ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡಿದರೆ ಯಶಸ್ಸು ಸಂಪಾದಿಸಬಹುದು. ಹಣಕಾಸಿನ ಹರಿವಿಗೆ ತೊಂದರೆಯಾಗದು. ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಸ್ವ ಹಿತಾಸಕ್ತಿಯ ಬಗ್ಗೆ ಯೋಚಿಸಲಿದ್ದೀರಿ.
ವೃಷಭ: ವೃತ್ತಿರಂಗದಲ್ಲಿ ಉತ್ತಮ ಅವಕಾಶಗಳು ಬಂದರೂ ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವಲಿದ್ದೀರಿ. ಪ್ರೀತಿ ಪಾತ್ರರ ಮನಸ್ಸಿಗೆ ನೋವುಂಟು ಮಾಡುವ ಮಾತನಾಡಬೇಡಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವುದು.
ಮಿಥುನ: ವಿದ್ಯಾರ್ಥಿಗಳ ಮುಂದಿನ ಹಾದಿ ಸುಗಮವಾಗಲಿದೆ. ವ್ಯಾಪಾರೀ ವರ್ಗದವರಿಗೆ ಆರ್ಥಿಕವಾಗಿ ಕೊಂಚ ಚೇತರಿಕೆ ಕಂಡುಬರುವುದು. ಲೆಕ್ಕ ಪತ್ರಗಳ ಬಗ್ಗೆ ನಿಗಾ ಇರಲಿ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ.
ಕರ್ಕಟಕ: ಕೈಲಾಗದಿದ್ದರೂ ಸತತ ಪ್ರಯತ್ನ ಪಡುವ ಹಠವಾದಿ ಮನೋಭಾವ ಕಂಡುಬಂದೀತು. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಅನಿರೀಕ್ಷಿತ ಬಂಧು ಮಿತ್ರರ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ.
ಸಿಂಹ: ನಿಮ್ಮ ಪ್ರೀತಿ ಪಾತ್ರ ವಸ್ತುಗಳನ್ನು ಕಳೆದುಕೊಂಡ ನೋವು ಕಾಡೀತು. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸಬೇಕು.
ಕನ್ಯಾ: ಮನೆಯ ಇತರ ಸದಸ್ಯರಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗಿ ಬರಬಹುದು. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಮಕ್ಕಳ ಸಂತೋಷದಲ್ಲಿ ನಿಮ್ಮ ಸಂತೋಷ ಕಾಣಲಿದ್ದೀರಿ. ಹಿರಿಯರ ಸಲಹೆಗಳನ್ನು ಪಾಲಿಸಿರಿ.
ತುಲಾ: ಅನಗತ್ಯ ಚಿಂತೆಗಳಿಂದ ಮನಸ್ಸು ಗೊಂದಲದ ಗೂಡಾದೀತು. ನಿರ್ಧಾರ ಕೈಗೊಳ್ಳುವಾಗ ಎಚ್ಚರಿಕೆಯಿಂದಿದ್ದರೆ ಉತ್ತಮ. ಬೇರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.
ವೃಶ್ಚಿಕ: ಕಷ್ಟದಲ್ಲಿರುವ ಮಿತ್ರರ ಸಹಾಯಕ್ಕೆ ಆಗಿಬರಲಿದ್ದೀರಿ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳಾದೀತು. ಕೃಷಿಕರು ಹಣ ಸಂಪಾದನೆಯ ಮಾರ್ಗ ಕಂಡುಕೊಳ್ಳಲಿದ್ದಾರೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆ ಕಂಡುಬಂದೀತು.
ಧನು: ಮನಸ್ಸಿನ ದುಃಖವನ್ನು ಆತ್ಮೀಯರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ನಿಮ್ಮ ಏಳಿಗೆಗಾಗಿ ಪರಿಶ್ರಮಪಡಬೇಕಾಗುತ್ತದೆ. ಸ್ವಯಂ ಉದ್ಯೋಗಿಗಳಿಗೆ ಆರ್ಥಿಕ ಲಾಭವಾಗಲಿದೆ. ಮಾತಿನ ಮೇಲೆ ನಿಗಾ ಇರಲಿ.
ಮಕರ: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಗೆ ಅವಕಾಶಗಳು ತೋರಿಬರಲಿವೆ. ಪ್ರೇಮಿಗಳಿಗೆ ಶೀಘ್ರವೇ ಕಂಕಣ ಬಲ ಕೂಡಿಬರುವುದು. ಕೋರ್ಟು ಕಚೇರಿ ವ್ಯವಹಾರಗಳಿಗಾಗಿ ಓಡಾಟ ನಡೆಸಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಕುಂಭ: ಕುಟುಂಬದ ಹಿತಕ್ಕಾಗಿ ವೈಯಕ್ತಿಕ ಹಿತಾಸಕ್ತಿ ಬದಿಗಿಡಬೇಕಾಗುತ್ತದೆ. ಸಂಗಾತಿಯ ಕೆಲವೊಂದು ಸಲಹೆಗಳು ಉಪಯುಕ್ತವೆನಿಸಲಿದೆ. ಹಿರಿಯರಿಗೆ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದೀತು. ಎಚ್ಚರಿಕೆಯಿರಲಿ.
ಮೀನ: ಮಹಿಳೆಯರಿಗೆ ಚಿತ್ತ ಚಾಂಚಲ್ಯ ಕಾಡಲಿದ್ದು, ನಿರ್ಧಾರ ತೆಗೆದುಕೊಳ್ಳುವಾಗ ಎಡವಲಿದ್ದೀರಿ. ವ್ಯಾವಹಾರಿಕವಾಗಿ ನಿಮ್ಮ ಮುನ್ನಡೆಯನ್ನು ಯಾರಿಂದಲೂ ತಡೆಯಲಾಗದು. ಸಾಮಾಜಿಕವಾಗಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.