ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 19 ನವೆಂಬರ್ 2021 (08:31 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಅನಿವಾರ್ಯ ಸಂದರ್ಭದಲ್ಲಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ಆಪ್ತರನ್ನು ಭೇಟಿಯಾಗುವ ಖುಷಿಯಿದ್ದರೋ ಏನೋ ಅರಿಯದ ಆತಂಕ ಮನಸ್ಸಿಗೆ ಕಾಡಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಯಾವುದೇ ಕೆಲಸ ಆರಂಭಿಸಬೇಕಾದರೂ ನಿಮ್ಮ ಕೈಲಾಗದೇನೋ ಎಂಬ ಅನುಮಾನ ಕಾಡೀತು. ಸಂಗಾತಿಯ ಸಹಕಾರ ಪಡೆಯಲಿದ್ದೀರಿ. ಆರ್ಥಿಕವಾಗಿ ಒಳ್ಳೆಯ ವಿಚಾರಕ್ಕೆ ಖರ್ಚು ವೆಚ್ಚ ಮಾಡಲಿದ್ದೀರಿ.

ಮಿಥುನ: ನೂತನ ಸಂಬಂಧಗಳು ಬೆಸೆಯಲಿದ್ದು, ಮನಸ್ಸಿಗೆ ಒಂದು ರೀತಿಯ ಸಂತೋಷ ಸಿಗಲಿದೆ. ಆಪ್ತೇಷ್ಟರ ಸಲಹೆಗಳು ಉಪಯೋಗಕ್ಕೆ ಬರಲಿದೆ. ಮನೋರಂಜನಾ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗವಿದೆ.

ಕರ್ಕಟಕ: ದೇಹದಲ್ಲಾಗುವ ಸಣ್ಣ ಪುಟ್ಟ ಏರುಪೇರು ಆತಂಕಕ್ಕೆ ಕಾರಣವಾದೀತು. ಸಹೋದ್ಯೋಗಿಗಳು ನಿಮ್ಮ ಸಹಾಯ ಬಯಸಿ ಬರಲಿದ್ದಾರೆ. ವ್ಯಾಪಾರೀ ವರ್ಗದವರಿಗೆ ಹಳೆಯ ಬಾಕಿ ತೀರಿಸುವ ಒತ್ತಡ ಕಂಡುಬಂದೀತು.

ಸಿಂಹ: ನೀವು ಹಿಂದೆ ಹೂಡಿದ್ದ ಬಂಡವಾಳಕ್ಕೆ ತಕ್ಕ ಪ್ರತಿಫಲ ಪಡೆಯಲಿದ್ದೀರಿ. ವಿದ್ಯಾರ್ಥಿಗಳ ಗಮನ ಬೇರೆಡೆ ಸೆಳೆಯಲಿದೆ. ಹಿರಿಯರ ಸಲಹೆಗಳು ಅಪಥ್ಯವೆನಿಸೀತು. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.

ಕನ್ಯಾ: ನಿಮ್ಮ ಸುಖ ಸೌಖ್ಯಕ್ಕಾಗಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಮಕ್ಕಳಿಂದ ಅನಿರೀಕ್ಷಿತ ವಾರ್ತೆಗಳು ಕೇಳಿಬರಲಿವೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.

ತುಲಾ: ನಿಮ್ಮದಲ್ಲದ ವಸ್ತುವಿನ ಮೇಲೆ ಮೋಹ ಬೆಳೆಸಿಕೊಳ‍್ಳಲಿದ್ದೀರಿ. ಆಸ್ತಿ, ವಾಹನ ಖರೀದಿಗೆ ಸದ್ಯದಲ್ಲೇ ಯೋಗ ಕೂಡಿಬರುವುದು. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು.

ವೃಶ್ಚಿಕ: ಹೊಸ ಉದ್ಯೋಗಕ್ಕೆ ಒಗ್ಗಿಕೊಳ್ಳಲು ತುಸು ಕಷ್ಟವಾದೀತು. ಆದರೆ ಕಷ್ಟದ ಸಮಯದಲ್ಲಿ ಮಿತ್ರರ ಸಹಾಯವೊದಗಿಬರುವುದು. ದಾಂಪತ್ಯದಲ್ಲಿ ಸಹನೆಯಿರಲಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಧನು: ಬಹಳ ದಿನಗಳಿಂದ ನೀವು ಮಾಡಬೇಕೆಂದುಕೊಂಡಿದ್ದ ಕೆಲಸಗಳನ್ನು ಪೂರ್ತಿ ಮಾಡಲಿದ್ದೀರಿ. ದೀರ್ಘ ಪ್ರಯಾಣಕ್ಕೆ ಸಿದ್ಧರಾಗಲಿದ್ದೀರಿ. ಬಂಧು ಮಿತ್ರರ ಭೇಟಿ ಮನಸ್ಸಿನ ಸಂತೋಷ ಹೆಚ್ಚಿಸಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಮಕರ: ವೃತ್ತಿರಂಗದಲ್ಲಿ ನೀವು ಅಂದುಕೊಳ್ಳದೇ ಇದ್ದ ರೀತಿಯಲ್ಲಿ ಕೆಲವೊಂದು ಬದಲಾವಣೆಗಳು ಕಂಡುಬರಲಿದೆ. ತಾಳ್ಮೆ, ಸಂಯಮ ಅಗತ್ಯ. ವೈದ್ಯಕೀಯ ರಂಗದಲ್ಲಿರುವವರಿಗೆ ಬಿಡುವಿಲ್ಲದ ಕೆಲಸ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಕುಂಭ: ನಿಮ್ಮ ಸ್ವಂತ ಪರಿಶ್ರಮದಿಂದ ಮಾಡುವ ಕೆಲಸಗಳಿಗೆ ತಕ್ಕ ಯಶಸ್ಸು ಪಡೆಯಲಿದ್ದೀರಿ. ಉದ್ಯೋಗ ವ್ಯವಹಾರದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ ಕೂಡಿಬರುವುದು.

ಮೀನ: ನೀವು ಬಹಳ ದಿನಗಳಿಂದ ಆಸೆ ಪಟ್ಟಿದ್ದ ವಸ್ತು ತಾನಾಗೇ ನಿಮ್ಮ ಕೈಸೇರಲಿದೆ. ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನವಾಗಲಿದ್ದು, ಆ ನಿಮಿತ್ತ ಖರ್ಚು ವೆಚ್ಚಗಳಾದೀತು. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ನಿವಾರಣೆಗೆ ಈ ಕಿರು ಮಂತ್ರ ಸಾಕು

ಸಂಜೆ ದೀಪ ಹಚ್ಚುವಾಗ ಪಠಿಸಬಹುದಾದ ಸ್ತೋತ್ರಗಳು ಇಲ್ಲಿವೆ

ಕೆಟ್ಟ ದೃಷ್ಟಿ ನಿವಾರಿಸಿ ಸಂಪತ್ತು ವೃದ್ಧಿಗೆ ಈ ಲಕ್ಷ್ಮೀ ಮಂತ್ರ ಪಠಿಸಿ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮೇಷಾದಿ ದ್ವಾದಶ ರಾಶಿಫಲ 2026: ಖ್ಯಾತ ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ

ಮುಂದಿನ ಸುದ್ದಿ
Show comments