ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಹಿಂದೆ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ವೃಷಭ: ವೃತ್ತಿರಂಗದಲ್ಲಿ ಉನ್ನತ ಸ್ಥಾನಕ್ಕೇರುವ ಅವಕಾಗಳು ಬಂದಾಗ ಸರಿಯಾಗಿ ಬಳಸಿಕೊಳ್ಳಿ. ಆರ್ಥಿಕವಾಗಿ ಅಭಿವೃದ್ಧಿ ಕಂಡುಬರಲಿದ್ದು, ವ್ಯವಹಾರಗಳಲ್ಲಿ ಚೇತರಿಕೆ ಕಂಡುಬರುವುದು. ದೂರ ಸಂಚಾರ ಮಾಡಲಿದ್ದೀರಿ.
ಮಿಥುನ: ಹೊಸ ಜನರ ಭೇಟಿಯಾಗಲಿದ್ದು, ನಿಮ್ಮ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಸ್ವಸಾಮರ್ಥ್ಯದಿಂದ ಏಳಿಗೆ ಕಂಡುಬರಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ದಿನದಂತ್ಯಕ್ಕೆ ನೆಮ್ಮದಿ ಕಂಡುಬರುವುದು.
ಕರ್ಕಟಕ: ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗಾಗಿ ಕಟ್ಟುನಿಟ್ಟಿನ ಜೀವನಶೈಲಿ ರೂಢಿಸಿಕೊಳ್ಳಲಿದ್ದೀರಿ. ಪ್ರೀತಿ, ಪ್ರೇಮ ವಿಚಾರದಲ್ಲಿ ಮುನ್ನಡೆಯಿರಲಿದೆ. ಬಂಧುಮಿತ್ರರ ಸಹಕಾರವಿರಲಿದೆ. ಕುಲದೇವರ ಪ್ರಾರ್ಥನೆ ನಡೆಸಲಿದ್ದೀರಿ.
ಸಿಂಹ: ನಿಮ್ಮ ಹಿತೋಪದೇಶಗಳು ಇನ್ನೊಬ್ಬರಿಗೆ ಇಷ್ಟವಾಗದೇ ಹೋಗಬಹುದು. ವ್ಯಾವಹಾರಿಕವಾಗಿ ಮುನ್ನಡೆ ಕಂಡುಬಂದರೂ ಹಿತಶತ್ರುಗಳ ಕಾಟವಿದ್ದೀತು. ಆದಾಯ ವೃದ್ಧಿಗೆ ನಾನಾ ದಾರಿ ಕಂಡುಕೊಳ್ಳಲಿದ್ದೀರಿ.
ಕನ್ಯಾ: ಮಾತಿನ ಮೇಲೆ ಸಂಯಮವಿಲ್ಲದೇ ಹೋದರೆ ಸಂಘರ್ಷಗಳಾದೀತು. ದೈವಭಕ್ತಿ ಹೆಚ್ಚಾಗಲಿದ್ದು, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರುವುದು.
ತುಲಾ: ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಮಾಡಲು ಕುಟುಂಬದವರ ಸಹಕಾರವಿರಲಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಲಿದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಲಿದ್ದೀರಿ. ತಾಳ್ಮೆಯಿರಲಿ.
ವೃಶ್ಚಿಕ: ಉದ್ಯೋಗ ವ್ಯವಹಾರದಲ್ಲಿ ಕಷ್ಟಗಳು ಬಂದಾಗ ಮಿತ್ರರ ಸಹಾಯ ಸಿಗಲಿದೆ. ಸಾಂಸಾರಿಕವಾಗಿ ಸುಖ-ಸಮೃದ್ಧಿಗೆ ಕೊರತೆಯಿರದು. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ವಾಹನ ಸಂಚಾರದಲ್ಲಿ ಎಚ್ಚರ ಅಗತ್ಯ.
ಧನು: ಭೂಮಿ, ವಾಹನ ಇತ್ಯಾದಿ ಖರೀದಿ ವಿಚಾರದಲ್ಲಿ ಲಾಭವಾಗಲಿದೆ. ನಿರೀಕ್ಷಿತ ಸಮಯದಲ್ಲಿ ಸಹಾಯ ಒದಗಿಬರುವುದರಿಂದ ಕಷ್ಟಗಳಿಂದ ಪಾರಾಗಲಿದ್ದೀರಿ. ದಾನ ಧರ್ಮಾದಿಗಳಿಂದ ನೆಮ್ಮದಿ ಸಿಗಲಿದೆ.
ಮಕರ: ಉದ್ಯೋಗ ವ್ಯವಹಾರದಲ್ಲಿ ಜವಾಬ್ಧಾರಿ ಹೆಚ್ಚಾಗಲಿದ್ದು, ಧನ ಗಳಿಕೆಯ ಮಾರ್ಗವೂ ಕಂಡುಬರುವುದು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ನೂತನ ಮಿತ್ರರನ್ನು ಸಂಪಾದಿಸಲಿದ್ದೀರಿ.
ಕುಂಭ: ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿದಾಯಕ ವಾತಾವರಣ ಕಂಡುಬರಲಿದೆ. ಮಿತ್ರರ ಕಷ್ಟಗಳಿಗೆ ಸ್ಪಂದಿಸಲಿದ್ದೀರಿ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ.
ಮೀನ: ಪಾಲುದಾರಿಕೆ ವ್ಯವಹಾರದಲ್ಲಿ ಉನ್ನತಿ ಕಂಡುಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ. ಮನೆಗೆ ಅನಿರೀಕ್ಷಿತವಾಗಿ ನೆಂಟರಿಷ್ಟರ ಆಗಮನವಾಗಲಿದೆ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ.