Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 2 ಜುಲೈ 2021 (08:40 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 

ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಈ ಹಿಂದೆ ಕೊಟ್ಟ ಭರವಸೆಗಳು ಪೂರ್ತಿಯಾಗದೇ ನಿರಾಸೆಯಾದೀತು. ಆರ್ಥಿಕವಾಗಿ ಧನಗಳಿಕೆಗೆ ಅನ್ಯ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಪೂರಕ ಅವಕಾಶಗಳು ದೊರೆಯಲಿವೆ.

ವೃಷಭ: ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವ ನಿಮ್ಮ ಯೋಗ ನನಸಾಗಲಿದೆ. ಮನೆಗೆ ಬಂಧು ಮಿತ್ರರ ಆಗಮನವಾಗಲಿದ್ದು, ಸಂತೋಷ ಹೆಚ್ಚಲಿದೆ. ದೇಹಾರೋಗ್ಯದ ಬಗ್ಗೆ ಅನಾದರಣೆ ಬೇಡ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಅರ್ಧಕ್ಕೇ ನಿಂತ ಕೆಲಸಗಳನ್ನು ಪೂರ್ತಿ ಮಾಡುವುದರತ್ತ ಗಮನ ಹರಿಸಿ. ಯೋಗ್ಯ ವಯಸ್ಕರಿಗೆ ಶೀಘ್ರ ಸೂಕ್ತ ವೈವಾಹಿಕ ಸಂಬಂಧಗಳು ಒದಗಿಬರಲಿದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.

ಕರ್ಕಟಕ: ನಿಮ್ಮ ಜೀವನದಲ್ಲಿ ಹಿತ ಶತ್ರುಗಳ ಕಾಟ ಅತಿಯೆನಿಸಬಹುದು. ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡಿಬರಲಿದೆ. ಹಿರಿಯರೊಂದಿಗೆ ಸಮಾಲೋಚನೆ ನಡೆಸಿ. ಕಾರ್ಯನಿಮಿತ್ತ ಓಡಾಟ ನಡೆಸಲಿದ್ದೀರಿ.

ಸಿಂಹ: ವೃತ್ತಿಜೀವನದಲ್ಲಿ ಅಭಿವೃದ್ಧಿ ಯೋಗ ಕಂಡುಬರಲಿದೆ. ಮೆಚ್ಚಿನ ವ್ಯಕ್ತಿಗಳನ್ನು ಭೇಟಿಯಾದ ಸಂತೋಷ ಸಿಗುವುದು. ಕೌಟುಂಬಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ಮಕ್ಕಳಿಂದ ಸಂತೋಷ ಸಿಗಲಿದೆ.

ಕನ್ಯಾ: ದೇಹಾರೋಗ್ಯದಲ್ಲಿ ಇದುವರೆಗೆ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಅನಿರೀಕ್ಷಿತ ಖರ್ಚು ವೆಚ್ಚಗಳು ಕಂಡುಬರಲಿದೆ. ಪತ್ನಿಯ ವಿಚಾರ ಧಾರೆಗಳಿಗೆ ಮನ್ನಣೆ ಕೊಡಬೇಕಾಗುತ್ತದೆ. ಹಿರಿಯರೊಂದಿಗೆ ವಾಗ್ವಾದ ಬೇಡ.

ತುಲಾ: ನೀವು ಅಂದುಕೊಂಡಂತೇ ಕೆಲಸಗಳು ಸಾಗಲಿದ್ದು, ಮನಸ್ಸಿಗೆ ನೆಮ್ಮದಿಯಾಗಲಿದೆ. ವಾಹನ ಸಂಚಾರ ಮಾಡುವಾಗ ಅಪಘಾತದ ಭಯ ಕಾಡೀತು. ಧಾರ್ಮಿಕ ಕಾರ್ಯಗಳಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಅನಗತ್ಯ ಚಿಂತೆಗೆ ಕಡಿವಾಣವಿರಲಿ.

ವೃಶ್ಚಿಕ: ಪರ ದೂಷಣೆ, ಚಾಡಿ ಮಾತುಗಳು ಕೇಳಿಬಂದೀತು. ನಿಮ್ಮ ಬಗ್ಗೆ ಇತರರು ಏನಂದುಕೊಳ್ಳುವರೋ ಎಂದು ಅತಿಯಾಗಿ ಚಿಂತಿಸದಿರಿ. ಕ್ರಿಯಾತ್ಮಕವಾಗಿ ಯೋಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ.

ಧನು: ನಿಮ್ಮ ಪ್ರೀತಿ ಪಾತ್ರ ವಸ್ತುವನ್ನು ಕಳೆದುಕೊಂಡ ದುಃಖ ನಿಮ್ಮದಾಗಲಿದೆ. ಸಂಗಾತಿಯೊಂದಿಗೆ ಅನಗತ್ಯ ಸಂಘರ್ಷಕ್ಕಿಳಿಯದಿರಿ. ಮಕ್ಕಳ ಅಭಿಲಾಷೆ ಈಡೇರಿಸಲು ಮುಂದಾಗಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ನಿಮ್ಮ ಬಹುವಾಗಿ ಕಾಡುತ್ತಿದ್ದ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ವೈಯಕ್ತಿಕ ನಿಂದನೆಗೆ ಅವಕಾಶ ಕೊಡಬೇಡಿ. ಮಹಿಳೆಯರಿಗೆ ಪ್ರಿಯ ಜನರನ್ನು ಭೇಟಿಯಾಗುವ ಯೋಗ. ಚಿಂತೆ ಬೇಡ.

ಕುಂಭ: ಸಾಂಸಾರಿಕವಾಗಿ ಹೊಂದಾಣಿಕೆಯಿಂದ ನಡೆದುಕೊಳ್ಳದಿದ್ದರೆ ಸಂಘರ್ಷಗಳಾದೀತು. ಸಾಮಾಜಿಕವಾಗಿ ನಿಮ್ಮ ವಿಚಾರಗಳಿಗೆ ಮನ್ನಣೆ ಸಿಗಲಿದೆ. ಸಂತಾನಾಪೇಕ್ಷಿತ ದಂಪತಿಗಳಿಗೆ ಶುಭ ಫಲಗಳು ಸಿಗಲಿದೆ. ತಾಳ್ಮೆಯಿರಲಿ.

ಮೀನ: ದೈನಂದಿನ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದರಿಂದ ಚಿಂತೆ ಮರೆಯಲಿದ್ದೀರಿ. ವ್ಯಾಪಾರಿಗಳಿಗೆ ಅಭಿವೃದ್ಧಿಗೆ ಅನುಕೂಲಕರ ವಾತಾವರಣ ಕಂಡುಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Mruthyunjaya Mantra: ರೋಗ ಭಯ, ಮೃತ್ಯು ಭಯವಿದ್ದರೆ ಮೃತ್ಯುಂಜಯ ಅಷ್ಟೋತ್ತರ ತಪ್ಪದೇ ಓದಿ

Anjaneya Mantra: ಆಂಜನೇಯ ಅಷ್ಟೋತ್ತರ ಮಂತ್ರವನ್ನು ತಪ್ಪದೇ ಓದಿ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments