ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 13 ಮೇ 2021 (08:54 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಕೆಲವೊಂದು ವರ್ತನೆಗಳಿಂದಾಗಿ ಇತರರಿಗೆ ತೊಂದರೆಯಾದೀತು. ಮಾತಿನ ಮೇಲೆ ನಿಗಾ ಇರಲಿ. ಸಾಂಸಾರಿಕವಾಗಿ ಸಂಯಮ ಅಗತ್ಯ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ವೃತ್ತಿರಂಗದಲ್ಲಿ ನಿಮ್ಮ ಕಾಲೆಳೆಯುವವರ ಬಗ್ಗೆ ಎಚ್ಚರಿಕೆಯಿಂದಿರಿ. ಕೃಷಿಕರಿಗೆ ವ್ಯವಹಾರದಲ್ಲಿ ಲಾಭವಿಲ್ಲದಿದ್ದರೂ ನಷ್ಟವಾಗದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ಕಿರು ಓಡಾಟ ನಡೆಸಲಿದ್ದೀರಿ.

ಮಿಥುನ: ಮನೆಯಲ್ಲಿ ಕಳ್ಳತನದ ಭೀತಿಯಿದ್ದು, ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಕಾರ್ಯಕ್ಷೇತ್ರದಲ್ಲಿ ಇಕ್ಕಟ್ಟಿನ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಕರ್ಕಟಕ: ನೀವು ಬಯಸದೇ ಇದ್ದರೂ ಕೆಲವೊಂದು ನಿಮ್ಮ ಬಳಿಗೆ ತಾನಾಗಿಯೇ ಬರಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಆರ್ಥಿಕವಾಗಿ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ.

ಸಿಂಹ: ಸೂಕ್ತ ಸಮಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದರಿಂದ ಸಂಭಾವ್ಯ ಅಪಾಯಗಳಿಂದ ಪಾರಾಗಲಿದ್ದೀರಿ. ವ್ಯಾವಹಾರಿಕವಾಗಿ ಚೇತರಿಕೆಗೆ ಹೊಸ ದಾರಿಗಳು ಗೋಚರವಾಗಲಿದೆ. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಕನ್ಯಾ: ಅನಿರೀಕ್ಷಿತವಾಗಿ ಭೇಟಿಯಾಗುವ ಕೆಲವೊಂದು ವ್ಯಕ್ತಿಗಳಿಂದ ನಿಮ್ಮ ವೃತ್ತಿ ಜೀವನಕ್ಕೆ ಹೊಸ ತಿರುವು ಸಿಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ವಿದ್ಯಾರ್ಥಿಗಳು ಪರಿಶ್ರಮಕ್ಕೆ ತಕ್ಕ ಫಲ ಪಡೆಯಲಿದ್ದಾರೆ. ಚಿಂತೆ ಬೇಡ.

ತುಲಾ: ನಿಮ್ಮಲ್ಲಿರುವ ಹುಳುಕುಗಳನ್ನು ಸರಿಪಡಿಸಿಕೊಳ್ಳದೇ ಇದ್ದರೆ ಆಪ್ತರ ಅಸಮಾಧಾನಕ್ಕೆ ಕಾರಣವಾಗುವಿರಿ. ಆರ್ಥಿಕವಾಗಿ ಧನಗಳಿಕೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ಸರಕಾರಿ ನೌಕರರಿಗೆ ಕೊಂಚ ವಿರಾಮ ಸಿಗಲಿದೆ.

ವೃಶ್ಚಿಕ: ನಿಮ್ಮ ಬಗ್ಗೆ ಅನಗತ್ಯ ಸುದ್ದಿ ಪ್ರಚುರಪಡಿಸುವವರ ಬಗ್ಗೆ ಎಚ್ಚರಿಕೆಯಿಂದಿರುವುದು ಮುಖ್ಯ. ತಾಳ್ಮೆಯೇ ನಿಮ್ಮ ಅಸ್ತ್ರವಾಗಲಿದೆ. ಹಿರಿಯರ ಸಲಹೆಗಳನ್ನು ಪಾಲಿಸಿದಲ್ಲಿ ಉತ್ತಮ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ.

ಧನು: ನಿಮ್ಮ ವ್ಯವಹಾರಗಳಿಗೆ ಅನುಕೂಲಕರವಾದ ವಾತಾವರಣ ಕಂಡುಬರಲಿದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ಕಾರ್ಯಸಾಧನೆಗೆ ಅಡೆತಡೆಗಳು ಕಂಡುಬಂದೀತು.

ಮಕರ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಎಣಿಕೆಯಂತೇ ಎಲ್ಲವೂ ಸಾಗಲಿದೆ. ನಿಮ್ಮ ಕ್ರಿಯಾತ್ಮಕ ಯೋಚನೆಗಳಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು. ಮಕ್ಕಳ ಪ್ರಗತಿಗೆ ಕೆಲವೊಂದು ನಿರ್ಧಾರ ತೆಗೆದುಕೊಳ್ಳಲಿದ್ದೀರಿ.

ಕುಂಭ: ಪರಸ್ಥಳಕ್ಕೆ ಭೇಟಿಯಾಗುವ ಯೋಗವಿದ್ದರೂ ಅಂತಿಮ ಕ್ಷಣದಲ್ಲಿ ದೇಹಾರೋಗ್ಯ ಸಮಸ್ಯೆಯಾಗಲಿದೆ. ಭವಿಷ್ಯದ ದೃಷ್ಟಿಯಿಂದ ಆರ್ಥಿಕ ಯೋಜನೆ ರೂಪಿಸಬೇಕಾಗುತ್ತದೆ. ಸ್ವಯಂ ವ್ಯಾಪಾರಿಗಳಿಗೆ ನಷ್ಟದ ಭೀತಿ ಎದುರಾಗಲಿದೆ.

ಮೀನ: ಕೌಟುಂಬಿಕವಾಗಿ ಬಂಧು ಮಿತ್ರರ ಸಮಾಗಮದಿಂದ ಮನಸ್ಸಿಗೆ ಸಂತೋಷವಾಗಲಿದೆ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆ ನೀಡಲಿದ್ದೀರಿ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಗಮನವಿರಲಿ. ದಿನದಂತ್ಯಕ್ಕೆ ನೆಮ್ಮದಿಯಾಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ನಿವಾರಣೆಗೆ ದಶರಥ ಕೃತ ಶನಿ ಮಂತ್ರ ಕನ್ನಡದಲ್ಲಿ

ಅಭಿವೃದ್ಧಿಗಾಗಿ ಲಕ್ಷ್ಮೀ ದೇವಿಯ ಈ ಮಂತ್ರ ಪಠಿಸಿ

ಶ್ರೀ ಹರಿ ಸ್ತೋತ್ರ ಮಕ್ಕಳಿಗೂ ಹೇಳಿಸಿ

ವಿದ್ಯೆಗೆ ಸಂಬಂಧಿಸಿದ ಸಮಸ್ಯೆಯಾಗುತ್ತಿದ್ದರೆ ಈ ಸರಸ್ವತಿ ಸ್ತೋತ್ರ ಓದಿ

ಮಂಗಳವಾರ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments