ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಸಂಚಾರಕ್ಕೆ ಅಡ್ಡಿ ಆತಂಕಗಳು ಎದುರಾಗಲಿದ್ದು, ಆರಂಭದಲ್ಲೇ ವಿಘ್ನ ಭಯ ತೋರಿಬರಲಿದೆ. ಆರ್ಥಿಕವಾಗಿ ಹಣಕಾಸಿನ ಅಡಚಣೆಗಳು ಕೊಂಚ ಮಟ್ಟಿಗೆ ದೂರವಾಗಲಿದೆ. ಹಿರಿಯರ ಸಲಹೆಗಳನ್ನು ಪಾಲಿಸಿದರೆ ಉತ್ತಮ.
ವೃಷಭ: ವೈಯಕ್ತಿಕ ಜೀವನದಲ್ಲಿ ಉನ್ನತಿ ಕಾಣಲಿದ್ದೀರಿ. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವ ಯೋಗ ನಿಮ್ಮದಾಗಲಿದೆ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣವಿರಲಿ. ಕಿರು ಸಂಚಾರ ಮಾಡಬೇಕಾಗುತ್ತದೆ.
ಮಿಥುನ: ಸಂಗಾತಿಗಾಗಿ ಕೆಲವೊಂದು ಹೊಂದಾಣಿಕೆ ಮಾಡಬೇಕಾಗಿಬರಬಹುದು. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗವಿದೆ. ಇಷ್ಟ ಭೋಜನ ಮಾಡಲಿದ್ದೀರಿ. ಅನಿರೀಕ್ಷಿತವಾಗಿ ಧನಾಗಮನವಾಗಲಿದ್ದು, ಕಷ್ಟಗಳು ನಿವಾರಣೆಯಾಗುವುದು.
ಕರ್ಕಟಕ: ಅವಕಾಶ ಸಿಕ್ಕಾಗ ಅದನ್ನು ಸರಿಯಾಗಿ ಬಳಸಿಕೊಳ್ಳಲು ಕಲಿಯಬೇಕು. ವೃತ್ತಿರಂಗದಲ್ಲಿ ನಿಮ್ಮ ಮೇಲಧಿಕಾರಿಗಳೊಂದಿಗೆ ಸಂಘರ್ಷ ಬೇಡ. ಕೃಷಿಕರಿಗೆ ವ್ಯವಹಾರಕ್ಕೆ ಹೊಸ ದಾರಿ ಸಿಗಲಿದೆ.
ಸಿಂಹ: ನೀವು ಬಹುವಾಗಿ ಇಷ್ಟಪಡುತ್ತಿದ್ದ ವಸ್ತು ಕೈ ಜಾರಿ ಹೋಗಲಿದೆ. ಸರಕಾರಿ ಕೆಲಸದಲ್ಲಿರುವವರಿಗೆ ಉದ್ಯೋಗದ ಒತ್ತಡ ಕಡಿಮೆಯಾದೀತು. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ಮನೆಯಲ್ಲಿ ಬಂಧು ಮಿತ್ರರ ಆಗಮನದಿಂದ ಸಂಭ್ರಮವಿರಲಿದೆ.
ಕನ್ಯಾ: ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ನಿಮ್ಮ ಕೈಲಾದ ಸಹಾಯ ಮಾಡಿ ನೆಮ್ಮದಿ ಪಡೆದುಕೊಳ್ಳಲಿದ್ದೀರಿ. ಹಿರಿಯರಿಗೆ ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ ಕಾಡೀತು. ತಾಳ್ಮೆಯಿರಲಿ.
ತುಲಾ: ಅನ್ಯರ ಮಾತಿಗೆ ಮರುಳಾಗಿ ಬೇಡದ ವಿಚಾರಗಳನ್ನು ಮಾಡಲು ಹೋಗಬೇಡಿ. ಕೌಟುಂಬಿಕವಾಗಿ ಸಾಮರಸ್ಯ ಕಾಪಾಡಲು ಪ್ರಯತ್ನಿಸಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ.
ವೃಶ್ಚಿಕ: ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದರಿಂದ ಸಂಭಾವ್ಯ ಅಪಾಯಗಳಿಂದ ಪಾರಾಗಲಿದ್ದೀರಿ. ವಾಹನ ಖರೀದಿ ಮಾಡುವ ನಿಮ್ಮ ಕನಸು ಸದ್ಯದಲ್ಲೇ ನನಸಾಗಲಿದೆ. ವೈಯಕ್ತಿಕ ಲಾಭದ ಬಗ್ಗೆ ಚಿಂತನೆ ಮಾಡಲಿದ್ದೀರಿ.
ಧನು: ಸಾಂಸಾರಿಕವಾಗಿ ನಿಮ್ಮ ನಾಲಿಗೆಯೇ ಇಂದು ನಿಮಗೆ ಶತ್ರುವಾದೀತು. ಬಾಯ್ತಪ್ಪಿ ಆಡುವ ಮಾತಿನಿಂದ ಬೇರೆಯವರ ಮನಸ್ಸಿಗೆ ನೋವುಂಟು ಮಾಡಲಿದ್ದೀರಿ. ಹಿರಿಯರಿಗೆ ದಾನ ದರ್ಮಾದಿಗಳಿಂದ ಮನಸ್ಸಿಗೆ ಸಂತೋಷ ಸಿಗಲಿದೆ.
ಮಕರ: ನಿಮ್ಮ ಉದಾರತೆಯ ಲಾಭ ಪಡೆದುಕೊಳ್ಳುವವರಿರುತ್ತಾರೆ. ಎಚ್ಚರಿಕೆಯಿಂದಿರುವು ಅಗತ್ಯ. ವ್ಯಾಪಾರ, ವ್ಯವಹಾರಗಳಲ್ಲಿ ಏಳಿಗೆ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.
ಕುಂಭ: ಇಷ್ಟವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾದೀತು. ಮಕ್ಕಳ ಬಹುದಿನಗಳ ಬೇಡಿಕೆ ಪೂರ್ತಿ ಮಾಡಲಿದ್ದೀರಿ. ವ್ಯಾವಹಾರಿಕವಾಗಿ ಹಿತಶತ್ರುಗಳ ಕಾಟ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಮುನ್ನಡೆಯ ಯೋಗವಿದೆ.
ಮೀನ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯ ಯೋಗ ಕಂಡುಬರಲಿದೆ. ಮನೆಯಲ್ಲಿ ಕಳ್ಳತನದ ಭೀತಿಯಿದ್ದು, ಎಚ್ಚರಿಕೆಯಿಂದಿರಿ. ಲಾಭದ ವ್ಯವಹಾರಕ್ಕೆ ಕೈ ಹಾಕಲು ಹೋಗಿ ವಂಚನೆಗೊಳಗಾಗದಿರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.