Daily Horoscope

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 28 ಜೂನ್ 2021 (07:56 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮಾತಿನಿಂದ ಇನ್ನೊಬ್ಬರಿಗೆ ನೋವಾಗುವಂತೆ ನಡೆದುಕೊಂಡರೆ ಅದಕ್ಕೆ ತಕ್ಕ ಪ್ರಾಯಶ್ಚಿತ ಅನುಭವಿಸಲಿದ್ದೀರಿ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾದೀತು. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಬೇಡದ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡು ನಿಮ್ಮ  ನೆಮ್ಮದಿಯನ್ನು ಹಾಳುಮಾಡಿಕೊಳ್ಳಬೇಡಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗುವುದು. ವ್ಯಾಪಾರಿಗಳಿಗೆ ಮುನ್ನಡೆ ಸಿಗಲಿದೆ.

ಮಿಥುನ: ವೃತ್ತಿರಂಗದಲ್ಲಿ ನಿಮ್ಮ ಮುನ್ನಡೆಗೆ ಅನುಕೂಲಕರ ವಾತಾವರಣ ಕಂಡುಬರಲಿದೆ. ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಮೈಯೆಲ್ಲಾ ಕಣ್ಣಾಗಿರಬೇಕು. ಸರಕಾರಿ ಕೆಲಸಗಳಿಗೆ ಓಡಾಟ ನಡೆಸಬೇಕಾಗುತ್ತದೆ.

ಕರ್ಕಟಕ: ಪ್ರೀತಿ ಪಾತ್ರರ ಮನದಿಂಗಿತ ಅರಿತು ನಡೆದುಕೊಳ್ಳಲಿದ್ದೀರಿ. ಕೌಟುಂಬಿಕವಾಗಿ ಸಂತೋಷದಾಯಕ ದಿನವಾಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾತ್ಮಕ ಯೋಜನೆಗಳಿಂದ ಇತರರ ಪ್ರಶಂಸೆಗೊಳಗಾಗಲಿದ್ದೀರಿ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆಯ ಯೋಗ. ಕಿರು ಸಂಚಾರ ಮಾಡುವಿರಿ.

ಕನ್ಯಾ: ಕಾರ್ಯನಿಮಿತ್ತ ದೇಹಾರೋಗ್ಯ ಮಾಡುವುದರಿಂದ ದೇಹಾಯಾಸವಾಗಲಿದೆ. ಸನ್ಮಿತ್ರರ ಉತ್ತಮ ಸಲಹೆಗಳು ಸಕಾಲದಲ್ಲಿ ನೆರವಿಗೆ ಬರಲಿದೆ. ಮನಸ್ಸಿನ ದುಃಖ ಮರೆಯಲು ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ.

ತುಲಾ: ಇಷ್ಟವಸ್ತುಗಳ ಖರೀದಿಗಾಗಿ ಖರ್ಚುವೆಚ್ಚ ಮಾಡಲಿದ್ದೀರಿ. ಮನೆಗೆ ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನವಾಗಲಿದ್ದು, ಸಂತೋಷವಿರಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ ಕೂಡಿಬರುವುದು.

ವೃಶ್ಚಿಕ: ಆತ್ಮೀಯರ ಕಷ್ಟಗಳಿಗೆ ಸ್ಪಂದಿಸಲಿದ್ದೀರಿ. ಧನ ಗಳಿಕೆಗೆ ನಾನಾ ಮಾರ್ಗ ಕಂಡುಕೊಳ್ಳಲಿದ್ದೀರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ. ವ್ಯಾಪಾರಿಗಳಿಗೆ ಲಾಭವೂ ಅಲ್ಲದ, ನಷ್ಟವೂ ಇಲ್ಲದ ದಿನವಾಗಲಿದೆ.

ಧನು: ವೃತ್ತಿರಂಗದಲ್ಲಿ ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲು ಇದು ಸಕಾಲ. ಆರ್ಥಿಕವಾಗಿ ಹಣಕಾಸಿನ ಅಡಚಣೆಯಿರದು. ಅನಗತ್ಯ ಯೋಚನೆಗಳಿಗೆ ಕಡಿವಾಣವಿರಲಿ.

ಮಕರ: ಕಷ್ಟದ ಸಮಯದಲ್ಲಿ ಅನಿರೀಕ್ಷಿತವಾಗಿ ಸಿಗುವ ಅಪರಿಚಿತ ವ್ಯಕ್ತಿಯಿಂದ ಸಹಾಯ ಸಿಗಲಿದೆ. ಪಾಲು ಬಂಡವಾಳ ಹೂಡಿಕೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಕೆಲವು ದಿನ ಕಾಯುವುದು ಒಳ್ಳೆಯದು. ದೇವತಾ ಪ್ರಾರ್ಥನೆ ಮಾಡಿ.

ಕುಂಭ: ಆಪ್ತರು, ಆತ್ಮೀಯರನ್ನು ಭೇಟಿಯಾದ ಸಂತೋಷ ನಿಮಗೆ ಸಿಗಲಿದೆ. ಆದರೆ ಸಂಗಾತಿಯ ಕಿರಿ ಕಿರಿ ಮನಸ್ಸಿಗೆ ಬೇಸರವುಂಟು ಮಾಡೀತು. ದೇಹಾರೋಗ್ಯದ ಬಗ್ಗೆ ಗಮನ ಕೊಡಬೇಕು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ಮೀನ: ಪ್ರೀತಿ ಪಾತ್ರರೊಂದಿಗೆ ಇಷ್ಟ ಭೋಜನ ಮಾಡುವ ಕನಸು ನನಸಾಗಲಿದೆ. ಇನ್ನೊಬ್ಬರ ಬಗೆಗಿನ ಅತಿಯಾದ ನಿರೀಕ್ಷೆಯೂ ನಿರಾಸೆಗೆ ಕಾರಣವಾದೀತು. ಯೋಗ್ಯ ವಯಸ್ಕರು ಸೂಕ್ತ ಸಂಬಂಧಕ್ಕಾಗಿ ಕೆಲವು ದಿನ ಕಾಯುವುದು ಒಳಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments