Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 5 ಅಕ್ಟೋಬರ್ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸರಕಾರಿ ಕಚೇರಿ ಕೆಲಸಗಳಲ್ಲಿ ಯಶಸ್ಸು ಕಂಡುಬರಲಿದ್ದು, ಅಂದುಕೊಂಡ ಕೆಲಸಗಳು ನೆರವೇರಲಿದೆ. ಕೌಟುಂಬಿಕವಾಗಿ ನೂತನ ಹೊಣೆಗಾರಿಕೆ ಹೆಗಲಿಗೇರಲಿದೆ. ಕಾರ್ಯ ನಿಮಿತ್ತ ಸಂಚಾರ ಮಾಡಬೇಕಾಗಬಹುದು.

ವೃಷಭ: ಸದಾ ಚಟುವಟಿಕೆಯಿಂದ ಕೂಡಿರುವ ನಿಮಗೆ ಇಂದು ಮಾನಸಿಕವಾಗಿ ನಿರುತ್ಸಾಹ ಕಾಡಲಿದೆ. ಆಪ್ತರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಲಿದ್ದೀರಿ. ಅವಿವಾಹಿತರಿಗೆ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿದೆ.

ಮಿಥುನ: ದಾಂಪತ್ಯ ಸುಖಕ್ಕೆ ಕೊರತೆಯಿರದು. ಆದರೆ ನೆರೆಹೊರೆಯವರ ಚಾಡಿ ಮಾತುಗಳಿಂದ ಮನಸ್ಸಿಗೆ ನೋವಾಗುವ ಸಂದರ್ಭ ಎದುರಾದೀತು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ದೇವತಾ ಪ್ರಾರ್ಥನೆ ಮಾಡಿದರೆ ಉತ್ತಮ.

ಕರ್ಕಟಕ: ಗುರುಹಿರಿಯರ ಹಿತೋಪದೇಶಗಳು ಉಪಯೋಗಕ್ಕೆ ಬರಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದ್ದು, ಹಣಕಾಸಿನ ಹರಿವು ಹೆಚ್ಚಾಗಲಿದೆ. ಕೃಷಿಕರಿಗೆ ಹೊಸ ಐಡಿಯಾಗಳು ಹೊಳೆಯಲಿವೆ. ತಾಳ್ಮೆ ಅಗತ್ಯ.

ಸಿಂಹ: ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡಿದ್ದನ್ನು ಹೊರಗೆಳೆಯುವ ಕಾಲ. ಸಹೋದ್ಯೋಗಿಗಳಿ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಕನ್ಯಾ: ಕಾರ್ಯಾರಂಭದಲ್ಲಿ ವಿಘ್ನಗಳು ಎದುರಾದರೂ, ಎದೆಗುಂದದೇ ನಡೆದರೆ ಮುಂದೆ ಯಶಸ್ಸು ನಿಮ್ಮದಾಗುವುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆಯಾದೀತು. ಸಂಗಾತಿಯೊಂದಿಗೆ ಅನಗತ್ಯ ಸಂಘರ್ಷಕ್ಕೆ ಅವಕಾಶ ಕೊಡಬೇಡಿ.

ತುಲಾ: ಇನ್ನೊಬ್ಬರ ಮೇಲೆ ಅತಿಯಾದ ಅವಲಂಬನೆಯೂ ಕೆಲವೊಮ್ಮೆ ತೊಂದರೆಗೆ ಕಾರಣವಾದೀತು. ನೂತನ ದಂಪತಿಗಳಲ್ಲಿ ಹೊಂದಾಣಿಕೆಯ ಕೊರತೆ ಕಂಡುಬರಲಿದೆ. ಮನಸ್ಸಿನ ನೆಮ್ಮದಿಗಾಗಿ ದೇವರ ಪ್ರಾರ್ಥನೆ ಮಾಡಿ.

ವೃಶ್ಚಿಕ: ನಿಮ್ಮ ನಿರ್ಧಾರ ಅಸ್ಥಿರಗೊಳಿಸುವ ಘಟನೆಗಳು ನಡೆಯಲಿವೆ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾಗಲಿವೆ. ಸಂಗಾತಿಯ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ಇಷ್ಟ ಭೋಜನ ಮಾಡುವ ಯೋಗವಿದೆ.

ಧನು: ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಬೇಕೆನ್ನುವ ನಿಮ್ಮ ಆಕಾಂಕ್ಷೆ ಸದ್ಯದಲ್ಲೇ ನನಸಾಗಲಿದೆ. ಮಾನಸಿಕವಾಗಿ ಗಟ್ಟಿಯಾಗಬೇಕಾದ ಕಾಲವಿದು. ಅನಗತ್ಯ ಸಂಘರ್ಷಗಳಿಗೆ ಅವಕಾಶ ಕೊಡಬೇಡಿ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಮಕರ: ಕಾರ್ಯದೊತ್ತಡ, ದೀರ್ಘ ಪ್ರಯಾಣದಿಂದ ದೇಹಾಯಾಸವಾಗಲಿದೆ. ಪಾಲುದಾರಿಕೆ ವ್ಯವಹಾರಗಳಿಂದ ಲಾಭ ಕಂಡುಬರಲಿದೆ. ಆದರೆ ಸರಕಾರಿ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ತಾಳ್ಮೆಯಿಂದ ಕಾರ್ಯನಿರ್ವಹಿಸಿ.

ಕುಂಭ: ಇಷ್ಟ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾದೀತು. ಆದರೆ ಮಾನಸಿಕವಾಗಿ ಸಂತೋಷದಾಯಕ ದಿನವಾಗಿರಲಿದೆ. ದಾಂಪತ್ಯದಲ್ಲಿ ಸುಖವಿದ್ದೀತು. ಮಕ್ಕಳಿಂದ ಸಂತಸದ ವಾರ್ತೆ ಕೇಳಿಬರಲಿದೆ.

ಮೀನ: ಉದ್ಯೋಗ ನಿಮಿತ್ತ ಪರವೂರಿಗೆ ಪ್ರಯಾಣ ಮಾಡಬೇಕಾಗಬಹುದು. ಸತ್ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯ ಯೋಗವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ