೌರಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಮುಂದಿನ ಸುದ್ದಿ
Show comments