ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 14 ಜುಲೈ 2021 (08:37 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಇಚ್ಛಿತ ಕಾರ್ಯಗಳು ಅಂದುಕೊಂಡ ರೀತಿಯಲ್ಲೇ ಸುಗಮವಾಗಿ ನೆರವೇರಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಶತ್ರುಗಳಿಗೆ ಹಿನ್ನಡೆಯಾಗಲಿದೆ. ಆರ್ಥಿಕವಾಗಿ ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಲೆಕ್ಕಪತ್ರಗಳ ಬಗ್ಗೆ ಎಚ್ಚರಿಕೆಯಿಂದಿರಿ.

ವೃಷಭ: ಸರಕಾರಿ ಉದ್ಯೋಗಿಗಳಿಗೆ ಬಡ್ತಿ ಯೋಗ ಸದ್ಯದಲ್ಲೇ ಕೂಡಿಬರುವುದು. ಮೇಲಧಿಕಾರಿಗಳು ನಿಮ್ಮ ಕ್ರಿಯಾತ್ಮಕ ಕೆಲಸಗಳನ್ನು ಪ್ರಶಂಸಿಸಲಿದ್ದಾರೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ತಾಳ್ಮೆಯಿರಲಿ.

ಮಿಥುನ: ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ನೇರವಾಗಿ ಹೇಳುವುದರಿಂದ ಬೇರೆಯವರ ಮನಸ್ಸಿಗೆ ನೋವುಂಟಾದೀತು. ತಾಳ್ಮೆ, ಸಂಯಮವಿರಲಿ. ಸಂಗಾತಿಯ ಮನದಿಂಗಿತವನ್ನು ಅರಿತು ನಡೆದುಕೊಳ್ಳಲಿದ್ದೀರಿ. ಚಿಂತೆ ಬೇಡ.

ಕರ್ಕಟಕ: ನಿಮ್ಮ ಕೆಲವೊಂದು ನಿರ್ಧಾರಗಳು ಬೇರೆಯವರಿಗೆ ಇಷ್ಟವಾಗದೇ ಹೋದೀತು. ಆದರೆ ದೃಢ ಸಂಕಲ್ಪದಿಂದ ಮುನ್ನಡೆಯಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯ ಯೋಗವಿದೆ.

ಸಿಂಹ: ನಿರ್ಧಾರ ತೆಗೆದುಕೊಳ್ಳುವಾಗ ಪ್ರೀತಿ ಪಾತ್ರರ ಇಷ್ಟ-ಕಷ್ಟಗಳಿಗೆ ಬೆಲೆ ಕೊಡಬೇಕಾಗುತ್ತದೆ. ವ್ಯಾವಹಾರಿಕವಾಗಿ ಇದುವರೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ನಿಮ್ಮ ದಾರಿ ಸುಗಮವಾಗಲಿದೆ. ಕಿರು ಸಂಚಾರ ಮಾಡುವಿರಿ.

ಕನ್ಯಾ: ವೈಯಕ್ತಿಕ ದೇಹಾರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡುಬರುವುದು. ಮಕ್ಕಳ ಸಂತೋಷಕ್ಕಾಗಿ ಕೆಲವು ನಿರ್ಧಾರ ತೆಗೆದುಕೊಳ‍್ಳಲಿದ್ದೀರಿ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಡುವ ಯೋಗ ಕೂಡಿಬರುವುದು. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ತುಲಾ: ಹಲವು ದಿನಗಳಿಂದ ನಿಮ್ಮ ಮನಸ್ಸಿನಲ್ಲಿ ಕೊರೆಯುತ್ತಿದ್ದ ವಿಚಾರಕ್ಕೆ ಅಂತ್ಯ ಹಾಡಲಿದ್ದೀರಿ. ದಾಯಾದಿ ಕಲಹಗಳ ಪರಿಹಾರಕ್ಕೆ ಹಿರಿಯರ ಸಲಹೆ ಪಡೆಯಿರಿ. ಕೋರ್ಟು ಕಚೇರಿ ಕೆಲಸಗಳಿಗೆ ಓಡಾಟ ನಡೆಸಬೇಕಾಗಬಹುದು.

ವೃಶ್ಚಿಕ: ನಿಮ್ಮನ್ನು ತುಳಿಯುವವರ ಮುಂದೆ ಬೆಳೆಯಬೇಕೆಂಬ ಛಲ ಮೂಡಲಿದೆ. ಹಿರಿಯರಿಗೆ ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾದೀತು, ಚಿಂತೆ ಬೇಡ. ವ್ಯಾಪಾರಿಗಳಿಗೆ ಕೊಂಚ ಚೇತರಿಕೆ ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ಧನು: ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ವಿದ್ಯಾರ್ಥಿಗಳು ಉದಾಸೀನ ಪ್ರವೃತ್ತಿ ಬಿಡದಿದ್ದರೆ ಭವಿಷ್ಯಕ್ಕೆ ತೊಂದರೆಯಾದೀತು. ಪ್ರೇಮಿಗಳಿಗೆ ಹಿರಿಯರಿಂದ ಒಪ್ಪಿಗೆ ಸಿಗಲಿದೆ. ಅನಗತ್ಯ ಚಿಂತೆ ಬೇಡ.

ಮಕರ: ವೃತ್ತಿರಂಗದ ಸಮಸ್ಯೆಗಳಿಗೆ ಸಹೋದ್ಯೋಗಿಗಳಿಂದ ಪರಿಹಾರ ಸಿಗಲಿದೆ. ಕೃಷಿಕರಿಗೆ ವ್ಯವಹಾರಕ್ಕೆ ಅನುಕೂಲಕರ ವಾತಾವರಣವಿರಲಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.

ಕುಂಭ: ಉದ್ಯೋಗ ಕ್ಷೇತ್ರದಲ್ಲಿ ನೀವು ಹಿಂದೆ ಪಟ್ಟ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಸರಕಾರಿ ನೌಕರರಿಗೆ ಕಾರ್ಯದೊತ್ತಡ ಕಡಿಮೆಯಾಗಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗವಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಮೀನ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾದೀತು. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಹರಿ ಸ್ತೋತ್ರ ಮಕ್ಕಳಿಗೂ ಹೇಳಿಸಿ

ವಿದ್ಯೆಗೆ ಸಂಬಂಧಿಸಿದ ಸಮಸ್ಯೆಯಾಗುತ್ತಿದ್ದರೆ ಈ ಸರಸ್ವತಿ ಸ್ತೋತ್ರ ಓದಿ

ಮಂಗಳವಾರ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ಶಿವನ ಅನುಗ್ರಹಕ್ಕೆ ಚಂದ್ರಶೇಖರಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಈ ಕಿರು ಮಂತ್ರ ಸಾಕು

ಮುಂದಿನ ಸುದ್ದಿ
Show comments