Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 22 ಏಪ್ರಿಲ್ 2021 (09:02 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಾರ್ಯಕ್ಷೇತ್ರದಲ್ಲಿ ಹಲವು ಅಡೆತಡೆಗಳು ಬಂದರೂ ಅಂತಿಮವಾಗಿ ಕಾರ್ಯಸಾಧನೆಯಾಗಲಿದೆ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾದೀತು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ನಿರೀಕ್ಷೆ.

ವೃಷಭ: ವ್ಯಾವಹಾರಿಕವಾಗಿ ಚೇತರಿಕೆಯ ವಾತಾವರಣವಿರಲಿದ್ದು, ಹೊಸ ಉತ್ಸಾಹ ಮೂಡಲಿದೆ. ಸಂಗಾತಿಯ ಕೆಲವೊಂದು ಸಲಹೆಗಳು ಉಪಯುಕ್ತವೆನಿಸಲಿದೆ. ಬೇಡವೆಂದು ಉಪೇಕ್ಷಿಸಿದ್ದ ವಸ್ತುಗಳು ಉಪಯೋಗಕ್ಕೆ ಬರಲಿವೆ.

ಮಿಥುನ: ನೂತನ ಬಾಂಧವ್ಯದಿಂದ ನಿಮ್ಮಲ್ಲಿ ಹೊಸ ಉತ್ಸಾಹದ ಜೊತೆಗೆ ಹೊಸ ಯೋಜನೆಗಳನ್ನು ದಾರಿಗೆ ತರಲು ಸಹಕಾರಿಯಾಗುವುದು. ಅತಿಥಿಗಳ ಆಗಮನವಾಗಲಿದ್ದು, ಧನವ್ಯಯವಾದೀತು. ಅನಗತ್ಯ ಚಿಂತೆ ಬೇಡ.

ಕರ್ಕಟಕ: ನೀವು ಕೈಗೊಳ್ಳಬೇಕೆಂದಿದ್ದ ಕೆಲಸಗಳನ್ನು ಅನಿವಾರ್ಯವಾಗಿ ಮುಂದೂಡಬೇಕಾಗಬಹುದು. ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾದೀತು. ಕೃಷಿಕರಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು. ತಾಳ್ಮೆ,ಸಂಯಮವಿರಲಿ.

ಸಿಂಹ: ನಿಮಗೆ ಒಳಿತು ಮಾಡುತ್ತೇನೆಂದು ಬರುವ ನಯವಂಚಕರ ಬಗ್ಗೆ ಎಚ್ಚರಿಕೆಯಿಂದಿರಿ. ಮಹಿಳೆಯರಿಂದ ಅಪವಾದದ ಭೀತಿ ಎದುರಾದೀತು. ನೀರು-ಬೆಂಕಿ ಜೊತೆ ಎಚ್ಚರಿಕೆಯಿಂದಿರುವುದು ಉತ್ತಮ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಮಕ್ಕಳ ವಿದ್ಯಾಭ್ಯಾಸ ಜೀವನದಲ್ಲಿ ಪ್ರಗತಿ ಕಂಡು ಸಂತೋಷವಾಗಲಿದೆ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಉದ್ಯೋಗ ಕ್ಷೇತ್ರದಲ್ಲಿ ಮುಂಬಡ್ತಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ತುಲಾ: ಕುಲದೇವರ ಆರಾಧನೆಯೊಂದಿಗೆ ದಿನದಾರಂಭ ಮಾಡಿದರೆ ನೀವು ಕೈಗೊಂಡಿರುವ ಕೆಲಸಗಳು ಯಶಸ್ವಿಯಾಗಲಿವೆ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಕ್ಕೀತು.

ವೃಶ್ಚಿಕ: ಉದ್ಯೋಗ ಸಂಬಂಧವಾದ ವಿಚಾರವಾಗಿ ಮೇಲಧಿಕಾರಿಗಳೊಂದಿಗೆ ಚರ್ಚಿಸಲಿದ್ದೀರಿ. ಸರಕಾರಿ ಉದ್ಯೋಗಿಗಳಿಗೆ ಕೊಂಚ ಬಿಡುವಿನ ಸಮಯ ಸಿಗಲಿದೆ. ಕೌಟುಂಬಿಕವಾಗಿ ನಿಮ್ಮ ನಿರ್ಧಾರಗಳು ಆಕ್ಷೇಪಕ್ಕೆ ಕಾರಣವಾದೀತು.

ಧನು: ನಿಮ್ಮ ಕೆಲವೊಂದು ಮಾತುಗಳು ಆತ್ಮೀಯರ ಮನಸ್ಸು ನೋಯಿಸೀತು. ಎಚ್ಚರಿಕೆಯಿರಲಿ. ವಿದ್ಯಾರ್ಥಿಗಳಿಗೆ ಅಭ್ಯಾಸದ ಕಡೆಗೆ ಗಮನ ಕಡಿಮೆಯಾಗಲಿದೆ. ಕೌಟುಂಬಿಕವಾಗಿ ಮನಸ್ತಾಪಗಳಿಗೆ ಅನುವು ಮಾಡಿಕೊಡಬೇಡಿ. ತಾಳ್ಮೆಯಿರಲಿ.

ಮಕರ: ಆಗಾಗ ಕಾಡುವ ಆರೋಗ್ಯ ಸಮಸ್ಯೆ ಚಿಂತೆಗೆ ಕಾರಣವಾದೀತು. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಕೀರ್ತಿ ಸಂಪಾದಿಸುವ ಯೋಗ. ಸ್ವ ಉದ್ಯೋಗಿಗಳು ಬಂಡವಾಳ ಹೂಡುವಾಗ ಎಚ್ಚರಿಕೆಯಿರಲಿ. ಖರ್ಚು ವೆಚ್ಚಕ್ಕೆ ಕಡಿವಾಣವಿರಲಿ.

ಕುಂಭ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಸಂಗಾತಿಯ ಬಹುದಿನಗಳ ಕನಸು ನನಸು ಮಾಡಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಿರಿ. ಚಿಂತೆ ಬೇಡ.

ಮೀನ: ನೀವು ಎಷ್ಟೇ ಎಚ್ಚರಿಕೆಯಿಂದಿದ್ದರೂ ವೃತ್ತಿರಂಗದಲ್ಲಿ ಕೆಲವೊಂದು ಅನಾಹುತಗಳಾಗುವ ಸಾಧ್ಯತೆಗಳಿವೆ. ಹಿರಿಯರ ಸಮಯೋಚಿತ ಸಲಹೆಗಳನ್ನು ಪಾಲಿಸಿದಲ್ಲಿ ಉತ್ತಮ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗ ಕೂಡಿಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ 5 ಪಕ್ಷಿಗಳು ಮನೆಗೆ ಬಂದರೆ ತಕ್ಷಣ ಓಡಿಸಿ. ಯಾಕೆ ಗೊತ್ತಾ?