Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 12 ಮಾರ್ಚ್ 2021 (08:39 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ಧಾರಿಗಳು ಹೆಗಲಿಗೇರಲಿವೆ. ಮೇಲಧಿಕಾರಿಗಳ ಸಲಹೆ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಕೌಟುಂಬಿಕವಾಗಿ ಬಂಧು ಮಿತ್ರರ ಆಗಮನದಿಂದ ಮನಸ್ಸಿಗೆ ಸಂತೋಷ ಸಿಗಲಿದೆ.

ವೃಷಭ: ನಿಮ್ಮ ಸಂತೋಷ ನಿಮ್ಮ ಕೈಯಲ್ಲೇ ಇದೆ. ಇತರರೊಂದಿಗೆ ಹಿತ ಮಿತವಾದ ವರ್ತನೆ ಇದ್ದರೆ ಉತ್ತಮ. ವೃತ್ತಿರಂಗದಲ್ಲಿ ಬೇರೆಯವರ ಅಭಿಪ್ರಾಯಗಳಿಗೆ ಕಿವಿಗೊಡಿ. ಆರ್ಥಿಕವಾಗಿ ಖರ್ಚು ವೆಚ್ಚಗಳು ನಿಯಂತ್ರಣಕ್ಕೆ ಬರಲಿವೆ.

ಮಿಥುನ: ನಿಮ್ಮ ಮನಸ್ಸಿಗೆ ಹಿಡಿಸಿದ ಕೆಲಸ ಮಾಡಲು ಮುಂದಾಗಲಿದ್ದೀರಿ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.

ಕರ್ಕಟಕ: ಇನ್ನೊಬ್ಬರ ಮೇಲೆ ಅತಿಯಾದ ನಿರೀಕ್ಷೆ ನಿರಾಸೆಯಲ್ಲಿ ಕೊನೆಗೊಂಡೀತು. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ಮೈಮೇಲೆ ಇಲ್ಲದ ಜವಾಬ್ಧಾರಿಗಳನ್ನು ಹೊತ್ತುಕೊಂಡು ಅಧ್ವಾನವಾದೀತು. ಎಚ್ಚರಿಕೆಯಿಂದ ವ್ಯವಹರಿಸಿ. ಇಷ್ಟಮಿತ್ರರ ಜೊತೆಗೆ ಪ್ರವಾಸ ಮಾಡುವ ಯೋಗವಿದೆ. ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.

ಕನ್ಯಾ: ಎಷ್ಟೇ ಒಳ್ಳೆಯದು ಮಾಡಲು ಹೋದರೂ ಬೇರೆಯವರು ನಿಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುವ ಸಂದರ್ಭ ಎದುರಾದೀತು. ಮಾನಸಿಕವಾಗಿ ನಿರುತ್ಸಾಹ ಕಾಡದಂತೆ ಎಚ್ಚರಿಕೆ ವಹಿಸಿ. ಕಿರು ಸಂಚಾರ ಮಾಡಲಿದ್ದೀರಿ.

ತುಲಾ: ವೃತ್ತಿರಂಗದಲ್ಲಿ ಮೇಲಧಿಕಾರಿಗಳೊಂದಿಗೆ ಸಂಘರ್ಷಗಳು ಎದುರಾದೀತು. ಹೊಂದಾಣಿಕೆಯಿಂದ ನಡೆದುಕೊಂಡರೆ ಉತ್ತಮ. ವ್ಯಾಪಾರಿ ವರ್ಗದವರು ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಇಷ್ಟದೇವರ ಪ್ರಾರ್ಥನೆಯೊಂದಿಗೆ ಪ್ರಾರ್ಥನೆ ಮಾಡಿದರೆ ಎಲ್ಲವೂ ಶುಭವಾಗುವುದು. ಭವಿಷ್ಯದ ದೃಷ್ಟಿಯಿಂದ ಉಳಿತಾಯದ ಯೋಜನೆ ಹಾಕಿಕೊಳ್ಳಲಿದ್ದೀರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಧನು: ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಮನಸ್ಸು ಹಾತೊರೆಯಲಿದೆ. ಸಿಗದ ವಸ್ತು, ವ್ಯಕ್ತಿಗಳ ಬಗ್ಗೆ ಕೊರಗುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗ ಕೂಡಿಬರಲಿದೆ.

ಮಕರ: ನಿಮ್ಮ ಬಹುದಿನಗಳ ಕನಸು ನನಸು ಮಾಡಲು ಮುಂದಾಗಲಿದ್ದೀರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಗಾತಿಯೊಂದಿಗೆ ಪರಾಮರ್ಶಿಸಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಕುಂಭ: ವೃತ್ತಿರಂಗದಲ್ಲಿ ನಿಮ್ಮ ನಿರ್ಧಾರಗಳಿಗೆ ಬೆಲೆ ಸಿಗಲಿದೆ. ಕೆಳ ಹಂತದ ನೌಕರರಿಗೆ ಮುಂಬಡ್ತಿ ಯೋಗ ಕೂಡಿಬರುವುದು. ಹಿರಿಯರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಡಿಬಂದೀತು. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯಲಿದ್ದೀರಿ.

ಮೀನ: ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿಡದೇ ಇದ್ದರೆ ಮುಂದೆ ನಿರಾಸೆ ಅನುಭವಿಸಬೇಕಾದೀತು. ವ್ಯಾವಹಾರಿಕವಾಗಿ ಮುನ್ನಡೆಯಿರಲಿದೆ. ಸರಕಾರಿ ಅಧಿಕಾರಿಗಳಿಗೆ ಕಾರ್ಯದೊತ್ತಡ ಕಡಿಮೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವಸ್ತುಗಳನ್ನು ಯಾವತ್ತು ಜೊತೆಯಾಗಿ ಇಡಬೇಡಿ, ದಟ್ಟ ದಾರಿದ್ರ್ಯ ಕಾಡುತ್ತದೆ