Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 13 ಜುಲೈ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಾರ್ಯಕ್ಷೇತ್ರದಲ್ಲಿ ಸದವಕಾಶಗಳು ಬಂದಾಗ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ನಿಮ್ಮ ಜೊತೆಗಿದ್ದವರಿಂದಲೇ ನಿಮಗೆ ವಂಚನೆಯಾಗುವ ಸಂಭವವಿದೆ. ಎಚ್ಚರಿಕೆಯಿಂದಿರಿ. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡವಿರಲಿದೆ.

ವೃಷಭ: ಕಾರ್ಯಾರಂಭದಲ್ಲಿ ಇರುವ ಉತ್ಸಾಹ ಕ್ರಮೇಣ ಕಡಿಮೆಯಾದೀತು. ನಿರುದ್ಯೋಗಿಗಳು ಸ್ವ ಉದ್ಯೋಗದ ಬಗ್ಗೆ ಚಿಂತನೆ ನಡೆಸಲಿದ್ದೀರಿ. ದಾಯಾದಿ ಕಲಹಗಳಿಗೆ ಹಿರಿಯರಿಂದ ಪರಿಹಾರ ಸಿಗಲಿದೆ. ತಾಳ್ಮೆ, ಸಂಯಮ ಅಗತ್ಯ.

ಮಿಥುನ: ನೀವು ಬಹುವಾಗಿ ಪ್ರೀತಿಸುತ್ತಿರುವ ವ್ಯಕ್ತಿಯಿಂದ ದೂರವಾಗುವ ಅನಿವಾರ್ಯತೆ ಎದುರಾದೀತು. ಕೌಟಂಬಿಕವಾಗಿ ನಿರ್ಧಾರ ಕೈಗೊಳ್ಳುವಾಗ ಸಂಗಾತಿಯೊಂದಿಗೆ ಚರ್ಚಿಸುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ.

ಕರ್ಕಟಕ: ಬೇರೆಯವರಿಗಾಗಿ ನಿಮ್ಮ ಸಿದ್ಧಾಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದೀತು. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ.

ಸಿಂಹ: ವೈಯಕ್ತಿಕವಾಗಿ ನಿಮ್ಮ ಏಳಿಗೆ ಸಂತೋಷಕ್ಕೆ ಕಾರಣವಾಗಲಿದೆ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಸಿಗಲಿದೆ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ. ಶುಭ ಮಂಗಲ ಕಾರ್ಯಕ್ಕೆ ಸಿದ್ಧತೆ ನಡೆಸುವಿರಿ.

ಕನ್ಯಾ: ಪ್ರೀತಿ ಪಾತ್ರರ ಇಷ್ಟ ಕಷ್ಟಗಳಿಗೆ ಜೊತೆಯಾಗಲಿದ್ದೀರಿ. ಮಕ್ಕಳಿಂದ ಸಂತೋಷದ ಕ್ಷಣ ಕಳೆಯುವ ಯೋಗ. ಹಿರಿಯರ ದೇಹಾರೋಗ್ಯ ನಿಮಿತ್ತ ಆಸ್ಪತ್ರೆಗೆ ಅಲೆದಾಡಬೇಕಾದೀತು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ತುಲಾ: ನಿಮ್ಮ ಮನಸ್ಸಿಗನುಗುಣವಾಗಿ ನಿರ್ಧಾರಗಳನ್ನು ಕೈಗೊಳ್ಳಲಿದ್ದೀರಿ. ಕಳೆದು ಹೋದ ವಸ್ತು ಮರಳಿ ಕೈ ಸೇರಲಿದೆ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಡಲಿದ್ದೀರಿ.

ವೃಶ್ಚಿಕ: ನೀವು ಅಂದುಕೊಂಡ ಯೋಜನೆಗಳು ಸುಗಮವಾಗಿ ನೆರವೇರಿದ ಖುಷಿ ನಿಮ್ಮದಾಗಲಿದೆ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳು ಕಂಡುಬಂದರೂ ಹಣಕಾಸಿನ ಹರಿವಿಗೆ ತೊಂದರೆಯಿರದು. ಕಿರು ಸಂಚಾರ ಮಾಡಬೇಕಾಗುತ್ತದೆ.

ಧನು: ಮಹಿಳೆಯರಿಗೆ ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ಕಷ್ಟದ ಸಂದರ್ಭದಲ್ಲಿ ಇತರರ ಸಹಾಯ ಪಡೆಯಲು ಹಿಂಜರಿಯುವಿರಿ. ಸಂಗಾತಿಯ ಸಲಹೆಗಳನ್ನು ಪಾಲಿಸಿದಲ್ಲಿ ಉತ್ತಮ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ಕಷ್ಟದಲ್ಲಿರುವ ಮಿತ್ರರಿಗೆ ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾದೀತು. ವಾಹನ ಸಂಚಾರ ಮಾಡುವಾಗ ಎಚ್ಚರಿಕೆಯಿಂದಿರುವುದು ಅಗತ್ಯ. ಕೃಷಿಕರಿಗೆ ವ್ಯವಹಾರಕ್ಕೆ ಅಡೆತಡೆಗಳುಂಟಾಗಲಿದೆ.

ಕುಂಭ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಆದರೆ ಕೌಟುಂಬಿಕ ವಿಚಾರದಲ್ಲಿ ಸಂಗಾತಿಯ ಅಸಮಾಧಾನ ಎದುರಿಸಬೇಕಾಗಬಹುದು. ಹಣ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಉಂಟಾದೀತು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಪ್ತರ ನೆರವು ಪಡೆಯುವಿರಿ. ಶುಭ ಮಂಗಲ ಕಾರ್ಯ ನೆರವೇರಿಸಲು ಕೆಲವು ದಿನ ಕಾಯುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ