Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 21 ಏಪ್ರಿಲ್ 2021 (09:03 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅತಿಯಾಗಿ ಕೆಲಸ ಮಾಡುವ ಉತ್ಸಾಹ ಕಂಡುಬರಲಿದೆ. ಆರ್ಥಿಕವಾಗಿ ಬೇಡದ ಖರ್ಚು ವೆಚ್ಚಗಳನ್ನು ಹತೋಟಿಗೆ ತರಲು ಯತ್ನಿಸುವಿರಿ. ಮಕ್ಕಳ ಭವಿಷ್ಯದ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ವೃಷಭ: ವೃತ್ತಿರಂಗದಲ್ಲಿ ಹೆಚ್ಚಿನ ಹೊಣೆಗಾರಿಕೆ ನಿಮ್ಮ ಹೆಗಲಿಗೇರಲಿದೆ. ವೈಯಕ್ತಿಕ ವಿಚಾರಗಳನ್ನು ತಿಳಿಯಲು ನೆರೆಹೊರೆಯವರು ಕಾದಿರುತ್ತಾರೆ. ತಾಳ್ಮೆ, ಸಂಯವಿರಲಿ. ಕಾರ್ಯನಿಮಿತ್ತ ಕಿರು ಓಡಾಟ ನಡೆಸಲಿದ್ದೀರಿ.

ಮಿಥುನ: ಯೋಗ್ಯ ವಯಸ್ಕರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಸಾಂಸಾರಿಕವಾಗಿ ಕೆಲವೊಂದು ವಿಚಾರಗಳು ನಿಮ್ಮನ್ನು ಚಿಂತೆಗೀಡುಮಾಡಲಿದೆ.

ಕರ್ಕಟಕ: ವ್ಯಾವಹಾರಿಕವಾಗಿ ನಿಮ್ಮ ಪ್ರಯತ್ನಬಲಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ.

ಸಿಂಹ: ಶುಭ ಕಾರ್ಯಗಳಿಗೆ ಚಾಲನೆ ನೀಡಲು ಇದು ಸಕಾಲ. ಗೃಹ ನಿರ್ಮಾಣ ಕಾರ್ಯಗಳಿಗೆ ಕೈ ಹಾಕಲಿದ್ದೀರಿ. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಂಗಾತಿಯೊಂದಿಗೆ ಪರಾಮರ್ಶಿಸಿ. ಕುಲದೇವರ ಪ್ರಾರ್ಥನೆ ಮಾಡುವುದನ್ನು ಮರೆಯದಿರಿ.

ಕನ್ಯಾ: ನಿಮ್ಮ ಕಷ್ಟಗಳಿಗೆ ಸಂಗಾತಿಯು ಹೆಗಲುಕೊಡಲಿದ್ದಾರೆ. ಮಕ್ಕಳಿಂದ ಸಂತಸ ಪಡೆಯಲಿದ್ದೀರಿ. ಹಿರಿಯರ ದೇಹಾರೋಗ್ಯ ಚಿಂತೆಗೀಡುಮಾಡೀತು. ಉದ್ಯೋಗ ಕ್ಷೇತ್ರದಲ್ಲಿ ದಿಡೀರ್ ಸ‍್ಥಾನ ಪಲ್ಲಟವಾದೀತು.

ತುಲಾ: ಎಷ್ಟೋ ದಿನಗಳಿಂದ ಅಂದುಕೊಂಡ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಜೀವನದಲ್ಲಿ ಸಿಹಿ-ಕಹಿ ಎರಡನ್ನೂ ಸಮನಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಗೊಳ್ಳಲಿದೆ.

ವೃಶ್ಚಿಕ: ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭವಾಗಲಿದೆ. ಜೀವನದಲ್ಲಿ ಅಭಿವೃದ್ಧಿಯಾಗಬೇಕಾದರೆ ಕೆಲವೊಂದನ್ನು ತ್ಯಾಗ ಮಾಡಲೇಬೇಕಾಗುತ್ತದೆ. ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡದಂತೆ ಎಚ್ಚರಿಕೆ ವಹಿಸಿ. ಚಿಂತೆ ಬೇಡ.

ಧನು: ನಿಮ್ಮ ಪಾಲಿನ ಕೆಲಸ ಮುಗಿಸಲು ತರಾತುರಿ ಕಂಡುಬರಲಿದೆ. ರಾಗ-ಧ್ವೇಷಗಳನ್ನು ಬಿಟ್ಟು ವಿಶಾಲ ಮನೋಭಾವದಿಂದ ಯೋಚನೆ ಮಾಡಿದರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಅನಗತ್ಯ ವಾದ ವಿವಾದ ಬೇಡ.

ಮಕರ: ಸಾಮಾಜಿಕವಾಗಿ ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ವೈಯಕ್ತಿಕವಾಗಿ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಬಂಧುಮಿತ್ರರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಹಿರಿಯರಿಗೆ ದಾನ ಧರ್ಮಾದಿಗಳಿಂದ ನೆಮ್ಮದಿ

ಕುಂಭ: ಸಂಗಾತಿಯ ಕೆಲವೊಂದು ಮಾತುಗಳು ನಿಮಗೆ ಹಿಡಿಸದೇ ಹೋಗಬಹುದು. ಸಾಂಸಾರಿಕವಾಗಿ ಸಾಮರಸ್ಯದ ಕೊರತೆ ಉಂಟಾದೀತು. ಹಿರಿಯರ ಆರೋಗ್ಯ ನಿಮಿತ್ತ  ಆಸ್ಪತ್ರೆಗೆ ಅಲೆದಾಡಬೇಕಾದೀತು. ದೇವತಾ ಪ್ರಾರ್ಥನೆ ಮಾಡಿ.

ಮೀನ: ಆರ್ಥಿಕ ಅಡಚಣೆಗಳು ದೂರವಾಗಿ ಹಂತ ಹಂತವಾಗಿ ಅಭಿವೃದ್ಧಿ ಕಂಡುಬರಲಿದೆ. ಮನೆಯಲ್ಲಿ ಬಂಧುಮಿತ್ರರ ಆಗಮನದಿಂದ ಸಂಭ್ರಮದ ವಾತಾವರಣವಿರಲಿದೆ. ದೂರದ ಸಂಬಂಧಿಗಳಿಂದ ನಿಮ್ಮ ವ್ಯವಹಾರಕ್ಕೆ ಅನುಕೂಲವಾದೀತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಷ್ಣು ದಶಾವತಾರ ಸ್ತೋತ್ರ ಮತ್ತು ಓದುವುದರ ಫಲವೇನು ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸಂತಾನ ಗಣಪತಿ ಮಂತ್ರ ಕನ್ನಡದಲ್ಲಿ ಇಲ್ಲಿದೆ: ಈ ಸಮಸ್ಯೆಯಿದ್ದವರು ತಪ್ಪದೇ ಓದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Durga Mantra: ದುರ್ಗಾಷ್ಟಕಮ್ ಸ್ತೋತ್ರಂ ಪ್ರತಿನಿತ್ಯ ಪಠಿಸಿ

ಮುಂದಿನ ಸುದ್ದಿ
Show comments