Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

webdunia
ಸೋಮವಾರ, 29 ನವೆಂಬರ್ 2021 (08:32 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯುವುದರಿಂದ ಅಂದುಕೊಂಡ ಸಮಯದಲ್ಲಿ ಕೆಲಸಗಳು ಪೂರ್ತಿಯಾಗದು. ತಾಳ್ಮೆಯಿಂದ ಯೋಚಿಸಿದರೆ ಸಮಸ್ಯೆಗಳಿಗೆ ಪರಿಹಾರ ಕಂಡುಬರಲಿದೆ.

ವೃಷಭ: ಬಹುದಿನಗಳಿಂದ ಕಾಡುತ್ತಿದ್ದ ನಿಮ್ಮ ದೇಹಾರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ವ್ಯಾವಹಾರಿಕವಾಗಿ ಇದುವರೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಅನಗತ್ಯ ಚಿಂತೆ ಬೇಡ.

ಮಿಥುನ: ನಿಮ್ಮ ಸಮೀಪವರ್ತಿಗಳಿಗೆ ಸಮಸ್ಯೆಗಳು ಎದುರಾಗಲಿದ್ದು, ಅವರ ಕಷ್ಟದಲ್ಲಿ ಭಾಗಿಯಾಗಲಿದ್ದೀರಿ. ಕೆಳಹಂತದ ನೌಕರರಿಗೆ ಉದ್ಯೋಗ ಭದ್ರತೆಯ ಭಯ ಕಾಡಲಿದೆ. ಆರ್ಥಿಕವಾಗಿ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ.

ಕರ್ಕಟಕ: ವೃತ್ತಿರಂಗದಲ್ಲಿ ನಿಮ್ಮ ಕೆಲಸಗಳಿಗೆ ಅಡ್ಡಿಯಾಗಿದ್ದವರಿಂದ ಪಾರಾಗಲಿದ್ದೀರಿ. ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಿಂಹ: ದೂರ ಸಂಚಾರಗಳನ್ನು ಅನಿವಾರ್ಯ ಕಾರಣಗಳಿಗೆ ಮುಂದೂಡಬೇಕಾಗಬಹುದು. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಮನಸ್ಸು ಹಾತೊರೆಯಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ.

ಕನ್ಯಾ: ಶಾರೀರಿಕ ಬಲವಿದ್ದರೂ ಮಾನಸಿಕವಾಗಿ ಕೆಲವೊಂದು ವಿಚಾರಗಳು ನಿಮ್ಮನ್ನು ಚಿಂತೆಗೀಡು ಮಾಡಲಿದೆ. ಸಂಗಾತಿಯ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ಕಾರ್ಯನಿಮಿತ್ತ ಓಡಾಟ ನಡೆಸಲಿದ್ದೀರಿ.

ತುಲಾ: ದೂರದ ಬಂಧುಮಿತ್ರರ ಭೇಟಿಯಾಗಲಿದ್ದೀರಿ. ಮಹಿಳೆಯರಿಗೆ ಮಂಗಳ ವಸ್ತ್ರ ಖರೀದಿ ಯೋಗವಿದೆ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಂಡುಬರಲಿದೆ. ಕೃಷಿಕರಿಗೆ ಹೊಸ ಭರವಸೆ ಮೂಡಿಬರಲಿದೆ.

ವೃಶ್ಚಿಕ: ಹೊಸದಾಗಿ ಕೆಲಸಕ್ಕೆ ಸೇರಿದ್ದರೆ ಸವಾಲುಗಳು ಸಾಮಾನ್ಯ. ಇನ್ನೊಬ್ಬರ ಕೆಲಸದಲ್ಲಿ ಮೂಗು ತೂರಿಸುವ ಯತ್ನ ಬೇಡ. ಬಾಕಿ ಬರಬೇಕಾಗಿದ್ದ ಹಣ ವಸೂಲಾತಿ ಚಿಂತೆ ಕಾಡೀತು. ಪ್ರೇಮಿಗಳಿಗೆ ಶುಭ ದಿನವಾಗಲಿದೆ.

ಧನು: ಅಂದುಕೊಂಡ ಸಮಯದಲ್ಲಿ ಕೆಲಸ ನಿರ್ವಹಿಸಿದ ತೃಪ್ತಿ ಕಂಡುಬರುವುದು. ಇಷ್ಟಮಿತ್ರರ ಭೇಟಿ ಮನಸ್ಸಿನ ಸಂತೋಷ ಹೆಚ್ಚಿಸಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವುದು. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಮಕರ: ನೂತನ ಕೆಲಸಗಳನ್ನು ಪ್ರಾರಂಭಿಸಲು ಇದು ಸಕಾಲ. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ಹೊಸದಾಗಿ ಮದುವೆಯಾದವರಿಗೆ ಹೊಂದಾಣಿಕೆ ಕಷ್ಟವೆನಿಸೀತು. ಹಿರಿಯರ ಸಲಹೆಗಳಿಗೆ ಕಿವಿಗೊಡಿ.

ಕುಂಭ: ದಾಂಪತ್ಯದಲ್ಲಿ ಅನುರಾಗ ವೃದ್ಧಿ, ಸಾಂಸಾರಿಕವಾಗಿ ಸುಖ,ಶಾಂತಿ ಕಂಡುಬರಲಿದೆ. ಮಕ್ಕಳಿಂದ ಸಂತೋಷದ ವಾರ್ತೆ ಆಲಿಸಲಿದ್ದೀರಿ. ಉದ್ಯೋಗ, ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದ್ದು, ಶುಭ ದಿನವಾಗಿರಲಿದೆ.

ಮೀನ: ಸರಕಾರಿ ನೌಕರರಿಗೆ ಕಾರ್ಯದೊತ್ತಡ ಕಂಡುಬಂದೀತು. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ಮನೆಗೆ ನೆಂಟರಿಷ್ಟರ ಆಗಮನ ಸಾಧ್ಯತೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುನ್ನಡೆಯಿರುವುದು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ