Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 17 ನವೆಂಬರ್ 2021 (08:34 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಪ್ರಗತಿ ಕಂಡುಬರುವುದು. ನಿಮ್ಮ ಕರ್ತವ್ಯ ನಿಷ್ಠೆ ಬಗ್ಗೆ ಎದುರಾಳಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಲಿದೆ. ಆದರೆ ವೈಯಕ್ತಿಕ ಜೀವನದಲ್ಲಿ ಏರುಪೇರು ಕಂಡುಬಂದೀತು. ತಾಳ್ಮೆಯಿರಲಿ.

ವೃಷಭ: ಅಪರಿಚಿತರನ್ನು ನಂಬಿ ಹಣಕಾಸಿನ ವ್ಯವಹಾರ ಮಾಡಬೇಡಿ. ಗುರುಹಿರಿಯರ ವಿಶ್ವಾಸಕ್ಕೆ ಪಾತ್ರರಾಗಲಿದ್ದೀರಿ. ಮನೆಯ ವಾತಾವರಣ ಕೊಂಚ ಪ್ರಕ್ಷುಬ್ಧವಾಗಿರುವಂತೆ ಕಂಡುಬಂದೀತು. ತಾಳ್ಮೆ, ಸಂಯಮದಿಂದ ನಿಭಾಯಿಸಿ.

ಮಿಥುನ: ವೈವಾಹಿಕ ಸಂಬಂಧಗಳಲ್ಲಿ ಬಿರುಕು ಉಂಟಾಗದಂತೆ ಎಚ್ಚರಿಕೆ ವಹಿಸಿ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗ ಕೂಡಿಬರಲಿದೆ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ಕಂಡುಬರಲಿದೆ. ಅತಿಯಾದ ಅವಲಂಬನೆಯೂ ಒಳ್ಳೆಯದಲ್ಲ. ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡದಂತೆ ಎಚ್ಚರಿಕೆ ವಹಿಸಿ. ಕಿರು ಸಂಚಾರ ಮಾಡಲಿದ್ದೀರಿ.

ಸಿಂಹ: ನಿಮ್ಮ ಒಳ್ಳೆಯತನ ದುರುಪಯೋಗಪಡಿಸಿಕೊಳ್ಳುವವರಿರುತ್ತಾರೆ. ಎಚ್ಚರಿಕೆ ವಹಿಸಿ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ವಿದ್ಯಾರ್ಥಿಗಳಿಗೆ ಜ್ಞಾನಾಭಿವೃದ್ಧಿಗೆ ಅವಕಾಶ ಕಂಡುಬರಲಿದೆ. ಮಿತ್ರರ ಭೇಟಿಯಾಗಲಿದ್ದೀರಿ.

ಕನ್ಯಾ: ಹೆಚ್ಚಿನ ಧನಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ನಿಮ್ಮ ಯೋಜನೆಗಳಿಗೆ ಸಂಗಾತಿಯ ಸಹಕಾರ ಕಂಡುಬರಲಿದೆ. ಮಕ್ಕಳಿಗೆ ಅನಿರೀಕ್ಷಿತ ಉಡುಗೊರೆ ನೀಡಲಿದ್ದೀರಿ. ಸಂತೋಷವಿರಲಿದೆ.

ತುಲಾ: ಆರ್ಥಿಕವಾಗಿ ಸಮೃದ್ಧಿ ಕಂಡುಬರಲಿದ್ದು, ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಮುನ್ನಡೆ ಕಂಡುಬರುವುದು. ಯೋಗ್ಯ ವಯಸ್ಕರಿಗೆ ಮನಸ್ಸಿಗೆ ಹಿಡಿಸಿದ ಸಂಬಂಧಗಳು ಕೂಡಿಬರಲಿದೆ.

ವೃಶ್ಚಿಕ: ಅಧಿಕ ಧನಲಾಭದ ಆಸೆಯಿಂದ ವಂಚನೆಗೊಳಗಾಗುವ ಸಾಧ‍್ಯತೆಯಿದೆ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ನಿಗಾ ವಹಿಸಿ. ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಹಲವು ದಿನಗಳ ನಂತರ ಪ್ರೀತಿ ಪಾತ್ರರ ಭೇಟಿಯಾಗಲಿದ್ದೀರಿ.

ಧನು: ನಿಮ್ಮ ಮಾತಿನಿಂದ ಇತರರ ಮನಸ್ಸಿಗೆ ನೋವುಂಟಾದೀತು. ದಾಂಪತ್ಯವು ತೃಪ್ತಿಕರವಾಗಲಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಲಿದ್ದೀರಿ.

ಮಕರ: ಹೊಸದಾಗಿ ಕೆಲಸಕ್ಕೆ ಸೇರಿಕೊಂಡವರಿಗೆ ಹೊಂದಾಣಿಕೆ ಕಷ್ಟವಾದೀತು. ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ, ಮರಳಿ ಬಾರದು. ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ನಾಲಿಗೆ ರುಚಿ ಎನಿಸಿದ್ದು ಅತಿಯಾಗಿ ಸೇವನೆ ಮಾಡಲು ಹೋದರೆ ಆರೋಗ್ಯ ಸಮಸ್ಯೆ ಕಂಡುಬಂದೀತು. ಸಹೋದರ ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯವಾಗದಂತೆ ಎಚ್ಚರಿಕೆ ವಹಿಸಿ. ಆರ್ಥಿಕವಾಗಿ ಅಭಿವೃದ್ಧಿ ಕಂಡುಬರಲಿದೆ.

ಮೀನ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾದೀತು. ಎಚ್ಚರಿಕೆ ಅಗತ್ಯ. ಉದ್ಯೋಗ ಬದಲಾವಣೆಗೆ ಪ್ರಯತ್ನ ನಡೆಸಲಿದ್ದೀರಿ. ಸಾಂಸಾರಿಕವಾಗಿ ನೆಮ್ಮದಿಯಿದ್ದರೂ ಭವಿಷ್ಯದ ಚಿಂತೆ ಕಾಡಲಿದೆ. ದೇವತಾ ಪ್ರಾರ್ಥನೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Anjaneya Mantra: ಶನಿದೋಷವಿದ್ದವರು ಆಂಜನೇಯನ ಈ ಸ್ತೋತ್ರವನ್ನು ಓದಿ

Lakshmi Mantra: ಮನಸ್ಸಿನ ಭಯ ದೂರ ಮಾಡಲು ಧೈರ್ಯ ಲಕ್ಷ್ಮಿ ಸ್ತೋತ್ರ ಇಲ್ಲಿದೆ ನೋಡಿ

Vishnu Mantra: ಶ್ರೀ ವಿಷ್ಣು ಅಷ್ಟೋತ್ತರ ನಾಮಾವಳಿ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

Lakshmi Mantra: ರಾಜ್ಯದಲ್ಲಿ ಸರಾಸರಿ ಗರಿಷ್ಠ ತಾಪಮಾನ 34 ಡಿಗ್ರಿಯಷ್ಟಿರಲಿದೆ ಎಂದು ವರದಿಗಳು ಹೇಳುತ್ತಿವೆ.

Subramanya mantra: ನಾಗದೋಷ, ವಿವಾಹಕ್ಕೆ ಸಮಸ್ಯೆಯಾಗಿದ್ದ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments