ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ನಿಮ್ಮದಲ್ಲದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ. ಆದರೆ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದೊಂದು ದಿನ ಖಂಡಿತಾ ಫಲ ಇದ್ದೇ ಇರುತ್ತದೆ. ಆಪ್ತರೊಂದಿಗೆ ನಿಮ್ಮ ಮನಸ್ಸಿನ ಭಾವನೆ ಹಂಚಿಕೊಳ್ಳಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ವೃಷಭ: ಉದ್ಯೋಗ ಸಂಬಂಧವಾಗಿ ವಿಚಾರಗಳಿಂದ ಮನಸ್ಸು ಗೊಂದಲಕ್ಕೊಳಗಾಗಲಿದೆ. ಹಿರಿಯರ ಜೊತೆ ಸಮಾಲೋಚನೆ ನಡೆಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ.
ಮಿಥುನ: ವ್ಯಾಪಾರ, ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ಸಾಗಲಿವೆ. ಹಿಂದೆ ಹೂಡಿದ ಬಂಡವಾಳಕ್ಕೆ ತಕ್ಕ ಫಲ ಸಿಗುವುದು. ಕಳೆದೇ ಹೋಯಿತು ಎಂದುಕೊಂಡಿದ್ದ ವಸ್ತುಗಳು ಅನಿರೀಕ್ಷಿತವಾಗಿ ಸಿಗಲಿದೆ. ಕಿರು ಸಂಚಾರ ಮಾಡುವಿರಿ.
ಕರ್ಕಟಕ: ಕಷ್ಟದ ಸಮಯದಲ್ಲಿ ಸಹಾಯ ಮಾಡಿದವರನ್ನು ನೆನೆಸಿಕೊಳ್ಳಲಿದ್ದೀರಿ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆಗಳ ಮೂಲಕ ಸಂತೋಷ ನೀಡಲಿದ್ದೀರಿ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಗಮನ ಬೇಕು. ತಾಳ್ಮೆ, ಸಂಯಮವಿರಲಿ.
ಸಿಂಹ: ವೃತ್ತಿರಂಗದಲ್ಲಿ ನಿಮಗೆ ಶತ್ರುಬಾಧೆಗಳಿಂದ ಮುಕ್ತಿ ಸಿಗಲಿದೆ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗ ಕೂಡಿಬರುವುದು. ಮನೆ ರಿಪೇರಿ, ವಾಹನ ರಿಪೇರಿ ಕೆಲಸಗಳಿಗಾಗಿ ಖರ್ಚು ವೆಚ್ಚಗಳಾಗಲಿವೆ. ದೇವತಾ ಪ್ರಾರ್ಥನೆ ಮಾಡಿ.
ಕನ್ಯಾ: ಅನಿವಾರ್ಯ ಕಾರಣಗಳಿಗೆ ದೂರ ಸಂಚಾರ ಮಾಡಲಿದ್ದೀರಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಸಂಗಾತಿಯ ಮನದಾಸೆ ಪೂರೈಸಲಿದ್ದೀರಿ. ಆರ್ಥಿಕವಾಗಿ ಹೊಸ ಯೋಜನೆಗಳನ್ನು ಕೈಗೊಳ್ಳಲು ಇದು ಸಕಾಲ.
ತುಲಾ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗದೇ ನಿರಾಸೆಯಾದೀತು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ನಿಮ್ಮ ಮಾತಿನ ಮೋಡಿಯಿಂದ ಇತರರನ್ನು ಸೆಳೆಯಲಿದ್ದೀರಿ.
ವೃಶ್ಚಿಕ: ಸಂಗಾತಿಯ ಬಹುದಿನಗಳ ಕನಸು ನನಸು ಮಾಡಲಿದ್ದೀರಿ. ಮಹಿಳೆಯರಿಗೆ ಚಿನ್ನಾಭರಣಗಳ ಖರೀದಿ ಯೋಗವಿದೆ. ಕೌಟುಂಬಿಕವಾಗಿ ಸುಂದರ ಕ್ಷಣ ಕಳೆಯುವ ಯೋಗ ನಿಮ್ಮದಾಗುವುದು. ದೂರ ಸಂಚಾರ ಮಾಡಬೇಕಾಗುತ್ತದೆ.
ಧನು: ನಿಮ್ಮ ಕೆಲವೊಂದು ನಿಲುವುಗಳಿಂದ ಸಂಸಾರದಲ್ಲಿ ಏರುಪೇರಾದೀತು. ವ್ಯಾವಹಾರಿಕವಾಗಿ ಹೊಸ ಯೋಜನೆಗಳು ಕೈಗೂಡಲಿವೆ. ಕೌಟುಂಬಿಕವಾಗಿ ಹೊಸ ಅತಿಥಿಗಳ ಆಗಮನಕ್ಕೆ ಸಿದ್ಧರಾಗಿ. ವಿದ್ಯಾರ್ಥಿಗಳಿಗೆ ಮುನ್ನಡೆಯ ಯೋಗ.
ಮಕರ: ಉದ್ಯೋಗ ಕ್ಷೇತ್ರದಲ್ಲಿ ಹಿಂದಿನ ಅನುಭವಗಳು ಉಪಯೋಗಕ್ಕೆ ಬರಲಿವೆ. ಮಕ್ಕಳ ಬೇಡಿಕೆ ಪೂರೈಸಲು ಖರ್ಚು ವೆಚ್ಚಗಳಾದೀತು. ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.
ಕುಂಭ: ವೃತ್ತಿರಂಗದಲ್ಲಿ ಎಲ್ಲವೂ ನೀವಂದುಕೊಂಡಂತೆಯೇ ಸಾಗಲಿದೆ. ಸದ್ಯದಲ್ಲೇ ನಿಮ್ಮ ಬಹುದಿನಗಳ ಕನಸೊಂದು ನನಸಾಗಲಿದೆ. ಆಪ್ತೇಷ್ಟರ ಭೇಟಿ, ಭೋಜನ ನಿಮ್ಮ ಖುಷಿ ಹೆಚ್ಚಿಸಲಿದೆ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.
ಮೀನ: ಮನೆಯ ಸದಸ್ಯರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಬಂದೀತು. ಸಾಲಗಾರರ ಕಾಟದಿಂದ ಶೀಘ್ರ ಮುಕ್ತಿ ಸಿಗಲಿದೆ. ವ್ಯಾಪಾರಿಗಳಿಗೆ ಅನುಕೂಲಕರ ವಾತಾವರಣ ಕಂಡುಬರಲಿದೆ.