Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 4 ಮೇ 2021 (08:53 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉತ್ತಮ ಅವಕಾಶಕ್ಕಾಗಿ ಕಾಯಲೇಬೇಕಾದ ಪರಿಸ್ಥಿತಿ ನಿಮ್ಮದು. ತಾಳ್ಮೆ ಪರೀಕ್ಷೆ ನಡೆದೀತು. ನ್ಯಾಯಾಲಯದ ಪ್ರಕ್ರಿಯೆಗಳು ವಿಳಂಬಗತಿಯಲ್ಲಿ ಸಾಗಲಿವೆ. ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟದ ಭೀತಿ ಎದುರಾದೀತು.

ವೃಷಭ: ವೃತ್ತಿರಂಗದಲ್ಲಿ ನಿಮಗಿದ್ದ ಕಂಟಕಗಳು ನಿವಾರಣೆಯಾಗಿ ನಿಮ್ಮ ಹಾದಿ ಸುಗಮವಾಗಲಿದೆ. ಕ್ರಿಯಾತ್ಮಕ ಕೆಲಸಗಳಿಂದ ಎಲ್ಲರ ಗಮನ ಸೆಳೆಯಲಿದ್ದೀರಿ. ಕೃಷಿಕರಿಗೆ ಲಾಭವೂ ಇಲ್ಲದ ನಷ್ಟವೂ ಇಲ್ಲದ ಸಮಸ್ಥಿತಿ.

ಮಿಥುನ: ಸರಕಾರಿ ಕೆಲಸಗಳು ಸುಗಮವಾಗಿ ನೆರವೇರಲಿವೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನೂತನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಕೆಲವು ದಿನ ಕಾಯುವುದು ಒಳಿತು. ತಾಳ್ಮೆಯಿರಲಿ.

ಕರ್ಕಟಕ: ಕಾರ್ಯರಂಗದಲ್ಲಿ ಹಿತಶತ್ರುಗಳ ಕಾಟದಿಂದ ನಿಮ್ಮ ಕೆಲಸಗಳು ಅರ್ಧಕ್ಕೇ ನಿಂತು ಹೋದೀತು. ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ಹೆಚ್ಚು ಶ್ರಮಪಡಬೇಕಾಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಿಂಹ: ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಹುಡುಕಿಕೊಂಡು ಬರಲಿವೆ. ಮನೆಗೆ ಅನಿರೀಕ್ಷಿತ ಅತಿಥಿಯ ಆಗಮನವಾದೀತು. ಹಿರಿಯರೊಂದಿಗೆ ವಾದ ವಿವಾದ ಬೇಡ. ಸಂಗಾತಿಯ ಸಲಹೆ ಉಪಯೋಗಕ್ಕೆ ಬರಲಿದೆ.

ಕನ್ಯಾ: ವ್ಯಾವಹಾರಿಕವಾಗಿ ನಿಮಗೆ ಮುನ್ನಡೆಯ ಯೋಗವಿದೆ. ಆದರೆ ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾದೀತು. ಕೌಟುಂಬಿಕವಾಗಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾದೀತು. ಕುಲದೇವರ ಪ್ರಾರ್ಥನೆ ಮಾಡಿ.

ತುಲಾ: ಸಾಂಸಾರಿಕವಾಗಿ ನಿಮ್ಮ ಮಾತೇ ನಿಮಗೆ ಶತ್ರುವಾದೀತು. ನೀವು ಹೇಳುವುದು ಒಂದು ಆಗುವುದು ಇನ್ನೊಂದು ಎಂಬ ಪರಿಸ್ಥಿತಿ ಎದುರಾದೀತು. ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹ ಹೈರಾಣಾದೀತು. ತಾಳ್ಮೆ, ಸಂಯಮವಿರಲಿ.

ವೃಶ್ಚಿಕ: ದಾಯಾದಿ ವ್ಯವಹಾರಗಳು ಕೋರ್ಟು ಮೆಟ್ಟಿಲೇರಲಿವೆ. ಹಿರಿಯರ ಸಲಹೆಗಳನ್ನು ಪಾಲಿಸಿದಲ್ಲಿ ಉತ್ತಮ. ಸರಕಾರಿ ವೃತ್ತಿಯವರಿಗೆ ಆದಾಯ ವೃದ್ಧಿಯಾಗಲಿದೆ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ.

ಧನು: ಪ್ರೀತಿ, ಪ್ರೇಮ ಸಂಬಂಧಗಳಲ್ಲಿ ಜಯ ಸಿಗಲಿದೆ. ನಿಮ್ಮದಲ್ಲದ ವಸ್ತುವಿನ ಮೇಲೆ ಅತಿಯಾದ ವ್ಯಾಮೋಹ ಬೇಡ. ವೈಯಕ್ತಿಕ ಕಷ್ಟ-ಸುಖಗಳನ್ನು ಸಂಗಾತಿ ಜೊತೆ ಹಂಚಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಮಕರ: ಕೆಲವೊಂದು ಅನಿರೀಕ್ಷಿತ ಘಟನೆಗಳು ನಿಮ್ಮ ದೈನಂದಿನ ಕೆಲಸಗಳ ಮೇಲೆ ಪ್ರಭಾವ ಬೀರಲಿವೆ. ಅನಿರೀಕ್ಷಿತವಾಗಿ ಹಳೆಯ ಮಿತ್ರರನ್ನು ಭೇಟಿಯಾಗುವ ಯೋಗವಿದೆ. ಸ್ವಯಂ ವೃತ್ತಿಯವರಿಗೆ ಕೊಂಚ ಚೇತರಿಕೆ ಕಂಡುಬಂದೀತು.

ಕುಂಭ: ಕಷ್ಟದ ಸಮಯದಲ್ಲಿ ಮಿತ್ರರು ಕೊಡುವ ಕೆಲವೊಂದು ಸಲಹೆಗಳು ನೆರವಿಗೆ ಬರಲಿವೆ. ಅವಿವಾಹಿತರಿಗೆ ಅಡೆತಡೆಗಳಿದ್ದರೂ ವಿವಾಹ ಕೂಡಿಬರಲಿದೆ. ಕೆಲಸ ಕಾರ್ಯದಲ್ಲಿ ವಿಳಂಬವಿದ್ದರೂ ಅಂತಿಮ ಜಯ ಸಿಗಲಿದೆ.

ಮೀನ: ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳನ್ನು ಹೊರಲು ಸಿದ್ಧರಾಗಬೇಕಾಗುತ್ತದೆ. ಸಂತಾನ ಹೀನ ದಂಪತಿಗಳು ದೇವರ ಮೊರೆ ಹೋಗಲಿದ್ದಾರೆ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯ ಯೋಗ ಕೂಡಿಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

ಮುಂದಿನ ಸುದ್ದಿ
Show comments