Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 2 ಡಿಸೆಂಬರ್ 2021 (08:31 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಸರಕಾರಿ ಕೆಲಸಗಳಲ್ಲಿ ಮುನ್ನಡೆ ಕಂಡುಬರಲಿದೆ. ನಿಮ್ಮ ಮನಸ್ಸಿನ ಸಂತೋಷ ನಿಮ್ಮ ಕೈಯಲ್ಲಿಯೇ ಇದೆ. ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಡಿ. ಆರ್ಥಿಕವಾಗಿ ಬರಬೇಕಾಗಿದ್ದ ಹಣ ವಾಪಸಾಗಲಿದೆ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಗೆ ನೆರವಾಗಲು ಮುಂದಾಗಲಿದ್ದೀರಿ. ಆರ್ಥಿಕವಾಗಿ ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಪ್ರೀತಿ ಪಾತ್ರರ ಮನಸ್ಸಿನ ದುಃಖಕ್ಕೆ ಸಾಂತ್ವನ ಹೇಳಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ಗೃಹ, ವಾಹನಾದಿ ಖರೀದಿ ವಿಚಾರದಲ್ಲಿ ವಂಚನೆಗೊಳಗಾಗುವ ಭೀತಿಯಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ದಿನದಂತ್ಯಕ್ಕೆ ನೆಮ್ಮದಿ ಸಿಗಲಿದೆ.

ಕರ್ಕಟಕ: ಉದ್ಯೋಗ, ವ್ಯವಹಾರದಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾಗಲಿವೆ. ಗುರುಹಿರಿಯರ ಮಾರ್ಗದರ್ಶನ ಕಷ್ಟಕಾಲದಲ್ಲಿ ನೆರವಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ವಿವೇಕ ಕಳೆದುಕೊಳ್ಳದೇ ತಾಳ್ಮೆಯಿಂದ ಯೋಚನೆ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನೂತನ ದಂಪತಿಗಳಿಗೆ ಹೊಂದಾಣಿಕೆ ಕೊರತೆಯಾಗಲಿದೆ.

ಕನ್ಯಾ: ಒಂದನ್ನು ಪಡೆಯುವುದಕ್ಕೆ ಇನ್ನೊಂದನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ. ಸ್ವಯಂ ಉದ್ಯೋಗಿಗಳಿಗೆ ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ.

ತುಲಾ: ಪಾಲುದಾರಿಕೆ ವ್ಯವಹಾರಗಳಿಂದ ಮುನ್ನಡೆ ಕಂಡುಬರಲಿದೆ. ವ್ಯಕ್ತಿಗತ ವಿಚಾರಗಳಲ್ಲಿ ಮೂರನೆಯವರಿಗೆ ಮೂಗು ತೂರಿಸಲು ಅವಕಾಶ ಕೊಡಬೇಡಿ. ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಒಳಿತಾಗಲಿದೆ.

ವೃಶ್ಚಿಕ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲು ವಿಘ್ನಗಳು ಎದುರಾದೀತು. ಹಿರಿಯರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದೀತು. ಕಾಳಜಿಯಿರಲಿ.

ಧನು: ಮಾನಸಿಕವಾಗಿ ಕಾಡುತ್ತಿರುವ ಚಿಂತೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಅನಿರೀಕ್ಷಿತವಾಗಿ ಧನಾಮನವಾಗಲಿದೆ. ಹೊಸದಾಗಿ ಕೆಲಸಕ್ಕೆ ಸೇರಿಕೊಂಡವರಿಗೆ ಉನ್ನತಿಗೇರುವ ಅವಕಾಶ. ತಾಳ್ಮೆ, ಸಂಯಮ ಅಗತ್ಯ.

ಮಕರ: ಶೈಕ್ಷಣಿಕ ರಂಗದಲ್ಲಿರುವವರಿಗೆ ಮುನ್ನಡೆಯ ಯೋಗ. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬರುವುದು. ಸಹೋದರರ ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ.

ಕುಂಭ: ಕಳೆದು ಹೋದ ವಸ್ತುಗಳು ಮರಳಿ ಕೈ ಸೇರಲಿವೆ. ಮನೆಗೆ ಅನಿರೀಕ್ಷಿತವಾಗಿ ನೆಂಟರಿಷ್ಟರ ಆಗಮನವಾಗಲಿದೆ. ಸರಕಾರಿ ನೌಕರರಿಗೆ ಕೆಲಸದೊತ್ತಡ ಕಂಡುಬಂದೀತು. ಕೃಷಿಕರಿಗೆ ಲಾಭ-ನಷ್ಟ ಸಮನಾಗಿರಲಿದೆ.

ಮೀನ: ವೈಯಕ್ತಿಕ ದೇಹಾರೋಗ್ಯದಲ್ಲಿ ಚೇತರಿಕೆ ಕಂಡುಬರಲಿದ್ದು, ಹೊಸ ಉಲ್ಲಾಸ ಮೂಡಲಿದೆ. ಹಿಂದೆ ನೀವು ಮಾಡಿದ ಒಳ್ಳೆಯ ಕೆಲಸಗಳು ಇಂದು ಸಕಾಲದಲ್ಲಿ ನೆರವಾಗಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ