ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 24 ಮಾರ್ಚ್ 2021 (08:55 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 

ಮೇಷ: ನಿಮ್ಮ ಮನಸ್ಸಿನ ಮಾತುಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ನೆರೆಹೊರೆಯವರಿಂದ ನಿಮ್ಮ ಕೆಲಸಗಳಿಗೆ ಸಹಾಯವಾಗಲಿದೆ. ಆದರೆ ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ.

ವೃಷಭ: ವೃತ್ತಿರಂಗದಲ್ಲಿ ನಿಮ್ಮ ಬೆನ್ನ ಹಿಂದೆ ಪಿತೂರಿ ನಡೆಸುತ್ತಿದ್ದವರ ಸಂಚುಗಳು ಬಯಲಾಗಲಿವೆ. ಅನಗತ್ಯ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಪ್ರೇಮಿಗಳಿಗೆ ಮನೆಯವರ ಸಮ್ಮತಿ ಸಿಗುವುದು. ಶುಭ ಮಂಗಲ ಕಾರ್ಯಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಮಿಥುನ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಉಂಟಾಗುವುದು. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನಗಳು ವೃದ್ಧಿಯಾಗಲಿದೆ. ಮಾನಸಿಕವಾಗಿ ಋಣಾತ್ಮಕ ಚಿಂತೆಗಳಿಂದ ಮುಕ್ತಿಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ಮನಸ್ಸಿನ ಭಾವನೆಗಳು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ವೈಯಕ್ತಿಕ ಸಮಸ್ಯೆಗಳನ್ನು ಇತರರಿಗೆ ಹೇಳಿಕೊಂಡರೆ ಪರಿಹಾರ ಸಿಗಲಿದೆ. ಧರ್ಮ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿಯಾಗುವುದು. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ಉತ್ತಮ ಆಲೋಚನೆಗಳಿಗೆ ತಕ್ಕ ಮನ್ನಣೆ ಸಿಗಲಿದೆ. ಕೌಟುಂಬಿಕವಾಗಿ ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಶುಭ ಮಂಗಲ ಕಾರ್ಯನಿಮಿತ್ತ ಸಂಚಾರ ಮಾಡಲಿದ್ದೀರಿ.

ಕನ್ಯಾ: ನಿಮ್ಮ ಭಾವನೆಯನ್ನು ಸಂಗಾತಿಗೆ ಅರ್ಥ ಮಾಡಿಸಲಿದ್ದೀರಿ. ಇದರಿಂದ ಸಾಂಸಾರಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮನೆಯ ಹಿರಿಯ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ.

ತುಲಾ: ಕೌಟುಂಬಿಕವಾಗಿ ಇದುವರೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿದೆ. ಮನೆಯ ಹಿರಿಯ ಸದಸ್ಯರಿಗೆ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಹಳೆಯ ಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ಕುಲದೇವರ ಪ್ರಾರ್ಥನೆ ಮಾಡಿ.

ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಸಂಭಾವ್ಯ ಅಪಾಯ ಎದುರಿಸಲು ಸಜ್ಜಾಗಿರಿ. ಸರಕಾರಿ ನೌಕರರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯ ಯೋಗವಿದೆ. ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ.

ಧನು: ಮನಸ್ಸಿನಲ್ಲಿ ಕಾಡುತ್ತಿರುವ ಕೆಲವೊಂದು ವಿಚಾರಗಳಿಗೆ ಆಪ್ತರೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಲಿದ್ದಾರೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಮುನ್ನಡೆ ಸಿಕ್ಕೀತು. ಆದರೆ ಹೊಸ ವ್ಯವಹಾರಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಒಳಿತು.

ಮಕರ: ಆರ್ಥಿಕವಾಗಿ ಚೇತರಿಕೆ ಕಂಡುಬರಲಿದ್ದು, ಹೊಸ ವ್ಯವಹಾರಗಳ ಬಗ್ಗೆ ಯೋಚನೆಗಳು ಮೂಡಲಿವೆ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ಮಕ್ಕಳ ಬೇಡಿಕೆ ಪೂರೈಸಲು ಖರ್ಚು ವೆಚ್ಚಗಳಾಗಲಿವೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಕುಂಭ: ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಮಕ್ಕಳ ವಿಚಾರದಲ್ಲಿ ಸಂತಸದ ವಾರ್ತೆ ಕೇಳಿಬರಲಿದೆ. ಸಾಂಸಾರಿಕವಾಗಿ ಬಂಧು ಮಿತ್ರರ ಆಗಮನದಿಂದ ಮನಸ್ಸಿಗೆ ಸಂತಸವಾಗಲಿದೆ. ಶುಭವಾರ್ತೆ ಕೇಳಿಬರಲಿದೆ.

ಮೀನ: ದುಡುಕಿ ಮಾತನಾಡಿ ಪಶ್ಚಾತ್ತಾಪಪಡುವ ಪರಿಸ್ಥಿತಿ ಎದುರಾದೀತು. ತಾಳ್ಮೆ, ಸಂಯಮ ಅಗತ್ಯವಿದೆ. ನಿಮ್ಮ ಜೀವನವೇ ಬದಲಾವಣೆಯಾಗುವಂತಹ ಘಟನೆಗಳು ನಡೆದೀತು. ಕಾರ್ಯಾನುಕೂಲಕ್ಕಾಗಿ ಕೆಲವು ಹೊಂದಾಣಿಕೆ ಅಗತ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಓದಲೇಬೇಕಾದ ಹನುಮಾನ್ ಸುಪ್ರಭಾತಮ್

ಲಲಿತಾ ಪಂಚರತ್ನಂ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ನಿಮ್ಮ ಈ ತಪ್ಪು ದಾರಿದ್ರ್ಯಕ್ಕೆ ಕಾರಣವಾಗಬಹುದು

ದೇವಿ ಅಪಾರಜಿತ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments